ಪಬ್ಲಿಕ್ ಆಗಿ ಇದನ್ನ ಸಾಗಿಸ್ತಿದ್ದರು : ಪೊಲೀಸ್ ಬಲೆಗೆ ಬಿದ್ದರು!

Suvarna News   | Asianet News
Published : Dec 16, 2019, 09:59 AM IST
ಪಬ್ಲಿಕ್ ಆಗಿ ಇದನ್ನ ಸಾಗಿಸ್ತಿದ್ದರು : ಪೊಲೀಸ್ ಬಲೆಗೆ ಬಿದ್ದರು!

ಸಾರಾಂಶ

ಪಬ್ಲಿಕ್ ಆಗಿಯೇ ಇದನ್ನ ಸಾಗಿಸ್ತಿದ್ದವರು ಪೊಲೀಸ್ ಬಲೆಗೆ ಬಿದ್ದರು. ಮಲೆನಾಡಿನಲ್ಲಿ ಇಂತಹ ಕೃತ್ಯಕ್ಕೆ ಇಳಿದಿದ್ದವರು ಈಗ ಪೊಲೀಸ್ ಅತಿಥಿಗಳಾದರು. 

ತೀರ್ಥಹಳ್ಳಿ [ಡಿ.16]: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ. 

ಶಿವಮೊಗ್ಗ ಜಿಲ್ಲೆಯ ಹಣಗೆರೆಕಟ್ಟೆಯಿಂದ ಬೆಜ್ಜವಳ್ಳಿ ಮೂಲಕ ತೀರ್ಥಹಳ್ಳಿ ಕಡೆಗೆ ಗಾಂಜಾ ತೆಗೆದುಕೊಂಡು ಹೋಗುವ ವೇಳೆ ಕಳ್ಳರು ಮಾದಕ ವಸ್ತು ವ್ಯಾಪಾರಿಗಳು ಸಿಕ್ಕಿ ಬಿದ್ದಿದ್ದಾರೆ. 

ಸ್ಕೂಟಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಫಕೀರಪ್ಪ [45], ಸಿರಾಜುದ್ದಿನ್, ಅನಿಲ್[21] ಎನ್ನುವ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

ರಾಜಾರೋಷವಾಗಿ ಬಸ್ಸಲ್ಲೇ ಇದನ್ನ ಸಾಗಿಸ್ತಿದ್ದ ಮಹಿಳೆ ಅರೆಸ್ಟ್..

ಆಕ್ಟಿವಾ ಸ್ಕೂಟಿಯಲ್ಲಿ ಪ್ಲಾಸ್ಟಿಂಕ್ ಚೀಲದಲ್ಲಿ 1310 ಗ್ರಾಂ ತೂಕದ 20 ಸಾವಿರಕ್ಕೂ ಅಧಿಕ ಮೌಲ್ಯದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!