ಐತಿಹಾಸಿಕ ಬಾಗಲಕೋಟೆ ಹೋಳಿ ಹಬ್ಬ: ನಾಲ್ಕು ದಿನ ಬಣ್ಣದಲ್ಲಿ ಮಿಂದೇಳುವ ಮುಳುಗಡೆ ನಗರಿ!

By Kannadaprabha News  |  First Published Mar 4, 2020, 1:21 PM IST

ಶಾಂತಿ, ಸಾಮರಸ್ಯದಿಂದ ಹೋಳಿ ಆಚರಿಸಿ| ಮಾ.8ರ ಸಂಜೆ 7 ಗಂಟೆಗೆ ಹೋಳಿ ಆಚರಣೆಯ ಉದ್ಘಾಟನೆ | 9ರಂದು ಕಾಮದಹನ|ಇಡೀ ರಾಜ್ಯದಲ್ಲಿಯೇ ಅತೀ ಅದ್ಧೂರಿಯಾಗಿ ಹೋಳಿ ಆಚರಣೆ ನಡೆಯುವುದು ಅದು ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ|


ಬಾಗಲಕೋಟೆ(ಮಾ.04): ಪರಂಪರಾಗತ ಬಾಗಲಕೋಟೆಯ ಹೋಳಿ ಆಚರಣೆಯ ಕುರಿತು ಜಿಲ್ಲಾಡಳಿತಕ್ಕೆ ಹೋಳಿ ಆಚರಣೆ ಸಮಿತಿಯ ಪದಾಧಿಕಾರಿಗಳು ಪ್ರಸಕ್ತ ವರ್ಷದ ಹೋಳಿ ಆಚರಣೆಯ ಕುರಿತು ಮಂಗಳವಾರ ಮಾಹಿತಿ ಒದಗಿಸಿದ್ದಾರೆ. 

ಮಾರ್ಚ್‌ 8 ರ ಸಂಜೆ 7 ಗಂಟೆಗೆ ಹೋಳಿ ಆಚರಣೆಯ ಉದ್ಘಾಟನೆ ನಡೆಯಲಿದೆ. 9 ರಂದು ನಸುಕಿನ ಜಾವ ಕಿಲ್ಲಾದಲ್ಲಿ ಕಾಮದಹನ, ನಂತರ ನಗರದ ಹಳಪೇಟೆ, ಜೈನಪೇಟೆ, ಕೌಲಪೇಟೆ, ಹೊಸಪೇಟೆ, ವೆಂಕಟಪೇಟೆ ಹಾಗೂ ವಿದ್ಯಾಗಿರಿ ನವನಗರಗಳಲ್ಲಿ ರಾತ್ರಿವರೆಗೆ ಕಾಮದಹನ ನಡೆಯುತ್ತದೆ ಎಂದು ತಿಳಿಸಿದರು. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಾರ್ಚ್ 10  ಕಿಲ್ಲಾ ಓಣಿಯ ಬಣ್ಣದ ಬಂಡಿಗಳ ಆಟ, 11  ಹಳಪೇಟೆ, ಜೈನಪೇಟೆ ಹಾಗೂ ವೆಂಕಟಪೇಟೆ ಓಣಿಗಳ ಬಣ್ಣದ ಬಂಡಿಗಳ ಆಟ, 12ರಂದು ಹೊಸಪೇಟೆ ಓಣಿಯ ಬಣ್ಣದ ಬಂಡಿಗಳ ಆಟ, 13 ರಂದು ವಿದ್ಯಾಗಿರಿ ಮತ್ತು ನವನಗರದ ಭಾಗದ ಬಣ್ಣದ ಬಂಡಿಗಳ ಆಟ ನಡೆಯುತ್ತದೆ ಎಂದು ಹೇಳಿದರು. 

ಈ ವರ್ಷದಿಂದ ಪ್ರಾರಂಭಿಸಲು ವಿದ್ಯಾಗಿರಿ ಮತ್ತು ನವನಗರದ ಭಾಗದ ಹಿರಿಯರು, ಯುವಕರು ಮತ್ತು ವ್ಯಾಪಾರಸ್ಥರ ಸಭೆಯನ್ನು ವಿದ್ಯಾಗಿರಿಯಲ್ಲಿ ಮಾ.2 ರಂದು ರಂದು ನಡೆಸಲಾಯಿತು. ಕಳೆದ ನಾಲ್ಕೈದು ವರ್ಷಗಳಿಂದ ವಿದ್ಯಾಗಿರಿ ಮತ್ತು ನವನಗರದ ಭಾಗದ ಜನರು ಈ ಭಾಗದಲ್ಲಿ ಬಣ್ಣದ ಬಂಡಿಗಳನ್ನು ಮಾಡಲು ಆಚರಣಾ ಸಮಿತಿಯ ಮುಂದೆ ಬೇಡಿಕೆ ಇಡುತ್ತಲೇ ಬಂದಿದ್ದರು. ಆದರೆ ಈ ಬಾರಿಯ ಸಭೆಯಲ್ಲಿ ನಾಲ್ಕನೇ ದಿನದ ಬಣ್ಣದ ಬಂಡಿಗಳ ಆಟ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿ ಕೊಟ್ಟರು.

ಬಾಗಲಕೋಟೆಯ ಹೋಳಿ ಹಬ್ಬಕ್ಕೆ ತನ್ನದೆಯಾದ ಇತಿಹಾಸ ಇದೆ. ಇಡೀ ರಾಜ್ಯದಲ್ಲಿಯೇ ಅತೀ ಅದ್ಧೂರಿಯಾಗಿ ಹೋಳಿ ಆಚರಣೆ ನಡೆಯುವುದು ಅದು ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ. ಹಬ್ಬ ಇನ್ನೂ ಐದಾರು ದಿನಗಳು ಇರುವಾಗಲೇ ಹಲಗೆಯ ಸದ್ದು ಜೋರಾಗಿದೆ. ಹೋಳಿ ಹಬ್ಬದಂದು ನಾನಾ ಕಾರ್ಯಕ್ರಮ ಆಯೋಜನೆ ಮಾಡಲು ಸಂಘ-ಸಂಸ್ಥೆಗಳು ತಯಾರಿ ನಡೆಸಿವೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೂಡ ಈಗಾಗಲೇ ಹೋಳಿ ಹಬ್ಬದ ಸಲುವಾಗಿ ಪೂರ್ವ ಸಿದ್ಧತಾ ಸಭೆ ನಡೆಸಿ ಶಾಂತ ರೀತಿಯಿಂದ ಹೋಳಿ ಆಚರಣೆಗೆ ಕರೆ ನೀಡಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಜಿಲ್ಲೆಯಲ್ಲಿ ಹೋಳಿ ಮತ್ತೆ ಕಳೆಗಟ್ಟಲಿದೆ.

click me!