ಮಂಗಳೂರು: 'ಕಳೆದ 4 ತಿಂಗಳಿಂದ ಸರ್ಕಾರಕ್ಕೆ ಜೀವವೇ ಇಲ್ಲ'..!

By Kannadaprabha NewsFirst Published Dec 9, 2019, 12:11 PM IST
Highlights

ಯಾವುದೇ ಕಾಮಗಾರಿ ನಡೆಸಲು ರಾಜ್ಯ ಸರ್ಕಾರದ ಬಳಿ ದುಡ್ಡೇ ಇಲ್ಲ. ಕಳೆದ 4 ತಿಂಗಳಿನಿಂದಲೂ ಸರ್ಕಾರಕ್ಕೆ ಜೀವ ಇಲ್ಲ ಎಂದು ವಿಧಾ​ನ​ಪ​ರಿ​ಷತ್‌ ಸದಸ್ಯ ಐವನ್‌ ಡಿಸೋಜ ಆರೋ​ಪಿ​ಸಿ​ದ್ದಾ​ರೆ.

ಮಂಗಳೂರು(ಡಿ.09): ಯಾವುದೇ ಕಾಮಗಾರಿ ನಡೆಸಲು ರಾಜ್ಯ ಸರ್ಕಾರದ ಬಳಿ ದುಡ್ಡೇ ಇಲ್ಲ. ಕಳೆದ 4 ತಿಂಗಳಿನಿಂದಲೂ ಸರ್ಕಾರಕ್ಕೆ ಜೀವ ಇಲ್ಲ ಎಂದು ವಿಧಾ​ನ​ಪ​ರಿ​ಷತ್‌ ಸದಸ್ಯ ಐವನ್‌ ಡಿಸೋಜ ಆರೋ​ಪಿ​ಸಿ​ದ್ದಾ​ರೆ.

ಶನಿ​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಜಿಎಸ್‌ಟಿಯಿಂದ ರಾಜ್ಯದ ಪಾಲು 5,600 ಕೋಟಿ ರು.ಗಳನ್ನು ಕೇಂದ್ರ ಸರ್ಕಾರ ಇನ್ನೂ ನೀಡಿಲ್ಲ. ನರೇಗ ಯೋಜನೆಯ 2 ಸಾವಿರ ಕೋಟಿ ರು. ಕೂಡ ಕೇಂದ್ರದಿಂದ ಬಾರದೆ ಕೆಲಸ ಮಾಡಿದವರಿಗೆ ವೇತನ ಬಟವಾಡೆ ಆಗಿಲ್ಲ. ಪ್ರವಾಹ ಪರಿಹಾರವಾಗಿ 1200 ರು. ಕೇಂದ್ರ ಸರ್ಕಾರ ಘೋಷಿಸಿದ್ದು ಮಾತ್ರ, ಇದುವರೆಗೂ ಬಂದಿಲ್ಲ. 22 ಜಿಲ್ಲೆಗಳು ಪ್ರವಾಹ, ಬರದಿಂದ ಕಂಗೆಟ್ಟಿದ್ದರೂ ಯಾವುದೇ ವಿಶೇಷ ಅನುದಾನ ಬಿಡುಗಡೆಯಾಗದೆ ರಾಜ್ಯದಲ್ಲಿ ಯಾವುದೇ ಯೋಜನೆಗಳು ಜಾರಿಯಾಗುತ್ತಿಲ್ಲ. ನಮ್ಮ ರಾಜ್ಯದ ಹಕ್ಕಿನ ಪಾಲು ಕೇಳಲೂ ರಾಜ್ಯ ಸರ್ಕಾರಕ್ಕೆ ತಾಕತ್ತಿಲ್ಲ. ಸಿಎಂ ಮತ್ತು ಪ್ರಧಾನಮಂತ್ರಿ ನಡುವೆ ಹೊಂದಾಣಿಕೆ ಕೊರತೆಯಿಂದ ಜನತೆ ಬವಣೆಪಡುತ್ತಿದ್ದಾರೆ ಎಂದಿದ್ದಾರೆ.

‘ಬಿಜೆಪಿ ಸರ್ಕಾರಕ್ಕೆ ಜನಾದೇಶ : ಸೋತ ವಿಶ್ವನಾಥ್‌ಗೂ ಪಕ್ಷದಿಂದ ಸಿಗುತ್ತೆ ಸ್ಥಾನ’

ಬೆಳ್ತಂಗಡಿಯಲ್ಲಿ ಹಣ ಬಿಡುಗಡೆಯಾಗದೆ ಕೇವಲ ಪ್ರಸ್ತಾಪದ ಹಂತದಲ್ಲೇ ಇರುವ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲು ಮುಖ್ಯಮಂತ್ರಿ ಆಗಮಿಸುತ್ತಿದ್ದು, ಇಂತಹ ತೋರ್ಪಡಿಕೆ ಬಿಟ್ಟು ಮೊದಲು ತಾಲೂಕಿನ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು ಮುಂದಾಗಲಿ ಎಂದು ಆಗ್ರ​ಹಿ​ಸಿ​ದ​ರು.

ಬೆಳ್ತಂಗಡಿಯಲ್ಲಿ 340 ಕೋಟಿ ರು. ಶಂಕುಸ್ಥಾಪನೆಯ ಯಾವ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಶಾಸಕರ ನಿಧಿಯಿಂದ 2 ಕೋಟಿ ರು.ಗಳ ಕಾಮಗಾರಿ ಎಂದಿದ್ದಾರೆ. ಇನ್ನೂ ಆ ದುಡ್ಡೇ ಬಿಡುಗಡೆಯಾಗಿಲ್ಲ ಎಂದು ಹರಿಹಾಯ್ದರು.

ಈಶ್ವರಪ್ಪ ಕ್ಷಮೆ ಕೋರಲಿ:

ಡಿಸಿಎಂ ಹುದ್ದೆ ಬಯಸುವವರ ಕುರಿತು ‘ವಯಸ್ಕರೆಲ್ಲ ಐಶ್ವರ್ಯ ರೈ ಬೇಕು ಅಂತಾರೆ, ಆದರೆ ಇರೋದೊಬ್ಬಳೇ’ ಎಂದು ಹೇಳಿಕೆ ನೀಡಿದ ಸಚಿವ ಈಶ್ವರಪ್ಪ ಕ್ಷಮೆ ಯಾಚಿಸಬೇಕು. ಮಹಿಳೆಯರನ್ನು ಮಾತೆಯರು ಎಂದು ಕರೆಯುವ ಬಿಜೆಪಿಯವರ ಬಣ್ಣ ಬಯಲಾಗಿದೆ. ಈಶ್ವರಪ್ಪ ಈ ಹಿಂದೆಯೂ ಇಂಥ ಹೇಳಿಕೆ ನೀಡಿದ್ದಾರೆ. ಅವರ ಬಾಯಿಗೂ ತಲೆಗೂ ಬ್ಯಾಲೆನ್ಸ್‌ ಸರಿ ಇದೆಯಾ ಎಂದು ಐವನ್‌ ಡಿಸೋಜ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೈಸೂರು: 'ತೊಡೆ ತಟ್ಟಿ ಬಿದ್ದ ಸಿದ್ದರಾಮಯ್ಯ'..!

click me!