ಲಕ್ಷ ರೂ.ಮೌಲ್ಯದ ಬಾಳೆಗಿಡ ಕದ್ದೊಯ್ದ ನಕಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು!

Suvarna News   | Asianet News
Published : Dec 16, 2019, 09:47 AM IST
ಲಕ್ಷ ರೂ.ಮೌಲ್ಯದ ಬಾಳೆಗಿಡ ಕದ್ದೊಯ್ದ ನಕಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು!

ಸಾರಾಂಶ

ನಕಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಂದ ಕಳ್ಳತನ| ಜಿಲ್ಲೆಯ ಸೋಮಾಪುರ ಗ್ರಾಮದಲ್ಲಿ ನಡೆದ ಘಟನೆ| ಒಂದು ಲಕ್ಷ ರೂ. ಬೆಲೆ ಬಾಳುವ 200 ಬಾಳೆಗಿಡ ಕದ್ದೊಯ್ದ ಖದೀಮರು|

ಧಾರವಾಡ(ಡಿ.16): ನಕಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಕಳ್ಳತನ ಮಾಡಿದ ಘಟನೆ ತಾಲೂಕಿನ ಸೋಮಾಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ. ನಕಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗ್ರಾಮದ ಜಮೀನೊಂದರಲ್ಲಿ ಬಾಳೆಗಿಡಗಳನ್ನು ಕಡಿದು ಕದ್ದೊಯ್ದಿದ್ದಾರೆ.  

ಸೋಮಾಪುರ ಗ್ರಾಮದ ರಾಯಪ್ಪ ಸುಳ್ಳದ ಎಂಬ ರೈತನ ಬಾಳೆ ತೋಟಕ್ಕೆ ಆಗಮಿಸಿದ ನಕಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಬೆಲೆ ಬಾಳುವ ಬಾಳೆಗಿಡಗಳನ್ನು ಕದ್ದೊಯ್ದು ಪರಾರಿಯಾಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಕಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಮಾಡಿದ ಕೈಚಳಕದಿಂದ ರೈತ ರಾಯಪ್ಪ ಸುಳ್ಳದ ಅವರಿಗೆ ಸುಮಾರು 1 ಲಕ್ಷ ನಷ್ಟ ಉಂಟಾಗಿದೆ. ಸುಮಾರು 200 ಕ್ಕೂ ಹೆಚ್ಚು ಬಾಳೆಗಿಡಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಸಂಬಂಧ ಧಾರವಾಡ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಸಾಂದರ್ಭಿಕ ಚಿತ್ರ)

PREV
click me!

Recommended Stories

ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು
ರೈತ, ಆಟೋ ಚಾಲಕರ ಹೆಣ್ಮಕ್ಕಳಿಗೆ ಗವಿಮಠದಿಂದ ಫ್ರೀ ಕಾಲೇಜು, ಹಾಸ್ಟೆಲ್‌