ಕುದರೆ ಸವಾರಿ ಮಾಡಿದ ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ

By Gowthami K  |  First Published Nov 10, 2022, 6:49 PM IST

2022 ನೇ ಸಾಲಿನ ಪೋಲಿಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಸಖತ್ ಆಟವಾಡಿದ ಪೋಲಿಸರು. ಮೂರು ದಿನಗಳ ಕಾಲ ಯಾದಗಿರಿ ಜಿಲ್ಲಾ ಪೋಲಿಸ್ ವತಿಯಿಂದ 2022ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಪೋಲಿಸ್ ಕವಾಯತು ಮೈದಾನದಲ್ಲಿ ಆಯೋಜನೆ. 


ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ನ.10): ಮನುಷ್ಯನ ದೇಹ ಹಾಗೂ ಮನಸ್ಸು ಸದೃಢ ಆಗಬೇಕಾದರೆ ಕ್ರೀಡೆ ಬಹಳ ಅವಶ್ಯಕ. ಆ ನಿಟ್ಟಿನಲ್ಲಿ ಕ್ರೀಡೆಯನ್ನು ನಾವು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಅದೇ ರೀತಿ ಪೋಲಿಸರು ಯಾವಾಗಲು ಕೈಯಲ್ಲಿ ಲಾಟಿ ಹಿಡಿದು ಸಮಾಜದ ಸ್ವಾಸ್ಥ್ಯ, ಕಾನೂನು-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸನ್ನದ್ಧರಾಗಿರುತ್ತಾರೆ. ಅಂತಹ ಪೋಲಿಸರಿಗಾಗಿ ಮೂರು ದಿನಗಳ ಕಾಲ ಯಾದಗಿರಿ ಜಿಲ್ಲಾ ಪೋಲಿಸ್ ವತಿಯಿಂದ 2022ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಪೋಲಿಸ್ ಕವಾಯತು ಮೈದಾನದಲ್ಲಿ ಆಯೋಜನೆ ಮಾಡಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಠಾಣೆಯ ಸಿಬ್ಬಂದಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

Latest Videos

undefined

ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಸಖತ್ ಹಾರ್ಸ್ ರೈಡಿಂಗ್..!
2022 ನೇ ಸಾಲಿನ ಪೋಲಿಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿಯವರು ಹಾರ್ಸ್ ರೈಡಿಂಗ್ ಮಾಡುವುದರ ಮೂಲಕ ಸಖತ್  ಆಗಿ ಮಿಂಚಿದರು. ಕುದರೆ ಸವಾರಿ ಮಡುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕೆ ತನ್ನದೆಯಾದ ಅಭ್ಯಾಸವೂ ಬಹಳ ಮುಖ್ಯ ಅಂತದ್ರಲ್ಲಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿಯವರು ಪೋಲಿಸ್ ಕವಾಯತು ಮೈದಾನದಲ್ಲಿ ನಾಲ್ಕು ಸುತ್ತು ರೈಡಿಂಗ್ ಮಾಡಿ ಬೆವರಿಳಿಸಿದರು. ಇದರಿಂದ ನೆರೆದಿದ್ದ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಎಸ್ಪಿಯವರ ಹಾರ್ಸ್ ರೈಡಿಂಗ್ ಗೆ ಫುಲ್ ಫೀದಾ ಆದ್ರು. ಪೋಲಿಸರು ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದಲ್ಲದೇ ಎಲ್ಲಾ ಕಲೆಗಳನ್ನು ಕರಗತ ಉಳ್ಳವರು ಎಂಬುದು ಇದರಿಂದ ಸಾಭೀತಾಗಿದೆ.  ಕುದರೆ ಸವಾರಿನ ನಂತರ ಎಸ್ಪಿ ಡಾ.ಸಿ.ಬಿ.ವೇದಮೂರ್ತಿಯವರ ಕುದರೆಯ ಮೈಯನ್ನು ಸವರಿ ಪೋಟೊ ಗೆ ಪೋಸ್ ನೀಡಿದರು.

ಗಮನ ಸೆಳೆದ ಹಗ್ಗಜಗ್ಗಾಟ, ಕಬ್ಬಡ್ಡಿ, ವಾಲಿಬಾಲ್
ಮೂರು ದಿನಗಳ ಕಾಲ ನಡೆದ ಪೋಲಿಸ್ ಕ್ರೀಡಾಕೂಟದಲ್ಲಿ ಹಲವು ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ, ಯಾದಗಿರಿ ವಿಭಾಗದ ಡಿವೈಎಸ್ಪಿ ಬಸವೇಶ್ವರ, ಸುರಪುರ ವಿಭಾಗದ ಡಿವೈಎಸ್ಪಿ ಮಂಜುನಾಥ, ಡಿಎಆರ್ ಡಿವೈಎಸ್ಪಿ ಪ್ರಭು ಪಾಟೀಲ್, ಸೈಬರ್ ಕ್ರೈಂ ಪಿಐ ಬಾಪುಗೌಡ ಪಾಟೀಲ್, ಸಿಪಿಐಗಳಾದ ಸುನೀಲ್ ಮೂಲಿಮನಿ, ದೌಲತ್ ಕುರಿ, ದೀಪಕ್ ಭೂಸರೆಡ್ಡಿ, ರಾಘವೇಂದ್ರ ಸೇರಿದಂತೆ ವಿವಿಧ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದರು. 100 ಮೀ ಓಟ, ರಿಲೇ, ಬರ್ಚಿ ಎಸೆತ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಆದ್ರೆ ಹಗ್ಗಜಗ್ಗಾಟ, ಕಬ್ಬಡ್ಡಿ ಮತ್ತು ನೋಡುಗರನ್ನು ಸಖತ್ತಾಗಿ ರಂಜಿಸಿದವು. ಹಗ್ಗಜಗ್ಗಾಟದಲ್ಲಿ ಸುರಪುರ ಹಾಗೂ ಡಿಎಆರ್ ತಂಡದ ಭಾರಿ ಹಣಾಹಣಿ ಏರ್ಪಟ್ಟಿತ್ತು. ಸುಮಾರು ಅರ್ಧ ಗಂಟೆಗಳ ಈ ಸ್ಪರ್ದೆ ನಡೆಯಿತು. ಆದ್ರೆ ಹೋರಾಟ ಮಾತ್ರ ಮುಂದುವರೆದಿತ್ತು. ಕೊನೆಯದಾಗಿ ಡಿಎಆರ್ ತಂಡ ರೋಚಕ ಗೆಲುವನ್ನು ದಾಖಲಿಸಿತು. ಇದರಿಂದ ಸಿಬ್ಬಂದಿಗಳು ಸಖತ್ ಏಂಜಾಯ್ ಮಾಡಿದ್ರು. ಪೋಲಿಸ್ ಸಿಬ್ಬಂದಿಗಳ ಕುಟುಂಬಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ಆಯೋಜನೆ ಮಾಡಲಾಗಿತ್ತು. ಪೋಲಿಸರ ಮಕ್ಕಳು ಕಾರ್ಯಕ್ರಮದಲ್ಲಿ ಡ್ಯಾನ್ಸ್, ಹಾಡು ಹಾಡಿದರು. ಖ್ಯಾತ ಹಾಸ್ಯ ಕಲಾವಿದ ಬಸವರಾಜ ಮಾಮನಿಯವರು ಕಾಮಿಡಿ ಮಾಡುವ ಮೂಲಕ ಪೋಲಿಸ್ ಹಾಗೂ ಅವರ ಕುಟುಂಬಸ್ಥರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದರು. 

ಕ್ರೀಡೆಯಲ್ಲೂ ಕನ್ನಡಿಗರಿಗೆ ಕಡಿಮೆ ಪ್ರಾತಿನಿಧ್ಯ

ಒತ್ತಡದ ಜೀವನದಲ್ಲಿ ಕ್ರೀಡಾಕೂಟ ಹಬ್ಬವಿದ್ದಂತೆ: ಡಾ.ಸಿ.ಬಿ.ವೇದಮೂರ್ತಿ
ಪೋಲಿಸರು ಯಾವಾಗಲು ಒತ್ತಡದ ಜೀವನವನ್ನು ಎದುರಿಸುವಂತವರು. ಪೋಲಿಸರು ಹಾಗೂ ಅವರ ಕುಟುಂಬಸ್ಥರ ಖುಷಿಯಾಗಯವಂತೆ ಪೋಲಿಸರ ವಾರ್ಷಿಕ ಕ್ರೀಡಾಕೂಟ ಮಾಡಿದೆ. ಹಾಗಾಗಿ ಈ ಕ್ರೀಡಾಕೂಟ ನಮಗೆ ಹಬ್ಬವಿದ್ದಂತೆ ಎಂದು ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಹೇಳಿದರು. ಕಳೆದ ಮೂರು ದಿನಗಳಿಂದ ಈ ಕ್ರೀಡಾಕೂಟ ನಡೆದಿದೆ. ಜಿಲ್ಲೆಯ ಎಲ್ಲಾ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಹಳ ಉತ್ಸುಕತೆಯಿಂದ ಭಾಗವಹಿಸಿದರು.

ಚಿತ್ರದುರ್ಗ: ಖೋಖೋ ಅಂಕಣ ಅಭಿವೃದ್ಧಿಗೆ ಶಾಸಕ ತಿಪ್ಪಾರೆಡ್ಡಿಗೆ ಕ್ರೀಡಾಪಟುಗಳ ಮನವಿ

ವಾಲಿಬಾಲ್, ಪೈರಿಂಗ್, ಕಬ್ಬಡ್ಡಿ, ಬರ್ಚಿ ಎಸೆತ, ಚಕ್ರ ಎಸೆತ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಜೊತೆಗೆ ಸುಂದರ ಸಂಜೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದವು. ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮನಸ್ಸು ಪೂರ್ವಕವಾಗಿ ಪಾಲ್ಗೊಂಡಿದ್ದರು. ಇದು ಎಲ್ಲರನ್ನು ಸಖತ್ ಏಂಜಾಯ್ ಮಾಡುವಂತೆ ಮಾಡಿದೆ ಎಂದರು.

click me!