ಧಾರವಾಡದಲ್ಲಿ ಪೊಲೀಸರಿಂದಲೇ ಜೂಜಾಟ..!

Suvarna News   | Asianet News
Published : Nov 15, 2020, 02:33 PM IST
ಧಾರವಾಡದಲ್ಲಿ ಪೊಲೀಸರಿಂದಲೇ ಜೂಜಾಟ..!

ಸಾರಾಂಶ

ನಾಲ್ವರು ಕಾನ್ಸಟೇಬಲ್‌ಗಳ ಅಮಾನತು| ಕಳೆದ ಮೂರು ದಿನಗಳ ಹಿಂದೆ ದಾಳಿ ನಡೆಸಿದ್ದ ಡಿವೈಎಸ್ಪಿ ನಾಯಕ| ದಾಳಿಯ ವೇಳೆ ಬಯಲಿಗೆ ಬಂದಿದ್ದ ಪೊಲೀಸರ ಜೂಜಾಟ ಪ್ರಕರಣ| ಬಿಜೆಪಿ ಮುಖಂಡನ ಜೊತೆ ಸೇರಿ ಜೂಜಾಟದಲ್ಲಿ ತೊಡಗಿದ್ದ ಪೊಲೀಸರು|

ಧಾರವಾಡ(ನ.15): ಜೂಜಾಟದಲ್ಲಿ ತೊಡಗಿದವರ ಪೈಕಿ ನಾಲ್ವರು ‌ಕಾನ್ಸಟೇಬಲ್‌ಗಳನ್ನ ಅಮಾನತು ಮಾಡಿದ ಘಟನೆ ನಗರದಲ್ಲಿ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಡಿವೈಎಸ್ಪಿ ನಾಯಕ್‌ ಅವರು ದಾಳಿ ಮಾಡಿದ ವೇಳೆ ಪೊಲೀಸರ ಜೂಜಾಟ ಬಯಲಿಗೆ ಬಂದಿತ್ತು. ಗರಗ, ಧಾರವಾಡ ಗ್ರಾಮೀಣ ಠಾಣೆ ಹಾಗೂ ಡಿಎಆರ್ ಪೊಲೀಸರು ಸೇರಿ ಜೂಜಾಟ ನಡೆಸಿದ್ದರು. 

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್ಪಿ ಕೃಷ್ಣಕಾಂತ ಅವರು ಜೂಜಾಟದಲ್ಲಿ ತೊಡಗಿದ್ದ ಮಂಜುನಾಥ ಬಾಗವಿ, ಆತ್ಮಾನಂದ ಬೆಟಗೇರಿ, ಇಸ್ಮಾಯಿಲ್ ಸಯ್ಯದನವರ್ ಹಾಗೂ ಮೈಯುದ್ದೀನ ಮುಲ್ಲಾ ಅವರನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಧಾರವಾಡ ತಾಲೂಕಿನ ಗರಗ ಗ್ರಾಮದ ಬಿಜೆಪಿ ಮುಖಂಡನ ಜೊತೆ ಸೇರಿ ಈ ಮೂವರು ಪೊಲೀಸರು ಜೂಜಾಟದಲ್ಲಿ ತೊಡಗಿದ್ದರು.

 ನಾವೇನು ಕಮ್ಮಿ... ಜೂಜಾಡುತ್ತಿದ್ದ ಉಪ್ಪಾರಪೇಟೆ ಪೊಲೀಸರು ಸಸ್ಪೆಂಡ್!

ಜೂಟಾಟವನ್ನ ತಡೆಯಬೇಕಾದ ಪೊಲೀಸರು ಇಂತಹ ಕೃತ್ಯದಲ್ಲಿ ಭಾಗಿಯಾಗಿರುವು ಮಾತ್ರ ವಿಪರ್ಯಾಸವೇ ಸರಿ. ಇಂತಹ ಪೊಲೀಸರಿಂದ ಇಡೀ ಇಲಾಖೆಗೆ ತಪ್ಪು ಸಂದೇಶ ರವಾನೆಯಾಗಲಿದೆ ಎಂದು ಸಾರ್ವಜನಿಕರ ಮಾತಾಗಿದೆ. 
 

PREV
click me!

Recommended Stories

ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 15 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!
ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!