ಭೇರ್ಯ (ಜೂ.16): ಅಧಿಕಾರ ದುರುಪಯೋಗ ಹಾಗೂ ಕರ್ತವ್ಯ ಲೊಪ ಸರ್ಕಾರಿ ಅಧಿಕಾರಿಯಾಗಿ ಭಾರತೀಯ ಸೇವೆಗಳ 1969 ಕಾಯ್ದೆ 6 ರ ಅಡಿಯಲ್ಲಿ ನಿಯಮ ಉಲ್ಲಂಘನೆಯಾಗಿದ್ದು, ಸರ್ಕಾರ ಈ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಸೇವೆಯಿಂದ ವಜಾ ಮಾಡುವಂತೆ ನಗರ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಮಿರ್ಲೆ ಅಣ್ಣೇಗೌಡ ಒತ್ತಾಯಿಸಿದ್ದಾರೆ.
ಸರ್ಕಾರಿ ಅಧಿಕಾರಿಯಾಗಿ ರೋಹಿಣಿ ಸಿಂಧೂರಿ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಸಂವಿಧಾನಕ್ಕೆ ದಕ್ಕೆ ತಂದಿದ್ದಾರೆ. ಆದ್ದರಿಂದ ಇವರು ಸರ್ಕಾರಿ ಅಧಿಕಾರಿಯಾಗಿರುವುದಕ್ಕೆ ಯೋಗ್ಯತೆ ಇಲ್ಲ ಎಂದು ಗುಡುಗಿದ್ದಾರೆ
undefined
'ರೋಹಿಣಿ ಸಿಂಧೂರಿಯಿಂದ ನಿಯಮ ಉಲ್ಲಂಘನೆ
ಮೈಸೂರು ಸಾಂಸ್ಕೃತಿಕ ನಗರ ಪಾರಮಫರಿಕ ಕಟ್ಟಡಗಳು ಇದ್ದು ಯಾವುದೇ ದುರಸ್ಥಿ ಮಾಡಬೇಕಾದರೂ ನಗರಪಾಲಿಕೆ ಅನುಮತಿ ಬೇಕು. ಯಾವುದೇ ಅನುಮತಿ ಇಲ್ಲದೇ ಅಕ್ರಮವಾಗಿ ಈಜುಕೊಳ ಹಾಗೂ ಜಿಮ್ ನಿರ್ಮಿಸಲು ಇವರೇನು ಮೈಸೂರು ಮಹಾರಾಣಿ ನಾ ಎಂದು ಪ್ರಶ್ನೆ ಮಾಡಿದ್ದಾರೆ. ಇದರಲ್ಲಿ ಗೊತ್ತಾಗುತ್ತದೆ ಕಾನೂನು ಉಲ್ಲಂಘನೆ ಆಗಿದೆ ಎಂದ ಅವರು ಸಾರ್ವಜನಿಕ ಹಣವನ್ನು ದುರುಪಯೋಗ ಮಾಡಿದ್ದಾರೆ. ಆದ್ದರಿಂದ ಕೂಡಲೇ ಸೇವೆಯಿಂದ ವಜಾ ಮಾಡಿ ಎಮದಿದ್ದಾರೆ.
ರೋಹಿಣಿ ಸಿಂಧೂರಿಯಿಂದ ಸರ್ಕಾರಕ್ಕೆ ಸುಳ್ಳು ವರದಿ ...
ರೋಹಿಣಿ ಸಿಂಧುರಿ ಅವರು ಶಾಸಕ ಸಾ ರಾ ಮಹೆಶ್ ವಿರುದ್ಧ ಗಂಭೀರ ಆರೋಪಮಾಡಿದ್ದು, ಪ್ರಾದೇಶಿಕ ಆಯುಕ್ತರು ರಚಿಸಿದ್ದ ತಂಡಸತ್ಯಾತ್ಯತೆಯನ್ನು ಪರಿಶೀಲಿಸಿ ಕ್ಲೀನ್ ಚೀಟ್ ನೀಡಿದೆ ಎಂದರು.
ಅಲ್ಲದೇ ಸಾಸಕ ಸಾ ರಾ ಮಹೇಶ್ ಅವರ ಬಗ್ಗೆ ಮಾತನಾಡುವ ನಯತುಕತೆ ಎಚ್. ವಿಶ್ವನಾಥ್ ಅವರಿಗಿಲ್ಲ. ಮಗ ಜಿಪಂ ಸದಸ್ಯನಾಗಿ ಮಾಡಲು ಜೆಡಿಎಸ್ , ಇವರು ಶಾಸಕರಾಗಲು ಜೆಡಿಎಸ್ ಬೇಕು. ಈಗ ಹಣ ವಸೂಲಿ ಮಾಡಲು ಬಿಜೆಪಿ ಸೇರಿದ್ದಾರೆ ಎಂದರು.