ವಿನಯ್ ಕುಲಕರ್ಣಿಗಿಲ್ಲ ದೀಪಾವಳಿ ಹಬ್ಬದ ಸಂಭ್ರಮ: ಜೈಲೂಟವೇ ಗತಿ..!

Suvarna News   | Asianet News
Published : Nov 15, 2020, 01:50 PM ISTUpdated : Nov 15, 2020, 04:05 PM IST
ವಿನಯ್ ಕುಲಕರ್ಣಿಗಿಲ್ಲ ದೀಪಾವಳಿ ಹಬ್ಬದ ಸಂಭ್ರಮ: ಜೈಲೂಟವೇ ಗತಿ..!

ಸಾರಾಂಶ

ದೀಪಾವಳಿ ಹಬ್ಬದಂದು ಜೈಲಿನಲ್ಲಿ ಕಾಲ ಕಳೆಯುತ್ತಿರುವ ವಿನಯ್‌ ಕುಲಕರ್ಣಿ| ಧಾರವಾಡ ಜಿ.ಪಂ.ಸದಸ್ಯ ಯೋಗೇಶ್‌ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ| ಜೈಲಿನಲ್ಲಿದ್ದುಕೊಂಡೇ ಫೇಸ್‌ಬುಕ್‌ ಖಾತೆ ಮೂಲಕ ದೀಪಾವಳಿ ಶುಭಾಶಯ ಪೋಸ್ಟ್ ಮಾಡಿದ ವಿನಯ್ ಕುಲಕರ್ಣಿ| 

ಬೆಳಗಾವಿ(ನ.15):  ಈ ಬಾರಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜೈಲಿನಲ್ಲಿಯೇ ಇರುವಂತ ಪರಿಸ್ಥಿತಿ ಬಂದಿದೆ. ಹೌದು, ಧಾರವಾಡ ಜಿ.ಪಂ.ಸದಸ್ಯ ಯೋಗೇಶ್‌ಗೌಡ ಕೊಲೆ ಕೇಸ್‌ನಲ್ಲಿ ವಿನಯ್ ಕುಲಕರ್ಣಿ ಜೈಲು ಸೇರಿದ್ದಾರೆ. 

"

ವಿನಯ್ ಕುಲಕರ್ಣಿ ನವೆಂಬರ್ 23ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ. ಹೀಗಾಗಿ ದೀಪಾವಳಿ ಸಂದರ್ಭದಲ್ಲಿ ಮನೆ ಮಂದಿಯ ಜೊತೆ ಹಬ್ಬ ಆಚರಿಸುವ ಬದಲು ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ. ಬೆಳಗಾವಿಯ ಹಿಂಡಲಗಾ ಜೈಲಿನ ಕ್ವಾರಂಟೈನ್‌ ಸೆಲ್‌ನಲ್ಲಿರುವ ವಿನಯ್ ಕುಲಕರ್ಣಿ ಅವರು ಸೆಲ್‌ನಲ್ಲೇ ಅತ್ತಿಂದಿತ್ತ ನಡೆದಾಡುತ್ತ ಕಾಲ ಕಳೆಯುತ್ತಿದ್ದಾರೆ. 

ಯೋಗೇಶ್‌ ಗೌಡ ಕೇಸ್‌ನ ಸ್ಫೋಟಕ ಸತ್ಯಗಳಿಗೆ ಬೆಚ್ಚಿಬಿದ್ದ ಸಿಬಿಐ!

ಇಂದು ಬೆಳಗ್ಗೆ ವಿನಯ್ ಕುಲಕರ್ಣಿ ಅವರು ಜೈಲು ಕ್ಯಾಂಟೀನ್‌ನಿಂದ ಇಡ್ಲಿ ತರಿಸಿಕೊಂಡು ತಿಂದಿದ್ದಾರೆ ಎಂದು ಜೈಲು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಮತ್ತೊಂದೆಡೆ ಫೇಸ್‌ಬುಕ್‌ ಖಾತೆ ಮೂಲಕ ವಿನಯ್ ಕುಲಕರ್ಣಿ ದೀಪಾವಳಿ ಶುಭಾಶಯ ಪೋಸ್ಟ್ ಮಾಡಿದ್ದಾರೆ. ಸಾರ್ವಜನಿಕರಿಗೆ ನರಕ ಚತುರ್ದಶಿ ಶುಭಾಶಯ ಎಂದು ವಿನಯ್ ಕುಲಕರ್ಣಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

ವಿನಯ್‌ ಕುಲಕರ್ಣಿ ಅವರಿಗೆ ಮಧ್ಯಾಹ್ನದ ಊಟವನ್ನ ಬೆಳಗ್ಗೆ 10 ಗಂಟೆಗೆ ನೀಡಲಾಗಿದೆ. ಚಪಾತಿ, ತೊಗರಿ ಬೇಳೆ ಪಲ್ಯ, ಅನ್ನ ಸಾರು ಜೈಲಿನ ಸಿಬ್ಬಂದಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹಿಂಡಲಗಾ ಜೈಲಿನಲ್ಲಿ ನಾಳೆ(ಸೋಮವಾರ) ವಿಶೇಷ ಪೂಜೆ ಇರಲಿದೆ. ಕೈದಿಗಳಿಗೆ ದೀಪಾವಳಿ ನಿಮಿತ್ಯ ಹಬ್ಬದ ಊಟದ ವ್ಯವಸ್ಥೆ ಮಾಡಲಾಗಿದೆ.
 

PREV
click me!

Recommended Stories

ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ
ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!