ಬೆಳಗಾವಿ ನಗರದ ಖಾಸಗಿ ಹೋಟೆಲ್‌ನಲ್ಲಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್| ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್‌ಗೆ ಒಪ್ಪದೇ ಹೋಂ ಕ್ವಾರಂಟೈನ್‌ಗೆ ಹಠ| ಅಧಿಕಾರಿಗಳಿಗೆ ಆತ್ಮಹತ್ಯೆಯ ಬೆದರಿಕೆಯೊಡ್ಡಿದ ವೈದ್ಯೆ| ಕಂಗಾಲಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಪಾಲಿಕೆ ಅಧಿಕಾರಿಗಳು|
ಬೆಳಗಾವಿ(ಮೇ.21): ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಬೇಡ, ನಮಗೆ ಹೋಂ ಕ್ವಾರಂಟೈನ್ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವೈದ್ಯೆರೊಬ್ಬರು ಅಧಿಕಾರಿಗಳಿಗೆ ಬೆದರಿಕೆಯೊಡ್ಡಿದ ಘಟನೆ ನಗರದಲ್ಲಿ ನಡೆದಿದೆ.
ನಿನ್ನೆ(ಬುಧವಾರ) ಮುಂಬೈನಿಂದ ದಂಪತಿ ಬೆಳಗಾವಿಗೆ ಆಗಮಿಸಿದ್ದರು. ಇವರನ್ನ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್‌ನಲ್ಲಿ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಅಧಿಕಾರಿಗಳು ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್‌ಗೆ ಕಳುಹಿಸಿದ್ದರು.
ಊರಿಗೆ ಕರೆತರೋದಾಗಿ ಲಕ್ಷ ಲಕ್ಷ ಪೀಕಿದ ಮಹಿಳೆ: ಉಡುಪಿ ಮಂದಿ ಬೆಳಗಾವಿ ಗಡಿಯಲ್ಲಿ ಬಾಕಿ
ನಗರದ ಖಾಸಗಿ ಹೋಟೆಲ್‌ನಲ್ಲಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈ ವೈದ್ಯೆ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್‌ಗೆ ಒಪ್ಪದೇ ಹೋಂ ಕ್ವಾರಂಟೈನ್‌ಗೆ ಹಠ ಹಿಡಿದಿದ್ದರು. ಜೊತೆಗೆ ನಮ್ಮನ್ನ ಹೋಂ ಕ್ವಾರಂಟೈನ್ ಕಳುಹಿಸದಿದ್ದರೆ ಆತ್ಮಹತ್ಯೆಯ ಮಾಡಿಕೊಳ್ಳುತ್ತೇನೆ ಎಂದು ಪಾಲಿಕೆ ಅಧಿಕಾರಿಗಳಿಗೆ ಬೆದರಿಕೆಯೊಡ್ಡಿದ್ದಾರೆ.
ಇದರಿಂದ ಕಂಗಾಲಾದ ಪಾಲಿಕೆ ಅಧಿಕಾರಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೀಗಾಗಿ ಮಹಿಳೆಗೆ ಬೆಳಗಾವಿ ಪೊಲೀಸರಿಂದ ಬುದ್ಧಿವಾದ ಸಹ ಹೇಳಿದ್ದಾರೆ. ತನ್ನ ಪತ್ನಿಗೆ ತಿಳಿ ಹೇಳುವುದಾಗಿ ವೈದ್ಯೆಯ ಪತಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.