ಮುರುಘಾಶ್ರೀ ಫೋಟೊ ಕಳವು ಕೇಸ್ ನಲ್ಲಿ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಅರೆಸ್ಟ್

By Suvarna News  |  First Published Nov 10, 2022, 7:07 PM IST

ಚಿತ್ರದುರ್ಗದ ಮುರುಘಾ ಮಠದ ಮುರುಘಾಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದ್ರೆ ಮುರುಘಾಶ್ರೀ ಜೈಲಲ್ಲಿದ್ರು, ಕೇಸ್ ನಿಂದ ಹೊರ ಬರ್ತಿರುವ ಟ್ವಿಸ್ಟ್ ಗಳಿಂದ ದಿನ ದಿನಕ್ಕೂ ಕೇಸ್ ಗೆ ಹೊಸ ಅಯಾಮ ಪಡೆದುಕೊಳ್ತಿದೆ.


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ನ.10): ಚಿತ್ರದುರ್ಗದ ಮುರುಘಾ ಮಠದ ಮುರುಘಾಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದ್ರೆ ಮುರುಘಾಶ್ರೀ ಜೈಲಲ್ಲಿದ್ರು, ಕೇಸ್ ನಿಂದ ಹೊರ ಬರ್ತಿರುವ ಟ್ವಿಸ್ಟ್ ಗಳಿಂದ ದಿನ ದಿನಕ್ಕೂ ಕೇಸ್ ಗೆ ಹೊಸ ಅಯಾಮ ಪಡೆದುಕೊಳ್ತಿದೆ. ಯಾರು ಅಂದರ್ ಆಗ್ತಾರೆ, ಯಾರು ಸೇಫಾಗ್ತಾರೆ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.  ಮುರುಘಾಶ್ರೀ ವಿರುದ್ಧ ಫೋಕ್ಸೊ ಕೇಸ್ ದಾಖಲಾದಾಗ ಇದೊಂದು ಷಡ್ಯಂತ್ರ ಅಂತ ಮುರುಘಾಶ್ರೀ ಹೇಳಿದ್ರು. ಆಗ ಮಠದ ಆಡಳಿತಾಧಿಕಾರಿ ಬಸವರಾಜನ್ ಅವರೇ ಈ ಕೇಸ್ ನ ರೂವಾರಿ ಎಂಬ ಶಂಕೆಯಿಂದಾಗಿ‌ ಮುರುಘಾಶ್ರೀ ಜೊತೆ ಸಂಧಾನ ಮಾಡುವ ಯತ್ನ ಸಹ ಹಲವು ಕಡೆ ನಡೆದಿತ್ತು. ಆದ್ರೆ ಮುರುಘಾಶ್ರೀ ಬಂಧನದ ಬಳಿಕ ಸ್ವಯಂ ಅವರ ಭಕ್ತರೇ ಮುರುಘಾಶ್ರೀಯನ್ನು ಪೀಠದಿಂದ ವಜಾಗೊಳಿಸುವಂತೆ ಆಗ್ರಹಿಸಿ ಸರ್ಕಾರದ ಗಮನ ಸೆಳೆದಿದ್ದರು‌.

Latest Videos

undefined

ಹೀಗಾಗಿ ಫೋಕ್ಸೊ ನಿಯಮದಂತೆ ತನಿಖೆಯನ್ನು ನಡೆಸಿದ ಡಿವೈಎಸ್ಪಿ ಅನಿಲ್ ಕುಮಾರ್ ನೇತೃತ್ವದ ತಂಡ ಇಬ್ಬರು ಸಂತ್ರಸ್ತೆಯರ ಹೇಳಿಕೆಯ ಆಧಾರದ ಮೇಲೆ ಪ್ರಕರಣದ ತನಿಖೆ ನಡೆಸಿ, ಪ್ರಕರಣ ಎ1 ಮುರುಘಾ ಶ್ರೀ, ಎ2 ಲೇಡಿ ವಾರ್ಡನ್, ಎ4 ಪರಮಶಿವಯ್ಯ ರನ್ನು ನ್ಯಾಯಾಂಗ ಬಂಧನಕ್ಕೆ ಒಪಗಪಿಸಿದ್ದಾರೆ. ಈಗಾಗಲೇ ಕೇಸ್ ಗೆ ಸಂಬಂಧಿಸಿದಂತೆ 694 ಪುಟಗಳ ಚಾರ್ಜ್ ಶೀಟನ್ನು ಕೋರ್ಟ್ ಗೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಮುರುಘಾಶ್ರೀ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದ್ದು, ಆ ಕೇಸ್ ನ ಸಂತ್ರಸ್ತೆಯನ್ನು ಶಿಕ್ಷಕನೋರ್ವ ಮುರುಘಾಶ್ರೀ ಕೇಸ್ ಬಗ್ಗೆ ಸುಳ್ಳು ಹೇಳುವಂತೆ  ಪ್ರಚೋದಿಸಿದ್ದಾನೆಂಬ ಆರೋಪ‌ಡಿ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ. ಹೀಗಾಗಿ ಆಡಿಯೋ ಪ್ರಕರಣದ ಆರೋಪಿ ಬಸವರಾಜೇಂದ್ರ ನನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. 

ಇನ್ನು ‌ಆಡಿಯೋ ವೈರಲ್ ಕೇಸ್ ನ ತನಿಖೆ ಮುಂದುವರೆದ ಬೆನ್ನಲ್ಲೇ ಮುರುಘಾಮಠದ ಲ್ಲಿನ ಫೋಟೊ ‌ಕಳ್ಳತನ ಕೇಸ್ ನಲ್ಲಿ ಅರೆಸ್ಟ್ ಆಗಿದ್ದ ಬಸವರಾಜನ್ ಬೆಂಬಲಿಗ  ಮೋಹನ್‌ ಮೂರ್ತಿಯು ಈ ಕೃತ್ಯವೆಸಗಲು ಬಸವರಾಜನ್ ಸೂಚಿಸಿದ್ರು ಅಂತ ಹೇಳಿದ್ದಾನಂತೆ. ಅಲ್ಲದೇ ಆಡಿಯೋ  ವೈರಲ್ ಕೇಸ್ ನಲ್ಲಿ ಬಂಧನಕ್ಕೊಳಗಾಗಿರುವ ಬಸವರಾಜೇಂದ್ರ  ಕೂಡ ಪೊಲೀಸರ ಕೈಚಳಕಕ್ಕೆ ಬೆಚ್ಚಿ, ಅಸಲಿ ಸತ್ಯ ಬಾಯಿ ಬಿಟ್ಟಿದ್ದಾನಂತೆ.

10ಕ್ಕೂ ಹೆಚ್ಚು ಮಕ್ಕಳ ಅತ್ಯಾಚಾರ, ಒಬ್ಬಳ ಕೊಲೆ: ಮುರುಘಾ ಶ್ರೀ ಚಾರ್ಜ್‌ಶೀಟ್‌ನಲ್ಲಿದೆ ಎದೆ ಝಲ್ಲೆನಿಸುವ ಅಂಶಗಳು

ಈ ಕೃತ್ಯವೆಸಗಲು ಮಾಜಿ ಆಡಳಿತಾಧಿಕಾರಿ ಎಸ್. ಕೆ ಬಸವರಾಜನ್ ಪ್ರೇರೇಪಿಸಿದ್ರು ಅಂತ ಹೇಳಿದ್ದಾನಂತೆ. ಹೀಗಾಗಿ  ಬಸವರಾಜನ್ ಅರೆಸ್ಟ್ ಮಾಡಿರುವ ಪೊಲೀಸರು ಪೊಲೀಸ್ ಗೆಸ್ಟ್ ಹೌಸ್ ನಲ್ಲಿ ಪ್ರಕರಣದ ತನಿಖೆ‌ ನಡೆಸುತಿದ್ದಾರೆ. ಹೀಗಾಗಿ ಮುರುಘಾಶ್ರೀ ವಿರುದ್ಧದ  ಫೋಕ್ಸೊ ಕೇಸ್ ತನಿಖೆ ವೇಳೆ ವಿವಿಧ ಪ್ರಕರಣ ಹೊರ ಬರ್ತಿದ್ದು, ಮುರುಘಾಶ್ರೀ ವಿರುದ್ಧದ ಕೇಸ್  ಅಸಲಿನಾ ಅಥವಾ ಷಡ್ಯಂತ್ರವೋ ಎಂಬ ಗೊಂದಲ ನಿರ್ಮಾಣವಾಗಿದೆ.

ರೇಪ್ ಕೇಸ್‌: ಮುರುಘಾ ಮಠದ ಆಡಳಿತಾಧಿಕಾರಿಗೆ ಜಾಮೀನು

ಒಟ್ಟಾರೆ ಆಡಿಯೋ ವೈರಲ್ ಹಾಗೂ ಫೋಟೊ ಕಳ್ಳತನದ ಕೇಸ್ ಗೆ ಪ್ರಚೋದಿಸಿದ ಆರೋಪದಡಿ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಬಂಧನಕ್ಕೀಡಾಗಿದ್ದಾರೆ. ಹೀಗಾಗಿ ಮುರುಘಾಶ್ರೀ ಪರ ಭಕ್ತರಲ್ಲಿ ಸಂತಸ ಮೂಡಿದ್ರೆ, ಬಸವರಾಜನ್ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಹೀಗಾಗಿ ಮುರುಘಾ ಶ್ರೀ ವಿರುದ್ಧದ ಕೇಸ್ ನಲ್ಲಿ ಇಷ್ಟೆಲ್ಲಾ ಟ್ವಿಸ್ಟ್ ಹೊರಗೆ ಬರುತ್ತಿರುವ ಕಾರಣ ತನಿಖೆಯಲ್ಲಿ ಅಸಲಿಯತ್ತು ಬಯಲಾಗಬೇಕಿದೆ.

click me!