ಕೊರೋನಾ ಭೀತಿ: ವಿಜಯಪುರ-ಬೆಂಗಳೂರು ಬಸ್‌ ಆರಂಭ

Kannadaprabha News   | Asianet News
Published : May 21, 2020, 12:17 PM IST
ಕೊರೋನಾ ಭೀತಿ: ವಿಜಯಪುರ-ಬೆಂಗಳೂರು ಬಸ್‌ ಆರಂಭ

ಸಾರಾಂಶ

ಬೆಂಗಳೂರಿಗೆ ಮೂರು ಬಸ್‌ಗಳನ್ನು ಓಡಿಸಲಾಗುವುದು| ಬೆಳಗ್ಗೆ 7 ಗಂಟೆ, 7-30 ಹಾಗೂ 8 ಗಂಟೆಗೆ ಬೆಂಗಳೂರಿಗೆ ಬಸ್‌ ಸಂಚಾರ| ಬೆಂಗಳೂರಿನಿಂದ ಬೆಳಗ್ಗೆ ಮೂರು ಬಸ್‌ಗಳನ್ನು ವಿಜಯಪುರಕ್ಕೆ ಓಡಿಸಲಾಗುವುದು| ಬಸ್ಸಿನಲ್ಲಿ ಮೂವತ್ತು ಪ್ರಯಾಣಿಕರಿಗೆ ಅವಕಾಶ| ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಕ್ತ ವ್ಯವಸ್ಥೆ|

ವಿಜಯಪುರ(ಮೇ.21): ನಗರದಿಂದ ಬೆಂಗಳೂರಿಗೆ ಬಸ್‌ ಸಂಚಾರ ಆರಂಭಿಸಲಾಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌.ಜಿ. ಗಂಗಾಧರ ತಿಳಿಸಿದರು.

ಮಂಗಳವಾರ ಕಲಬುರಗಿ, ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ ಮುಂತಾದ ಕಡೆಗಳಲ್ಲಿ ಬಸ್‌ ಸಂಚಾರ ಆರಂಭಿಸಲಾಗಿತ್ತು. ಬುಧವಾರ ಬೆಳಗ್ಗೆ ಬೆಂಗಳೂರಿಗೆ ಬಸ್‌ ಸಂಚಾರ ಆರಂಭಿಸಲಾಗಿದೆ. ಸದ್ಯಕ್ಕೆ ದಿನಂಪ್ರತಿ ಬೆಂಗಳೂರಿಗೆ ಮೂರು ಬಸ್‌ಗಳನ್ನು ಓಡಿಸಲಾಗುವುದು. ಬೆಳಗ್ಗೆ 7 ಗಂಟೆ, 7-30 ಹಾಗೂ 8 ಗಂಟೆಗೆ ಬೆಂಗಳೂರಿಗೆ ಬಸ್‌ಗಳನ್ನು ಓಡಿಸಲಾಗುವುದು. ಅದೇ ರೀತಿ ಬೆಂಗಳೂರಿನಿಂದ ಬೆಳಗ್ಗೆ ಮೂರು ಬಸ್‌ಗಳನ್ನು ವಿಜಯಪುರಕ್ಕೆ ಓಡಿಸಲಾಗುವುದು. ಬಸ್ಸಿನಲ್ಲಿ ಮೂವತ್ತು ಪ್ರಯಾಣಿಕರಿಗೆ ಅವಕಾಶವಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

KSRTC ಬಸ್‌ಗೆ ಮುಗಿಬಿದ್ದ ಪ್ರಯಾಣಿಕರು: ಮುಂಗಡ ಟಿಕೆಟ್‌ ಖರೀದಿಸಿದವರಿಗೆ ಮಾತ್ರ ಅವಕಾಶ..!

ಮಂಗಳವಾರ ಹಾಗೂ ಬುಧವಾರ ಸೇರಿ ಒಟ್ಟು 3 ಲಕ್ಷಗಳ ಆದಾಯ ಬಂದಿದ್ದು, ಕೊರೋನಾಕ್ಕಿಂತ ಮುನ್ನ ಪ್ರತಿದಿನ 85 ಲಕ್ಷ ಆದಾಯ ಬರುತ್ತಿತ್ತು. ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ಅಂದಾಜು 6 ಕೋಟಿ ಸಂಸ್ಥೆಗೆ ಹಾನಿಯಾಗಿದೆ ಎಂದು ತಿಳಿಸಿದರು.
 

PREV
click me!

Recommended Stories

ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!
ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!