ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದ ಬಂಗಾರಪ್ಪ: ಕಾಗೋಡು ತಿಮ್ಮಪ್ಪ

Published : Oct 27, 2023, 11:59 PM IST
ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದ ಬಂಗಾರಪ್ಪ: ಕಾಗೋಡು ತಿಮ್ಮಪ್ಪ

ಸಾರಾಂಶ

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಜನಪರ, ಶೋಷಿತರ, ಹಿಂದುಳಿದವರ ಹಾಗೂ ರೈತ ಪರ ಹೋರಾಟ ನಡೆಸಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ವಿಧಾನಸಭಾ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದರು. 

ಹೊನ್ನಾವರ (ಅ.27): ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಜನಪರ, ಶೋಷಿತರ, ಹಿಂದುಳಿದವರ ಹಾಗೂ ರೈತ ಪರ ಹೋರಾಟ ನಡೆಸಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ವಿಧಾನಸಭಾ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದರು. ಪಟ್ಟಣದ ನಾಮಧಾರಿ ವಿದ್ಯಾರ್ಥಿ ಸಭಾಭವನದಲ್ಲಿ ಜಿಲ್ಲಾ ನಾಮಧಾರಿ ಅಭಿವೃದ್ಧಿ ಸಂಘ ಮತ್ತು ಎಸ್. ಬಂಗಾರಪ್ಪ ಪ್ರತಿಷ್ಠಾನ ಜಂಟಿಯಾಗಿ ಗುರುವಾರ ಏರ್ಪಡಿಸಿದ್ದ ಎಸ್. ಬಂಗಾರಪ್ಪನವರ 92ನೇ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸೂಕ್ಷ್ಮಾತಿ ಸೂಕ್ಷ್ಮ ಸಮುದಾಯಗಳ ಜನರ ಧ್ವನಿಗೆ ನ್ಯಾಯ ನೀಡಲು ಜೀವನ ಪರ್ಯಂತ ಹೋರಾಡಿದ ರಾಜಕಾರಣಿ ಬಂಗಾರಪ್ಪ. ಅಧಿಕಾರ ಹಿಡಿಯುವುದು ಮುಖ್ಯವಲ್ಲ. ಅಧಿಕಾರಕ್ಕೆ ಬಂದ ನಂತರ ಸಾಮಾಜಿಕ ನ್ಯಾಯದ ಮೂಲಕ ಜನಾನುರಾಗಿಯಾಗಿರುವುದು ಮುಖ್ಯ ಎಂದರು. ಮಾಜಿ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ಅಧಿಕಾರದ ಕುರ್ಚಿಗೆ ಅಂಟಿ ಕುಳಿತುಕೊಳ್ಳದೇ ಜನಸಾಮನ್ಯರ ಧ್ವನಿಯಾಗಿ ಆಡಳಿತ ನಡೆಸಿದ ಹಿರಿಮೆ ಬಂಗಾರಪ್ಪನವರಿಗೆ ಸಲ್ಲುತ್ತದೆ. ಜನರ ಹೃದಯ ಅರಿತು ಕೆಲಸ ಮಾಡಿದವರು. ಆದ್ದರಿಂದ ಅವರ ವಿಶ್ವ ಆರಾಧನಾ, ಆಶ್ರಯ, ಪ್ರಸಿದ್ಧ ಜನಪರ ಯೋಜನೆಗಳಾಗಿ ಇಂದೂ ಇವೆ ಎಂದರು.

ಡಿಕೆಶಿ ಅವರ ಆಸ್ತಿ ಅಕ್ರಮ ಎನ್ನುವ ಎಚ್‌ಡಿಕೆ ಅವರದ್ದು ಬೇನಾಮಿ ಅಲ್ಲವೆ: ಕೆಪಿಸಿಸಿ ವಕ್ತಾರ ಲಕ್ಷ್ಮಣ್

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಎಸ್. ಬಂಗಾರಪ್ಪ ತನ್ನ ಭಾವನಾದರೂ ಅವರ ಹೋರಾಟ, ತತ್ವಾದರ್ಶ, ಜನಪರ ನಿಲುವನ್ನು ನೋಡುತ್ತಲೇ ಜನರ ಆಶೀರ್ವಾದ, ಹಾರೈಕೆಯಿಂದ ಶಾಸಕನಾಗಿದ್ದೇನೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನಾಮಧಾರಿ ಅಭಿವೃದ್ದಿ ಸಂಘದ ಅಧ್ಯಕ್ಷ ಆರ್.ಎನ್. ನಾಯ್ಕ ಮಾತನಾಡಿ, ಯಾವುದೇ ಜಾತಿ, ಮತ, ಪಂಥ ಎಂದು ಭೇದ-ಭಾವ ನಡೆಸದೆ ಆಡಳಿತ ನಡೆಸಿದ ಕೀರ್ತಿ ಬಂಗಾರಪ್ಪನವರಿಗೆ ಸಲ್ಲುತ್ತದೆ ಎಂದರು.

ಬಂಗಾರಪ್ಪ ರಾಮಕೃಷ್ಣ ಹೆಗಡೆ ಅವರನ್ನು ಸೆಕ್ಯೂಲರ್ ವಾದಿ ಎಂದು ಹೇಳಿದ್ದರು. ಕಾಗೋಡು ತಿಮ್ಮಪ್ಪನವರ ಜತೆಗೆ ಭಿನ್ನಭಿಪ್ರಾಯ ಇದ್ದರೂ ಅವರನ್ನು ಕರೆಯಿಸಿ ಮಾತನಾಡುವ ಸ್ನೇಹವಂತರಾಗಿದ್ದರು ಎಂದು ಹೇಳಿದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಾಯಿ ಗಾವಂಕರ್, ಮಾಜಿ ಜಿಪಂ ಅಧ್ಯಕ್ಷ ಆರ್.ಎಸ್. ರಾಯ್ಕರ್, ಜಿಲ್ಲಾ ನಾಮಧಾರಿ ಸಂಘದ ಕಾರ್ಯದರ್ಶಿ ಎನ್.ಕೆ. ನಾಯ್ಕ, ಬಂಗಾರಪ್ಪ ಪ್ರತಿಷ್ಠಾನದ ಅಧ್ಯಕ್ಷ ಆರ್.ಪಿ. ನಾಯ್ಕ, ಸುಧೀಶ ನಾಯ್ಕ, ಶಂಕರ ಗೌಡ ಇದ್ದರು.

ಸಿದ್ದು Vs ಎಚ್​ಡಿಕೆ: ನಾನೇನು ಸಿಎಂ ವಕ್ತಾರನಲ್ಲ ಎಂದ ಬಿ.ಕೆ.ಹರಿಪ್ರಸಾದ್‌

ಎಸ್. ಬಂಗಾರಪ್ಪನವರ ಆಡಳಿತ ಅವಧಿಯಲ್ಲಿ ನೀಡಿದ ಹಲವು ಯೋಜನೆಗಳು ಎಲ್ಲ ಸಮಾಜಕ್ಕೂ ಅನುಕೂಲವಾಗಿದೆ. ರೈತರ ಪಂಪಸೆಟ್‌ಗೆ ಉಚಿತ ವಿದ್ಯುತ್ ಯೋಜನೆಯು ಅಂದಿನಿಂದ ಇಂದಿನ ವರೆಗೂ ಲಕ್ಷಾಂತರ ಕುಟುಂಬಕ್ಕೆ ಪ್ರಯೋಜನವಾಗಿದೆ. ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ, ಅವರ ಆದರ್ಶ ಮುಂದಿನ ತಲೆಮಾರಿಗೂ ಮಾದರಿಯಾಗಲಿ. 
-ಕಾಗೋಡು ತಿಮ್ಮಪ್ಪ ವಿಧಾನ ಸಭಾ ಮಾಜಿ ಸ್ಪೀಕರ್

PREV
Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!