ಮಹಾರಾಷ್ಟ್ರದ ತೀರ್ಥಕ್ಷೇತ್ರಗಳ ದರ್ಶನ ಪಡೆಯಲು ಇವರು ತೆರಳುತ್ತಿದ್ದರು. ಶುಕ್ರವಾರ ರಾತ್ರಿ ಇವರು ಬಸ್ತೇವಾಡ ಗ್ರಾಮದ ಪಕ್ಕದ ಆನೂರಿನ ಅತಿಥಿ ಗೃಹದಲ್ಲಿ ತಂಗಿದ್ದರು. ಶನಿವಾರ ಬೆಳಗ್ಗೆ ಬಸ್ತೇವಾಡದಲ್ಲಿನ ವೇದಗಂಗಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾಗ ದುರಂತ ಸಂಭವಿಸಿದೆ.
ಬೆಳಗಾವಿ(ಮೇ.19): ವೇದಗಂಗಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ನಾಲ್ವರು ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಕಾಗಲ ತಾಲೂಕಿನ ಬಸ್ತವಾಡೆ ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ. ಅಥಣಿಯ ರೇಷ್ಮಾ ದಿಲೀಪ ಏಳಮಲೆ (34), ಯಶ್ (17), ಜಿತೇಂದ್ರ ವಿಲಾಸ ಲೋಕರೆ (36) ಹಾಗೂ ಸವಿತಾ ಅಮರ ಕಾಂಬಳೆ (27) ಮೃತರು.
ಜಿತೇಂದ್ರ ವಿಲಾಸ್ ಲೋಕರೆ ಹಾಗೂ ಸವಿತಾ ಅಮರ್ ಕಾಂಬಳೆ ಅವರ ಮೃತದೇಹಗಳು ಪತ್ತೆಯಾಗಿದ್ದು, ಯಶ್ ಹಾಗೂ ದಿಲೀಪ್ ಏಳಮಲೆಯವರ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆದಿದೆ. ಮಹಾರಾಷ್ಟ್ರದ ತೀರ್ಥಕ್ಷೇತ್ರಗಳ ದರ್ಶನ ಪಡೆಯಲು ಇವರು ತೆರಳುತ್ತಿದ್ದರು. ಶುಕ್ರವಾರ ರಾತ್ರಿ ಇವರು ಬಸ್ತೇವಾಡ ಗ್ರಾಮದ ಪಕ್ಕದ ಆನೂರಿನ ಅತಿಥಿ ಗೃಹದಲ್ಲಿ ತಂಗಿದ್ದರು. ಶನಿವಾರ ಬೆಳಗ್ಗೆ ಬಸ್ತೇವಾಡದಲ್ಲಿನ ವೇದಗಂಗಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾಗ ದುರಂತ ಸಂಭವಿಸಿದೆ.
undefined
ಚಾಮರಾಜನಗರ: ಗೋಪಿನಾಥಂ ಡ್ಯಾಂ ಮೂವರು ನೀರು ಪಾಲು
ರೇಷ್ಮಾ ಮತ್ತು ಸವಿತಾ ಕಾಲು ಜಾರಿ ನದಿಯಲ್ಲಿ ಬಿದ್ದಿದ್ದಾರೆ. ಮತ್ತಿಬ್ಬರು ಇವರನ್ನು ಕಾಪಾಡಲು ಹೋಗಿದ್ದಾರೆ. ಈ ವೇಳೆ ನಾಲ್ವರೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕಾಗಲ್ ಪುರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.