ನಮ್ಮ ಸರ್ಕಾರ ಇರೋ ಸಮಯದಲ್ಲಿ ಒಂದು ಕೂಡ ಅಹಿತಕರ ಘಟನೆ ನಡೆಯಲಿಲ್ಲ. ಸ್ವಯಂ ಸೇವಕ ಸಂಘದವರು ದೇಶದ ಪರ ಕೆಲಸ ಮಾಡುತ್ತಾರೆ. ಕಾಶಪ್ಪನವರೇ ನಿಮಗೆ ಇನ್ನೂ ಬೆಳೆಯೋ ಅವಕಾಶ ಇದೆ. ಈ ರೀತಿ ಮಾತನಾಡೋದು ಸರಿಯಲ್ಲ, ತಪ್ಪು. ನೀವು ಈ ಬಗ್ಗೆ ಕ್ಷೇಮೆ ಕೇಳಬೇಕು ಎಂದ ಮಾಜಿ ಸಚಿವ ರೇಣುಕಾಚಾರ್ಯ
ದಾವಣಗೆರೆ(ಡಿ.14): ಪಂಚಮಸಾಲಿ ಮೀಸಲಾತಿ ಹೋರಾಟದ ವೇಳೆ ಹೋರಾಟಗಾರರ ಮೇಲೆ ಗೋಲಿ ಬಾರ್ ಮಾಡಲು ಸಂಚು ಮಾಡಿದ್ದರು. ಪೊಲೀಸರು ಜಯ ಮೃತ್ಯುಂಜಯ ಸ್ವಾಮೀಜಿಗಳನ್ನ ಮುಗಿಸಲು ಪ್ಲ್ಯಾನ್ ಮಾಡಿದ್ರು. ಸ್ವಾಮೀಜಿ ಮುಗಿಸಿದ್ರೆ ಹೋರಾಟ ನಿಲ್ಲುತ್ತೆ ಅಂತ ಗೋಲಿ ಬಾರ್ ಮಾಡಲು ಪ್ಲ್ಯಾನ್ ಮಾಡಿದ್ರು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇಂದು(ಶನಿವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಪಿ. ರೇಣುಕಾಚಾರ್ಯ ಅವರು, ಚನ್ನಮ್ಮ ವಂಶಸ್ಥರ ಮೇಲಿನ ಲಾಠಿ ಚಾರ್ಜ್ ಖಂಡಿಸಬೇಕು. ಇಲ್ಲವಾದರೆ ನಮಗೂ ಕೂಡ ಉಳಿಗಾಲವಿಲ್ಲದಂತಾಗುತ್ತದೆ. ನಾವು ಪಂಚಮಸಾಲಿ ಸಮುದಾಯದ ಜೊತೆ ಗಟ್ಟಿಯಾಗಿದ್ದೇವೆ. ಸಮುದಾಯ ಮೇಲಿನ ದಾಳಿಯನ್ನ ಎಲ್ಲ ಮಠಾಧೀಶರು ಖಂಡಿಸಬೇಕು ಎಂದು ತಿಳಿಸಿದ್ದಾರೆ.
ಕಾನೂನು ನನಗೂ ಒಂದೇ, ಸ್ವಾಮೀಜಿಗೂ ಒಂದೇ: ಸಿಎಂ ಸಿದ್ದರಾಮಯ್ಯ
ಪಂಚಮಸಾಲಿ ಸಮುದಾಯದವರು ಮೀಸಲಾತಿ ಅವರ ಹಕ್ಕನ್ನ ಕೇಳುತ್ತಿದ್ದಾರೆ. ಲಾಠಿ ಚಾರ್ಜ್ ವಿಚಾರವಾಗಿ ಗೃಹ ಸಚಿವ ಜಿ. ಪರಮೇಶ್ವರ್ ಅವರು ಹಗುರವಾಗಿ ಮಾತನಾಡಿದ್ದಾರೆ. ಪರಮೇಶ್ವರ್ ಅವರನ್ನ ಸಂಪುಟದಿಂದ ವಜಾ ಮಾಡಬೇಕು. ಲಾಠಿ ಚಾರ್ಜ್ ಮಾಡುವ ಬದಲು ಮುತ್ತು ಕೊಡಬೇಕಾ ಅಂತ ಕೇಳ್ತಾರೆ. ಅವರು ಮುತ್ತು ಕೊಡು ಅಂತ ಕೇಳಿದ್ದರಾ?. ಹೋರಾಟಗಾರರು ಇರುವಲ್ಲಿಗೆ ಹೋಗಿ ಅವರ ಮನವಿಯನ್ನ ಕೇಳಬೇಕಿತ್ತು ಎಂದು ಕಿಡಿ ಕಾರಿದ್ದಾರೆ.
undefined
ಆರ್ ಎಸ್ ಎಸ್ ನವರು ಹೋರಾಟದಲ್ಲಿ ಕಲ್ಲು ತೂರಿದ್ದಾರೆ ಎಂಬ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ರೇಣುಕಾಚಾರ್ಯ ಅವರು, ಹೋರಾಟ ಹತ್ತಿಕ್ಕಲು ಅವರೇ ಕಲ್ಲು ತೂರಿರಬಹುದು. ಅಧಿಕಾರದ ಪಿತ್ತ ನೆತ್ತಿಗೇರಿ ಈ ರೀತಿ ಮಾತನಾಡುತಿದ್ದಾರೆ. ಕಾಶಪ್ಪನವರ ಬಾರಕೋಲು ಹಿಡಿದು ಪಾದಯಾತ್ರೆ ಮಾಡಿದ್ರಿ. ಬಾರಕೋಲು ತೆಗಿಲೆ ಇಲ್ಲ ಸೊಂಟಕ್ಕೆ ಸುತ್ತುಕೊಂಡಿದ್ರು ಎಂದು ಲೇವಡಿ ಮಾಡಿದ್ದಾರೆ.
ನಮ್ಮ ಸರ್ಕಾರ ಇರೋ ಸಮಯದಲ್ಲಿ ಒಂದು ಕೂಡ ಅಹಿತಕರ ಘಟನೆ ನಡೆಯಲಿಲ್ಲ. ಸ್ವಯಂ ಸೇವಕ ಸಂಘದವರು ದೇಶದ ಪರ ಕೆಲಸ ಮಾಡುತ್ತಾರೆ. ಕಾಶಪ್ಪನವರೇ ನಿಮಗೆ ಇನ್ನೂ ಬೆಳೆಯೋ ಅವಕಾಶ ಇದೆ. ಈ ರೀತಿ ಮಾತನಾಡೋದು ಸರಿಯಲ್ಲ, ತಪ್ಪು. ನೀವು ಈ ಬಗ್ಗೆ ಕ್ಷೇಮೆ ಕೇಳಬೇಕು ಎಂದ ಮಾಜಿ ಸಚಿವ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಸರ್ಕಾರ ಮಾನವೀಯತೆ ಮರೆತು ಪಂಚಮಸಾಲಿ ಸಮುದಾಯದ ಮೇಲೆ ಲಾಠಿ ಚಾರ್ಜ್ ಮಾಡಿದೆ. ಪಂಚಮಸಾಲಿ ಶ್ರೀಗಳು ಮೊದಲಿನಿಂದಲೂ ಹೋರಾಟ ಮಾಡಿದ್ದಾರೆ. ಕೆಲ ಕಾಂಗ್ರೆಸ್ ನಾಯಕರು ಹಿಂದೆ ಬಿಜೆಪಿ ಸರ್ಕಾರದ ಸಮಯದಲ್ಲಿ ಸಾಕಷ್ಟು ಮಾತನಾಡಿದ್ರು. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ನೀಡಿದ್ದು ಲಾಠಿ ಏಟು. ಮೊದಲು ಮೀಸಲಾತಿ ಕೇಳೋದು ಸರಿ ಇದೆ ಅಂತ ಹೇಳಿದ್ರಿ. ಇವಾಗ ಮೀಸಲಾತಿ ನೀಡೊಕೆ ಬರೋದಿಲ್ಲ ಅಂತ ಹೇಳ್ತಾರೆ. ನಿರಾಣಿ ಉಳಿಸೋಕೆ ಈ ಹೋರಾಟ ಅಂತ ಹೇಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಮುಸ್ಲಿಂ ಸಮುದಾಯ ಮೇಲೆ ವ್ಯಾಮೋಹ ಜಾಸ್ತಿ. ಕಾವಿ ಬಟ್ಟೆ ಹಾಕೊಂಡವರ ಮೇಲೆ ಅಷ್ಟ್ಯಾಕೆ ಸಿಟ್ಟು? ಎಂದು ಲಾಠಿ ಚಾರ್ಜ್ ವಿರುದ್ಧ ಮಾಜಿ ಸಚಿವ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.