
ರಾಮನಗರ(ಮೇ.21): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಲು ಮಾಜಿ ಸಿಎಂ ಕುಮಾರಸ್ವಾಮಿ ಕೈಜೋಡಿಸಿ ಋುಣ ತೀರಿಸಬೇಕು ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಹಳೇಯ ವೈರತ್ವವನ್ನು ಮರೆತು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲು ಬೆಂಬಲ ನೀಡಿದ್ದರು. ಈಗ ಕುಮಾರಸ್ವಾಮಿ ಮೇಲೆ ಆ ಋುಣವಿದೆ ಎಂದರು.
ಮಗು, ವೃದ್ಧೆಯನ್ನ ತಿಂದು ತೇಗಿದ ನರಭಕ್ಷಕ ಚಿರತೆ ಕೊಲ್ಲಲು ಹೆಚ್ಚಿದ ಒತ್ತಡ
ರಾಜಕೀಯದ ಎಂತಹ ಸಂದರ್ಭದಲ್ಲಿಯೂ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಅವರ ಕೈ ಬಿಡಬಾರದು. ಸ್ಥಳೀಯವಾಗಿ ನಮ್ಮಲ್ಲಿ ಕೆಲ ಹಗ್ಗಜಗ್ಗಾಟ ಇರಲಿದೆ ಅಷ್ಟೇ. ಆದರೆ, ಮೇಲ್ಮಟ್ಟದಲ್ಲಿ ಜೆಡಿಎಸ್-ಕಾಂಗ್ರೆಸ್ ಒಂದೆಯಾಗಿದೆ. ನಾವು ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದೇವೆ. ಈಗ ಅವರು ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಲು ಕೈಜೋಡಿಸಬೇಕು ಎಂದು ಹೇಳಿದರು.