BJP ನಾಯಕರ ಭೇಟಿ : JDS ಮತ್ತೊಂದು ವಿಕೆಟ್ ಪತನ ?

Published : Sep 14, 2019, 01:40 PM IST
BJP ನಾಯಕರ ಭೇಟಿ  : JDS ಮತ್ತೊಂದು ವಿಕೆಟ್ ಪತನ ?

ಸಾರಾಂಶ

GT ದೇವೇಗೌಡ ಹಾಗೂ ಗುಬ್ಬಿ ಶ್ರೀನಿವಾಸ್ ಬಳಿಕ ಇದೀಗ ಮತ್ತೊಂದು ಜೆಡಿಎಸ್ ವಿಕೆಟ್ ಪತನವಾಗುವ ಸಾಧ್ಯತೆ ಹೆಚ್ಚಿದೆ. ಜೆಡಿಎಸ್ ನಾಯಕರೋರ್ವರು ಬಿಜೆಪಿ ಮುಖಂಡರೊಂದಿಗೆ ಈಗಾಗಲೇ ಮಾತುಕತೆಯನ್ನೂ ನಡೆಸಿದ್ದಾರೆ. 

ತುಮಕೂರು (ಸೆ.14) :  ಕಳೆದ ವಿಧಾನಸಭಾ ಚುನಾವಣೆ ವೇಳೆ ತಿಪಟೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಲೋಕೇಶ್ವರ್ ಇದೀಗ ಜೆಡಿಎಸ್ ತೊರೆಯುವ ಸೂಚನೆ ನೀಡಿದ್ದಾರೆ.

ಇದೀಗ ಜಿ.ಟಿ.ದೇವೇಗೌಡ, ಗುಬ್ಬಿ ಶ್ರೀನಿವಾಸ್ ಬಳಿಕ ಇದೀಗ ಜೆಡಿಎಸ್ ಪಕ್ಷ ಬಿಡುವ ವದಂತಿ ಬೆನ್ನಲ್ಲೇ ಮತ್ತೊಂದು ವಿಕೆಟ್ ಪತನವಾಗುವ ಸೂಚನೆ ದೊರೆತಂತಾಗಿದೆ.

ಪೊಲೀಸ್ ಕಮಿಷನರ್ ಆಗಿದ್ದ ಲೋಕೇಶ್ವರ್ ಜೆಡಿಎಸ್ ಸೇರ್ಪಡೆಯಾಗಿದ್ದರು. ಆದರೆ ಇದೀಗ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಜೊತೆಗೂ ನಿಕಟ ಸಂಪರ್ಕದಲ್ಲಿರುವ ಲೋಕೇಶ್ವರ್ ಶೀಘ್ರ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ. ಈಗಾಲೇ ತಮ್ಮ ಅಭಿಮಾನಿಗಳ ಜೊತೆಗೆ ಸಭೆ ನಡೆಸಿ ಗಟ್ಟಿ ನಿರ್ಧಾರ ಮಾಡಿದ್ದು,  ಈ ನಿಟ್ಟಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಗೆ ಹಿನ್ನಡೆ ಉಂಟಾಗುತ್ತಿರುವ ಸೂಚನೆ ಇದಾಗಿದೆ.

PREV
click me!

Recommended Stories

Dharwad Love Jihad Case: ಲವ್ ಜಿಹಾದ್‌ಗೆ ಹೆದರಿ ಬಾಲಕಿ ಸಾವು; ಪ್ರತಿಭಟನೆ ಮಾಡಿದ ಬಜರಂಗದಳ ನಾಯಕನ ಮೇಲೆ ಕೇಸ್!
Karnataka Police: ಶಾಸಕರ ಶಿಫಾರಸಿಲ್ಲದೆ ಇನ್ನು ಪೊಲೀಸ್ ವರ್ಗಾವಣೆ? ಗೃಹ ಇಲಾಖೆ ಮಹತ್ವದ ಬದಲಾವಣೆ!