ಹುನಗುಂದ: ಪ್ರಾಂಶುಪಾಲರ ಆತ್ಮಹತ್ಯೆ, ಉನ್ನತ ತನಿಖೆಗೆ ಆಗ್ರಹ

By Kannadaprabha News  |  First Published Aug 25, 2023, 8:56 PM IST

ಪ್ರಾಂಶುಪಾಲರು ಆತ್ಮಹತ್ಯೆ ಮಾಡಿಕೊಳ್ಳುಲು ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು. ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಂತೆ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಹೇಳಿದ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ 


ಹುನಗುಂದ(ಆ.25): ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾಗರಾಜ ಮುದಗಲ್ಲ ಕಾಲೇಜಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಒತ್ತಾಯಿಸಿದರು.

ಪಟ್ಟಣದ ನಾಗರಾಳ ಜಿನ್ನಿಂಗ್‌ ಫ್ಯಾಕ್ಟರಿಯಲ್ಲಿ ಗುರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಾಂಶುಪಾಲರು ಆತ್ಮಹತ್ಯೆ ಮಾಡಿಕೊಳ್ಳುಲು ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು. ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಂತೆ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಹೇಳಿದರು.

Tap to resize

Latest Videos

ಆಪರೇಶನ್‌ ಹಸ್ತ: ಯಾರು ಬೇಕು, ಬೇಡ ಅನ್ನೋದು ಪಕ್ಷ ತೀರ್ಮಾನಿಸುತ್ತೆ, ಸಚಿವ ರಾಜಣ್ಣ

ಪ್ರಾಂಶುಪಾಲ ನಾಗರಾಜ ಮುದಗಲ್ಲ ಅವರು ಅತ್ಯಂತ ಸೌಮ್ಯ ಸ್ವಾಭಾವದ ವ್ಯಕ್ತಿತ್ವ ಹೊಂದಿದವರು. ಅವರ ಕುಟುಂಬದಲ್ಲಿ ಯಾವುದೇ ಕಲಹ, ಸಮಸ್ಯೆ ಇರಲಿಲ್ಲ. ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ? ಎಂಬುದು ತಿಳಿದಿಲ್ಲ. ಆದರೆ, ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳಿದಾಗ ‘ಕಾಲೇಜಿನಲ್ಲಿ ಬಹಳಷ್ಟುಕಿರಿಕಿರಿ, ಒತ್ತಡ ಇತ್ತು. ಸದಾ ಕಾಲೇಜಿನ ಬಗ್ಗೆಯೇ ಚಿಂತೆ ಮಾಡುತ್ತಿದ್ದರು’ ಎಂದು ಕುಟುಂಬದವರು ತಿಳಿಸಿದ್ದಾರೆ. ಹಾಗಾಗಿ ಅವರ ಆತ್ಮಹತ್ಯೆ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಮಂಗಳವಾರ ಕಾಲೇಜಿನಲ್ಲಿ ಜಾನಪದ ಜಾತ್ರೆ ಸಂಭ್ರಮ ಕಾರ್ಯಕ್ರಮವಿತ್ತು. ಅದೇ ದಿನವೇ ನಾಗರಾಜ ಅವರು ಆತ್ಯಹತ್ಯೆ ಮಾಡಿಕೊಳ್ಳುವದರ ಹಿಂದೆ ಬಲವಾದ ಕಾರಣ ಇರಬೇಕು. ಅವರ ಕುಟುಂಬದಲ್ಲಿದಂತೂ ಕೌಂಟುಂಬಿಕ ಸಮಸ್ಯೆ ಇರಲಿಲ್ಲ. ಪೊಲೀಸ್‌ ಇಲಾಖೆಯಿಂದ ತನಿಖೆ ಮಾಡಿದರೆ ಸತ್ಯ ಬೆಳಕಿಗೆ ಬರದು. ಹಾಗಾಗಿ ಉನ್ನತ ಮಟ್ಟದ, ಸಿಬಿಐ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ಪುರಸಭೆ ಸದಸ್ಯ ಮಹೇಶ ಬೆಳ್ಳಿಹಾಳ, ರಾಮನಗೌಡ ಬೆಳ್ಳಿಹಾಳ, ಸುಭಾಷ ಮುಕ್ಕಣ್ಣನವರ, ಸಂಗಣ್ಣ ಚಿನಿವಾಲ, ಮಲ್ಲು ಚೂರಿ, ಮಹಾಂತೇಶ ಚಿತ್ತವಾಡಗಿ, ಅಪ್ಪು ಆಲೂರ, ಬಸವರಾಜ ಹೊಸೂರ, ವಿರುಪಾಕ್ಷ ಹಿರೇಮಠ, ಮುನ್ನಾ ಬಾಗವಾನ, ಶೇಖರ ಬಡಿಗೇರ ಇತರರು ಇದ್ದರು.

click me!