ನೇಮಿರಾಜ ನಾಯಕ್ ಅಧಿಕಾರಿಗಳಿಗೆ ಹೆದರಿಸಿ, ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದ ಭೀಮಾನಾಯಕ್| ರಾಜ್ಯದಲ್ಲಿ ನಮ್ಮ ಬಿಜೆಪಿ ಸರ್ಕಾರ ಇದೆ. ಹಣ ಕೊಡದಿದ್ರೆ ಬೇರೆ ಕಡೆ ವರ್ಗಾವಣೆ ಮಾಡಿಸುವೆ ಎಂದು ಅವಾಜ್ ಹಾಕಿದ ಮಾಜಿ ಶಾಸಕ|
ಬಳ್ಳಾರಿ(ಡಿ.11): ವಿಜಯನಗರ ಉಪಚುನಾವಣೆಯಲ್ಲಿ ಮಾಜಿ ಶಾಸಕ ನೇಮಿರಾಜ ನಾಯಕ ಅಧಿಕಾರಿಗಳಿಂದ ಒಂದು ಕೋಟಿ ರು. ವಸೂಲಿ ಮಾಡಿದ್ದಾರೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯಕ್ ಅವರು ಗಂಭೀರವಾದ ಆರೋಪ ಮಾಡಿದ್ದಾರೆ.
ಈ ಉಪಚುನಾವಣೆಯಲ್ಲಿ ಮಾಜಿ ಶಾಸಕ ನೇಮಿರಾಜ ನಾಯಕ ಅಧಿಕಾರಿಗಳನ್ನ ಹೆದರಿಸಿ ಒಂದು ಕೋಟಿ ರು. ಹಣ ಕಲೆಕ್ಟ್ ಮಾಡಿದ್ದಾರೆ. ಪಿಎಸ್ಐ, ಸಿಪಿಐ, ಲ್ಯಾಂಡ್ ಆರ್ಮಿ ಸೇರಿದಂತೆ ವಿವಿಧ ಇಲಾಖೆಯಿಂದ ತಲಾ ಐದು ಲಕ್ಷ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನೇಮಿರಾಜ ನಾಯಕ್ ಅಧಿಕಾರಿಗಳಿಗೆ ಹೆದರಿಸಿ, ಹಣ ವಸೂಲಿ ಮಾಡಿದ್ದಾರೆ. ರಾಜ್ಯದಲ್ಲಿ ನಮ್ಮ ಬಿಜೆಪಿ ಸರ್ಕಾರ ಇದೆ. ಹಣ ಕೊಡದಿದ್ರೆ ಬೇರೆ ಕಡೆ ವರ್ಗಾವಣೆ ಮಾಡಿಸುವೆ ಎಂದು ಅವಾಜ್ ಹಾಕಿದ್ದಾರೆ ಎಂದು ಹೇಳಿದ್ದಾರೆ.
ನೇಮಿರಾಜ್ ನಾಯಕ ಮೂರು ಬಿಟ್ಟವನು, ಅವನನ್ನು ಹಿಂದೆ ಜನ ಕಟ್ಟಿ ಹಾಕಿಕೊಂಡು ಹೊಡೆದಿದ್ದರು. ಇದು ಸುಳ್ಳು ಎಂದಾದರೇ ನೇಮಿರಾಜ ನಾಯಕ್ ದೇವಸ್ಥಾನಕ್ಕೆ ಬಂದು ಆಣೆ ಪ್ರಮಾಣ ಮಾಡಲಿ. ಸದನದಲ್ಲಿ ನೇಮಿರಾಜ ನಾಯಕ್ ವಿರುದ್ದ ಹಕ್ಕು ಚುತಿ ಮಂಡಿಸಲು ಚಿಂತನೆ ನಡೆಸಿದ್ದೇನೆ ಎಂದು ಶಾಸಕ ಭೀಮಾನಾಯಕ್ ಅವರು ಹೇಳಿದ್ದಾರೆ.