ಅನುಮತಿ ಪಡೆಯದೆ ತರಾತುರಿಯಲ್ಲಿ 957 ಕೋಟಿ ಮಹದಾಯಿ ಟೆಂಡರ್, ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ವೀರೇಶ ಸೊಬರಮಠ ಪತ್ರ
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಆ.25): ಕಳೆದ 9 ವರ್ಷಗಳಿಂದ ಮಹದಾಯಿ ನೀರಾವರಿ ಯೋಜನೆ ಜಾರಿಯಾಗಲಿ ಎಂದು ಮಹದಾಯಿ ಹೋರಾಟಗಾರರು ಹೋರಾಟ ಮಾಡುತ್ತಲೇ ಬಂದಿದ್ದಾರೆ ಆದರೆ ಅಧಿಕಾರಿಗಳ ನಿರ್ಲಕ್ಷಕ್ಕೆ ಮಹದಾಯಿ ಯೋಜನೆ ಜಾರಿಯಾಗಲೂ ವಿಳಂಬವಾಗುತ್ತಿದೆ. ಅದರಂತೆ ಕುಡಿಯುವ ನೀರಿಗಾಗಿ 3.9 ಟಿಎಂಸಿ ನೀರನ್ನ ಪಡಿಯಲಿಕ್ಕೆ ಕೇಂದ್ರದ ಪರಿಸರ ಇಲಾಖೆ, ಹಾಗೂ ವನ್ಯ ಜೀವಿಗಳ ಸಂರಕ್ಷಣಾ ಇಲಾಖೆಗಳ ಪರವಾಣಿಗೆಯನ್ನ ಪಡೆಯುವುದು ಅತಿ ಅವಶ್ಯಕವಾಗಿರುತ್ತದೆ. ಸಂಬಂಧ ಪಟ್ಡ ರಾಜ್ಯದ ಅರಣ್ಯ ಇಲಾಖೆ ಮತ್ತು ವನ್ಯ ಜೀವಿಗಳ ಸಂರಕ್ಷಣಾ ಇಲಾಖೆಗಳ ಮಾಹಿತಿಗಳನ್ನ ಕ್ರೂಡಿಕರಣ ಮಾಡಿಕ್ಕೊಂಡು ನಿಯಮಾನುಸಾರವಾಗಿ ತಮ್ಮಅಧ್ಯಕ್ಷತೆಯಲ್ಲಿ ಪರಿಶಿಲಿಸಿ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿ ಕೇಂದ್ರ ಸರಕಾರದಿಂದ ಅನುಮತಿಯನ್ನ ಪಡೆಯಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ವೀರೇಶ ಸೊಬರಮಠ ಪತ್ರ ಬರೆದಿದ್ದಾರೆ.
ನಾವಿಕನಿಲ್ಲದೆ ಬಿಜೆಪಿ ದೋಣಿ ಅಲುಗಾಡುತ್ತಿದೆ: ಸಚಿವ ಕೃಷ್ಣ ಭೈರೇಗೌಡ
ಮಹದಾಯಿ ನೀರಾವರಿ ಯೋಜನೆ ವಿಳಂಭವಾಗಲೂ ಕಾರಣ ವೆಂದರೆ ಹಿಂದಿನ ಬಿಜೆಪಿ ಸರಕಾರ ಮಹದಾಯಿ ಯೋಜನೆ ಜಾರಿ ಮಾಡಲು ಕೇಂದ್ರ ಸರಕಾರದ ಅನುಮತಿ ಪಡೆಯದೆ ತರಾತುರಿಯಲ್ಲಿ 957 ಕೋಟಿ ಯ ಕಾಮಗಾರಿಯನ್ನ ಅವೈಜ್ಞಾನಿಕ ವಾಗಿ ಟೆಂಡರ್ ಕರೆದಿದ್ದಾರೆ. ಇನ್ನು 2023 ರ ವಿಧಾನಸಭಾ ಚುಣಾವಣೆಗೆ ನೀತಿಸಂಹಿತೆ ಯಾರಿಯಾಗುವ ಮುನ್ನ ಅಂದರೆ ಒಂದು ಘಂಟೆಯ ಮುಂಚೆ ತರಾತುರಿಯಲ್ಲಿ ಟೆಂಡರ್ ಮಾಡಿದ್ದಾರೆ. ರಾಜ್ಯದ ರೈತರನ್ನ ಮೂರ್ಖರನ್ನಾಗಿ ಮಾಡಿ ಅಧಿಕಾರಿಗಳು ರಾಜಕೀಯ ಮುಖಂಡರ ಮಾತುಗಳನ್ನ ಕೇಳಿ ರಾಜಕೀಯ ಲಾಭ ಪಡೆಯಲು ತರಾತುರಿಯಲ್ಲಿ ಟೆಂಡರ್ ಕರೆದಿದ್ದಾರೆ.
ಸದ್ಯ ಈ ಟೆಂಡರನ್ನ ಕರೆದ ಸರಕಾರದ ಅಪರ ಕಾರ್ಯದರ್ಶಿಗಳು, ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್, ಮತ್ತು ವ್ಯವಸ್ಥಾಪಕರ ನಿರ್ದೆಶಕರ ಮೆಲೆ ಕಾನೂನು ಕ್ರಮ ಜರುಗಿಸಬೇಕು.ನಿಯಮಾನುಸಾರವನ್ನ ಟೆಂಡರ್ ಕರೆಯದೆ ಅವೈಜ್ಞಾನಿಕ ಟೆಂಡರ್ ಕರೆದ ಅಧಿಕಾರಿಗಳನ್ನ ಅಮಾನತು ಮಾಡಬೇಕು ಎಂದು ರ ವಿರೇಶ ಸೊಬರದ ಮಠ ಆಗ್ರಹಿಸಿದ್ದಾರೆ.
ನಾವು ‘ಆಪರೇಷನ್ ಹಸ್ತ’ ಮಾಡುತ್ತಿಲ್ಲ, ಅವರೇ ಬರ್ತಿದ್ದಾರೆ: ಸಚಿವ ಎಂ.ಬಿ.ಪಾಟೀಲ್
ಕಳೆದ ಒಂದು ವಾರದಿಂದ ಮಹದಾಯಿ ಯೋಜನೆ ವಿಳಂಬವಾಗಲೂ ಕಾರಣರಾದ ಅಧಿಕಾರಿಗಳ ವಿರುದ್ದ ಕ್ರಮ ಆಗಬೇಕು ಎಂದು ಧಾರವಾಡದ ನೀರಾವರಿ ಕಚೇರಿ ಮುಂದೆ ಮಹದಾಯಿ ಹೋರಾಟಗಾರರು ಪ್ರತಿಬಟನೆ ಮಾಡುತ್ತಿದ್ದಾರೆ..ಇನ್ನು ಇನ್ನು ಕಳೆದ 10 ವರ್ಷಗಳಿಂದ ಬ್ರಷ್ಡ ಅಧಿಕಶರಿಗಳು ನೀರಾವರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ..ಅವರ ಮೆಲೆ ಸದ್ಯ 30 ಕೋಟಿ ದುರ್ಬಳಕೆ ಆರೋಪಗಳಿದ್ದರು ಅಂತಹ ಬ್ರಷ್ಡ 20 ಕ್ಕೂ ಹೆಚ್ಚು ಅಧಿಕಾರಿಗಳು ಒಂದೆ ಇಲಾಖೆಯಲ್ಲಿ ಒಂದೆ ಸ್ಥಳದಲ್ಲಿ ಕೆಲಸವನ್ನ ಮಾಡುತ್ತಿದ್ದಾರೆ..ಇದರಿಂದ ಪಾರದರ್ಶಕವಾಗಿ ಯಾವುದೆ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ವಿರೇಶ ಸೊಬರದಮಠ ಅವರು ಆರೋಪವನ್ನ ಮಾಡುತ್ತಿದ್ದಾರೆ..
ಆದಷ್ಡೂ ಬೇಗ ಮೂರು ಬೇಡಿಕೆಗಳನ್ನ ಇಡೇರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ವನ್ನ ಮಾಡಲಾಗುವುದು ಎಂದು ಮಹದಾಯಿ ಹೋರಾಟಗಾರಶ್ರೀವಿರೇಶ ಸೊಬರದಮಠ ಆಗ್ರಹಿಸಿದ್ದಾರೆ. ಅದು ಎನೆ ಇರಲಿ ಅವರು ಕೊಟ್ಟ ದಾಖಲಾತಿಗಳ ಮುಖಾಂತರ ತಪ್ಪಿಸ್ಥ ಮೂವರು ಅಧಿಕಾರಿಗಳ ಮೆಲೆ ಸಿಎಂ ಸಿದ್ದರಾಮಯ್ಯ ಅವರು ಕ್ರಮ ಕೈಗೊಳ್ತಾರಾ ಎಂಬುದನ್ನ ಕಾದುನೋಡಬೇಕಿದೆ.