ಸರ್ಕಾರದ ವಿರುದ್ಧ ಕಾಂಗ್ರೆಸ್‌ ಅಪಪ್ರಚಾರ: ನೇಮಿರಾಜ್‌ ನಾಯ್ಕ್‌

Kannadaprabha News   | Asianet News
Published : Jun 16, 2021, 12:57 PM IST
ಸರ್ಕಾರದ ವಿರುದ್ಧ ಕಾಂಗ್ರೆಸ್‌ ಅಪಪ್ರಚಾರ: ನೇಮಿರಾಜ್‌ ನಾಯ್ಕ್‌

ಸಾರಾಂಶ

* ಕಾಂಗ್ರೆಸ್‌ ಶಾಸಕರು ಸರ್ಕಾರದ ಅನುದಾನ ಕ್ಷೇತ್ರದ ಅಭಿವೃದ್ಧಿಗೆ ಬಳಸಲಿ * ಕಾಂಗ್ರೆಸ್ಸಿಗರು ಲಸಿಕೆಗಾಗಿ ತಮ್ಮ ವೈಯಕ್ತಿಕ ಹಣ ನೀಡಲಿ  * ಮೋದಿ ಮತ್ತು ಬಿಎಸ್‌ವೈ ಸರ್ಕಾರ ಉಚಿತವಾಗಿ ಕೊರೋನಾ ಲಸಿಕೆ ನೀಡುತ್ತಿದೆ

ಮರಿಯಮ್ಮನಹಳ್ಳಿ(ಜೂ.16):  ಕೊರೋನಾವನ್ನು ಬಿಜೆಪಿ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಮಾಜಿ ಶಾಸಕ ಕೆ. ನೇಮಿರಾಜ್‌ ನಾಯ್ಕ್‌ ಹೇಳಿದ್ದಾರೆ. 

ಪಟ್ಟಣದ ಬಸ್‌ ನಿಲ್ದಾಣ ಬಳಿ ಆಟೋ ಚಾಲಕರಿಗೆ ಮಂಗಳವಾರ ಆಹಾರ ಕಿಟ್‌ ವಿತರಿಸಿ ಮಾತನಾಡಿ, ಕೊರೋನಾ ನಿಯಂತ್ರಿಸಲು ದೇಶದ ಜನರ ಆರೋಗ್ಯ ಕಾಪಾಡುವ, ಹಿತ ಕಾಯುವ ಚಿಂತನೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಬಿಎಸ್‌ವೈ ನೇತೃತ್ವದ ರಾಜ್ಯ ಸರ್ಕಾರ ಉಚಿತವಾಗಿ ಕೊರೋನಾ ಲಸಿಕೆ ನೀಡುತ್ತಿದೆ. ಲಸಿಕೆ ಕುರಿತು ಕಾಂಗ್ರೆಸ್‌ನವರು ಜನರನ್ನು ತಪ್ಪು ದಾರಿಗೆ ಎಳೆದರು ಎಂದರು.

ಬಿಜೆಪಿ ಸರ್ಕಾರದಿಂದ ದೇಶದ ಆರ್ಥಿಕ ಸ್ಥಿತಿ ಬಲಿಷ್ಠ: ಸಂಸದ ದೇವೇಂದ್ರಪ್ಪ

ಲಸಿಕೆಗಾಗಿ 100 ಕೋಟಿ ಅನುದಾನ ನೀಡುವ ಕಾಂಗ್ರೆಸ್‌ ಶಾಸಕರು ಸರ್ಕಾರದ ಅನುದಾನವನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸಲಿ. ಲಸಿಕೆಗಾಗಿ ತಮ್ಮ ವೈಯಕ್ತಿಕ ಹಣ ನೀಡಲಿ ಎಂದು ಅವರು ಸವಾಲೆಸೆದರು.

ಬಿಜೆಪಿ ಮುಖಂಡರಾದ ವ್ಯಾಸನಕೆರೆ ಶ್ರೀನಿವಾಸ, ಡಿ. ರಾಘವೇಂದ್ರ ಶೆಟ್ಟಿ, ಎಂ. ಬದ್ರಿನಾಥ ಶೆಟ್ಟಿ, ಪಿ. ಓಬಪ್ಪ, ಬಿ.ಎಸ್‌. ರಾಜಪ್ಪ, ಮಜ್ಗಿ ಶಿವಪ್ಪ, ದೊಡ್ಡ ರಾಮಣ್ಣ, ಬಿ.ಎಂ.ಎಸ್‌. ಪ್ರಕಾಶ, ಗುಂಡಾಸ್ವಾಮಿ, ರವಿಕಿರಣ್‌, ಶ್ರೀಕಾಂತನಾಯ್ಕ, ನಂದಿಬಂಡಿ ಜಗದೀಶ, ಎಸ್‌. ನವೀನ ಕುಮಾರ್‌, ನರಸಿಂಹ ಮೂರ್ತಿ, ಮಜ್ಜಿಗೆ ನಾಗರಾಜ, ಪಿ.ವಿ. ರಾಘವೇಂದ್ರ, ಪೋತಲಕಟ್ಟೆ ನಾಗರಾಜ, ಮಂಜುನಾಥ ಕುರುಬ, ರುದ್ರನಾಯ್ಕ, ಈಶ್ವರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
 

PREV
click me!

Recommended Stories

ಡಿ.16ರಂದು ಮಂಡ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ಜಿಲ್ಲಾಡಳಿತದಿಂದ ಭರದ ಸಿದ್ದತೆ, ಕಟ್ಟುನಿಟ್ಟಿನ ಭದ್ರತೆ
ತಂತ್ರಜ್ಞಾನದ ನೆರವಿನಿಂದ ಜೈಲುಗಳಲ್ಲಿ ಸುಧಾರಣೆ ತರಲು ಅಲೋಕ್ ಕುಮಾರ್ ನೇತೃತ್ವ