ಉಪಚುನಾವಣೆಯಲ್ಲಿ ಜನರ ತೀರ್ಪನ್ನ ಗೌರವಿಸುತ್ತೇವೆ: ರಮೇಶ್ ಕುಮಾರ್

By Suvarna NewsFirst Published Dec 9, 2019, 12:28 PM IST
Highlights

ನಾನು ವೈಯಕ್ತಿಕವಾಗಿ ಯಾರನ್ನೂ ಅನರ್ಹಗೊಳಿಸಿಲ್ಲ ಎಂದ ರಮೇಶ್ ಕುಮಾರ್|ಚುನಾವಣೆಯಲ್ಲಿ ಹಣ ಕೊಡುವ ಮತ್ತು ಪಡೆಯುವ ರಾಜಕಾರಣ ನನಗೆ ಗೊತ್ತಿಲ್ಲ|ಉಪಚುನಾವಣೆ ಫಲಿತಾಂಶವನ್ನು ಕಾಂಗ್ರೆಸ್ ಧೈರ್ಯದಿಂದ ಮತ್ತು ಸಮಚಿತ್ತದಿಂದ ಸ್ವೀಕರಿಸುತ್ತದೆ|

ಕೋಲಾರ(ಡಿ.09): ಸಂವಿಧಾನವನ್ನ ಅನರ್ಹಗೊಳಿಸಿರುವ ತೀರ್ಪು ಎಂಬುದು ಹೆಬ್ಬಾರ್ ಅವರ ಅಭಿಪ್ರಾಯ ಇರಬಹುದು. ನಾನು ವೈಯಕ್ತಿಕವಾಗಿ ಯಾರನ್ನೂ ಅನರ್ಹಗೊಳಿಸಿಲ್ಲ. ಉಪಚುನಾವಣೆಯಲ್ಲಿ ಜನರ ತೀರ್ಪನ್ನ ಗೌರವಿಸುತ್ತೇವೆ ಎಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು ಹೇಳಿದ್ದಾರೆ. 

ಯಲ್ಲಾಪುರ ಕ್ಷೇತ್ರದ ಬಿಜೆಪಿ ವಿಜೇತ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿಕೆಗೆ ಸೋಮವಾರ ಶ್ರೀನಿವಾಸಪುರದ ಅಡ್ಡಗಲ್‌ನ ತಮ್ಮ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ ರಮೇಶ್ ಕುಮಾರ್ ಅವರು, ಉಪಚುನಾವಣೆ ಫಲಿತಾಂಶವನ್ನು ಕಾಂಗ್ರೆಸ್ ಧೈರ್ಯದಿಂದ ಮತ್ತು ಸಮಚಿತ್ತದಿಂದ ಸ್ವೀಕರಿಸುತ್ತದೆ ಎಂದು ಹೇಳಿದ್ದಾರೆ. 

LIVE: ಮುಕ್ತಾಯದ ಹಂತಕ್ಕೆ ಮತ ಎಣಿಕೆ, 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ಸಾಧ್ಯತೆ

ಚುನಾವಣೆಯಲ್ಲಿ ಹಣ ಕೊಡುವ ಮತ್ತು ಪಡೆಯುವ ರಾಜಕಾರಣ ನನಗೆ ಗೊತ್ತಿಲ್ಲ. ಎಂದು ಹೇಳುವ ಫಲಿತಾಂಶದ ನಂತರ ಬೇಸರದಿಂದಲೇ ಸ್ವಗ್ರಾಮದಿಂದ ಬೆಂಗಳೂರಿನ ಕಡೆ ರಮೇಶ್ ಕುಮಾರ್ ಪ್ರಯಾಣ ಬೆಳೆಸಿದ್ದಾರೆ. 

ಈ ಉಪಚುನಾವಣೆಯ ಫಲಿತಾಂಶ ಬಹತೇಕ ಹೊರಬಿದ್ದಿದ್ದು ಬಿಜೆಪಿ 12 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದರೆ, ಕಾಂಗ್ರೆಸ್ ಕೇವಲ 2 ಕ್ಷೇತ್ರಗಳಲ್ಲಿ ಗೆಲುವಿನ ಖಾತೆ ತೆರೆಯುವಲ್ಲಿ ಸಫಲವಾಗಿದೆ. ಇನ್ನು ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ. ಆದರೆ, ಜೆಡಿಎಸ್ ಮಾತ್ರ ಒಂದೂ ಕ್ಷೇತ್ರದಲ್ಲೂ ಗೆಲುವು ಸಾಧಿಸಿಲ್ಲ. 
 

click me!