'ಝೀರೋ ಟ್ರಾಫಿಕ್‌ನಲ್ಲಿ ಓಡಾಡಿದವ್ನಿಗೆ ಈಗ ನೊಣ ಹೊಡೆಯೋರು ಇಲ್ಲ'..!

By Kannadaprabha News  |  First Published Dec 16, 2019, 10:09 AM IST

ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾಜಿ ಡಿಸಿಎಂ ಜಿ.ಪರಮೇಶ್ವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಹಿಂದೂ ಮುಂದೂ ಪೊಲೀಸರನ್ನು ಇಟ್ಟಕೊಂಡು ಝೀರೋ ಟ್ರಾಫಿಕಲ್ಲಿ ತಿರುಗಾಡಿದ. ಈಗ ಅಧಿಕಾರ ಇಲ್ಲ ಪರಿಸ್ಥಿತಿ ಹೇಗಾಗಿದೆ ನೋಡಿ. ಪೊಲೀಸರು ಹಿಂದೂ ಇಲ್ಲ ಮುಂದೂ ಇಲ್ಲ. ನೊಣ ಹೊಡೆಯೋರೂ ಇಲ್ಲ ಎಂದು ಪರಮೇಶ್ವರ್ ಬಗ್ಗೆ ವ್ಯಂಗ್ಯವಾಡಿದ್ದಾರೆ.


ತುಮಕೂರು(ಡಿ.16): ಹಿಂದೆ ಮುಂದೆ ಪೊಲೀಸ್ ಇಡ್ಕೊಂಡು ಓಡಾಡುತ್ತಿದ್ದವನಿಗೆ ಈಗ ನೊಣ ಹೊಡೆಯೋರು ಇಲ್ಲ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾಜಿ ಡಿಸಿಎಂ ಜಿ.ಪರಮೇಶ್ವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

"

Tap to resize

Latest Videos

ತುಮಕೂರಿನ ಕೊರಟಗೆರೆ ತಾಲೂಕಿನ ಎಲೆರಾಂಪುರ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ರೈತರಿಗೆ ಸಾಲ ನೀಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಮಾಜಿ ಡಿಸಿಎಂ ಜಿ.ಪರಮೇಶ್ವರ ವಿರುದ್ದ ವಾಗ್ದಾಳಿ ನಡೆಸಿದ ರಾಜಣ್ಣ, ಆ ಪುಣ್ಯಾತ್ಮನಿಗೆ ಕಷ್ಟದಲ್ಲಿದ್ದಾಗ ಸಹಾಯ ಮಾಡಿ ಶಾಸಕನಾಗಿ ಮಾಡಿದೆ. ಆತ ಗೆದ್ದು ಶಾಸಕನಾಗಿ ಡಿಸಿಎಂ ಆದ. ಹಿಂದೂ ಮುಂದೂ ಪೊಲೀಸರನ್ನು ಇಟ್ಟಕೊಂಡು ಝೀರೋ ಟ್ರಾಫಿಕಲ್ಲಿ ತಿರುಗಾಡಿದ. ಈಗ ಅಧಿಕಾರ ಇಲ್ಲ ಪರಿಸ್ಥಿತಿ ಹೇಗಾಗಿದೆ ನೋಡಿ. ಪೊಲೀಸರು ಹಿಂದೂ ಇಲ್ಲ ಮುಂದೂ ಇಲ್ಲ. ನೊಣ ಹೊಡೆಯೋರೂ ಇಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

ಫಾಸ್ಟ್ಯಾಗ್‌ ಮುಂದೂಡಿಕೆ ಬಗ್ಗೆ ಟೋಲ್‌ ಸಿಬ್ಬಂದಿಗೇ ಮಾಹಿತಿ ಇಲ್ಲ, ದುಪ್ಪಟ್ಟು ವಸೂಲಿ

ಝೀರೋ‌ ಟ್ರಾಫಿಕ್ ( ಜಿ.ಪರಮೇಶ್ವರ) ಮತ್ತು ನಾನು ಕ್ಲಾಸ್ ಮೇಟ್ಸ್  ಒಂದೇ ಬೇಂಚಲ್ಲಿ ಕುಳಿತು ಕಲಿತವರು. ಹಾಗಾಗಿ ಅವನನ್ನು ಕೊರಟಗೆರೆಯಿಂದ ಗೆಲ್ಲಿಸಿಕೊಂಡು‌ ಬಂದೇ. ಆತನಿಗೆ ಉಪಕಾರ ಸ್ಮರಣೆ ಇಲ್ಲ ಎಂದು ಹೇಳಿದ್ದಾರೆ.

ಮಂಗಳೂರು: ಮೈ ನವಿರೇಳಿಸಿದ ಮಕ್ಕಳ ಸಾಹಸ ಕ್ರೀಡೆ ಪ್ರದರ್ಶನ..!

ನಾನು ಅಧ್ಯಕ್ಷನಾಗಿದ್ದ‌ ಡಿಸಿಸಿ ಬ್ಯಾಂಕನ್ನ ಸೂಪರ್ ಸೀಡ್ ಮಾಡುವ ಮೂಲಕ ನನ್ನ ಅಧಿಕಾರ ಕಿತ್ತುಕೊಳ್ಳುವ ಪಿತೂರಿ ಮಾಡಿದ್ದ ಎಂದು ಆರೋಪಿಸಿದ್ದಾರೆ. ಜತೆಗೆ ಕೆಲ ಕಾಂಗ್ರೆಸ್ ನಾಯಕರನ್ನು ಲೂಟಿಕೋರರು ಎಂದ ರಾಜಣ್ಣ, ಈ ಎಲ್ಲಾ ಲೂಟಿಕೋರರು ಸಿದ್ದರಾಮಯ್ಯರಿಗೆ ಹೆಸರು ಬರುತ್ತದೆ ಎಂದು ಅವರ ಅನ್ನಭಾಗ್ಯ ಯೋಜನೆಯನ್ನು ಹೆಚ್ಚಾಗಿ ಪ್ರಚಾರ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

click me!