Hosapete: ಎಸಿ ವಿಷಾನಿಲ ಸೋರಿಕೆಯಿಂದ ಮನೆಗೆ ಬೆಂಕಿ: ದಟ್ಟ ಹೊಗೆಯಿಂದ ಹೊರಬರಲಾರದೇ ನಾಲ್ವರ ಸಾವು

By Girish Goudar  |  First Published Apr 8, 2022, 9:00 AM IST

*  ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ನಡೆದ ಘಟನೆ
*  ರಾಘವೇಂದ್ರ ಶೆಟ್ಟಿ ಎಂಬುವರ ಮನೆಯಲ್ಲಿ ನಡೆದ ಅವಘಡ 
*  ಈ ಸಂಬಂಧ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು 
 


ವಿಜಯನಗರ(ಏ.08):  ತಾನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವ ಮಾತಿನಂತೆ. ಸ್ಥಿತಿವಂತರು, ಊರಲ್ಲಿ ನಾಲ್ಕ ಜನರಿಗೆ ಸಹಾಯ ಮಾಡೋ ಒಳ್ಳೆಯ ಮನಸ್ಥಿತಿ ಇರೋರಿಗೆ ಇಂಥಹ ಸಾವು ಬರೋದು ನಾಯವೇ ಎನ್ನುವ ಗ್ರಾಮಸ್ಥರ ಮಾತು ಕರುಳು ಕಿತ್ತು ಬರುವಂತೆ ಇತ್ತು. ಹೊಸಪೇಟೆ(Hosapete) ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ಎಸಿ ವಿಷಾನಿಲ ಸೋರಿಕೆ ಅವಘಡಕ್ಕೆ ಒಂದೇ ಕುಟುಂಬದ ನಾಲ್ವರು ಬಲಿಯಾಗಿದ್ದು ಇಡೀ ಗ್ರಾಮವೇ ಮೌನಕ್ಕೆ ಶರಣಾಗಿದೆ.

ಎಸಿಯಲ್ಲಿ ಇದ್ದ ಜವರಾಯ 

Latest Videos

undefined

ವಿಷ ಅನಿಲ ಸೋರಿಕೆಯೋ ಅಥವಾ ಬೆಂಕಿ ಹತ್ತಿಕೊಂಡ ಹೊಗೆಗೆ ಉಸಿರುಗಟ್ಟಿತೋ ಗೊತ್ತಿಲ್ಲ. ಉಸಿರುಗಟ್ಟಿ ಪತಿ ಪತ್ನಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.‌ ಮರಿಯಮ್ಮ ಹಳ್ಳಿಯ ರಾಘವೇಂದ್ರ ಶೆಟ್ಟಿ ಎನ್ನುವವರ ಮನೆಯಲ್ಲಿ  ಈ ಅವಘಡ ನಡೆದಿದೆ. 

ಎಂದಿನಂತೆ ರಾಘವೇಂದ್ರ ಶೆಟ್ಟಿ ಅವರ ಕುಟುಂಬ ಮನೆಯಲ್ಲಿ ‌ರಾತ್ರಿ ಮನೆಯಲ್ಲಿ ಮಲಗಿದ್ದಾರೆ(Sleep). ಆದ್ರೇ ಇದ್ದಕ್ಕಿದ್ದಂತೆ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾದ ಹಿನ್ನೆಲೆ ನಿದ್ರೆಯಲ್ಲಿದ್ದ ರಾಘವೇಂದ್ರ ಶೆಟ್ಟಿ ಅವರ ಪತ್ನಿ ರಾಜಶ್ರೀ ರವರು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ಆದರೆ ಅವರ ಮಗ ವೆಂಕಟ್ ಪ್ರಶಾಂತ್ (42) ಸೊಸೆ  ಡಿ ಚಂದ್ರಕಲಾ (38 )ವರ್ಷ,  ಮೊಮಕ್ಕಳಾದ ಎಚ್. ಎ ಅದ್ವಿಕ್( 16), ಪ್ರೇರಣಾ,( 8 ) ಹೊರಬರಲಾಗದೇ ಸಾವನ್ನಪ್ಪಿದ್ದಾರೆ. 

Mandya: ಆದಿಚುಂಚನಗಿರಿ ಮಠಕ್ಕೆ ಸೇರಿದ ನೂತನ ಕಟ್ಟಡದಲ್ಲಿ ಬೆಂಕಿ ಅವಘಡ

ಈ ಬಗ್ಗೆ ಮರಿಯಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. 

ಕಾರಣ ಹುಡುಕುತ್ತಿರೋ ಪೊಲೀಸರು 

ಇನ್ನೂ ಬೆಳಿಗ್ಗೆ ನಾಲ್ಕು ಗಂಟೆಗೆ ಘಟನೆ ಬಗ್ಗೆ ಮಾಹಿತಿ ದೊರೆತ ಕೂಡಲೇ ಮರಿಯಮ್ಮನ ಹಳ್ಳಿ ‌ಪೊಲೀಸರು ಅಗ್ನಿಶಾಮಕ ದಳದೊಂದಿಗೆ ಶೆಟ್ರು ಮನೆಗೆ ಹೋಗಿ ಬೆಂಕಿ ನಂದಿಸೋ ಕೆಲಸ ಮಾಡಿದ್ದಾರೆ. ಮೇಲ್ನೋಟಕ್ಕೆ ಎಸಿಯ ವಿಷಾನಿಲ ಸೋರಿ ಕಾರಣ ಎನ್ನಲಾಗ್ತಿದೆಯಾದ್ರೂ ಸೊರಿಕೆಗೆ ಕಾರಣವೇನು? ಸೋರಿಕೆಯಾದ ಬಳಿಕ ಸ್ಟೋಟ ಹೇಗಾಯ್ತು, ಬೆಂಕಿ ಹೇಗೆ ಹತ್ತಿಕೊಂಡಿತು ? ಎನ್ನುವದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕ್ತಿದ್ದಾರೆ. ಸದ್ಯಕ್ಕೆ ಮನೆಯ ಬಳಿಯೇ ಮುಕ್ಕಾಂ ಹೂಡಿರೋ ಪೊಲೀಸರು(Police) ಪರಿಶೀಲನೆ ನಡೆಸುತ್ತಿದ್ದಾರೆ.

"

ಆಸ್ಪತ್ರೆಗೆ ಬಂದ ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ 

ಮೃತದೇಹವನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ ಬಳಿಕ ತಹಸೀಲ್ದಾರ್ ವಿಶ್ವಜಿಜ್ ಮೆಹ್ತಾ ಭೇಟಿ ನೀಡಿ ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ.  ಇನ್ನೂ ಇದೇ ಊರಿನವರಾದ ಪದ್ಮಶ್ರೀ ಪುರಸ್ಕೃತ ಮಾತಾ ಮಂಜಮ್ಮ ಜೋಗತಿ(Manjamma Jogati) ಅಗಮಿಸಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. 

click me!