'ಬಿಎಸ್‌ವೈಗೆ ಸಿಎಂ ಆಗೋ ಅರ್ಜೆಂಟ್‌ ಇತ್ತು, ಸಂಪುಟ ವಿಸ್ತರಣೆಗೆ ಇಂಟ್ರೆಸ್ಟ್ ಇಲ್ಲ'

By Kannadaprabha News  |  First Published Aug 4, 2019, 1:07 PM IST

ಬಿಎಸ್‌ವೈ ಸರ್ಕಾರ ಪಾಪದ ಕೂಸು. ಯಡಿಯೂರಪ್ಪ ಅವರಿಗೆ ಸಿಎಂ ಆಗೋಕೆ ಅರ್ಜೆಂಟ್ ಇತ್ತು. ಆದ್ರೆ ಸಂಪುಟ ವಿಸ್ತರಣೆ ಮಾಡೋಕೆ ಇಂಟ್ರೆಸ್ಟ್‌ ಇಲ್ಲ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಸಂಪುಟ ವಿಸ್ತರಣೆ ತಡವಾಗ್ತಿರೋ ಬಗ್ಗೆ ಪ್ರತಿಕ್ರಿಯೆ ನೀಡಿ ಬಿಎಸ್‌ವೈ ವನ್ ಮ್ಯಾನ್ ಶೋ ಕೊಡೋಕೆ ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.


ವಿಜಯಪುರ(ಆ.04):  ಬಿಎಸ್‌ವೈ ಸರ್ಕಾರ ಪಾಪದ ಕೂಸು. ಯಡಿಯೂರಪ್ಪ ಅವರಿಗೆ ಸಿಎಂ ಆಗೋಕೆ ಅರ್ಜೆಂಟ್ ಇತ್ತು. ಆದ್ರೆ ಸಂಪುಟ ವಿಸ್ತರಣೆ ಮಾಡೋಕೆ ಇಂಟ್ರೆಸ್ಟ್‌ ಇಲ್ಲ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‌ವೈ ಒನ್ ಮ್ಯಾನ್ ಶೋ ಮಾಡುವ ಚಿಂತನೆ ಮಾಡಿದ್ದಾರೆ. ಇದೊಂದು ಅನೈತಿಕ ಸರ್ಕಾರ. ಯಡಿಯೂರಪ್ಪ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

Latest Videos

undefined

'17 ಅನರ್ಹ ಶಾಸಕರು ಬಿಎಸ್‌ವೈ ಅವ್ರನ್ನು ಕಿತ್ತು ತಿಂತಾರೆ'

ಕೃಷ್ಣಾ ನದಿ ಪ್ರವಾಹ ವಿಚಾರವಾಗಿ ಪ್ರತಿಕ್ರಿಯಿಸಿದ ಎಂ. ಬಿ. ಪಾಟೀಲ್ ಅವರು ಬಿಎಸ್‌ವೈ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ತಕ್ಷಣವೇ ಸಿಎಂ ಯಡಿಯೂರಪ್ಪ ಪ್ರವಾಹ ಪೀಡಿತರ ರಕ್ಷಣೆಗೆ ಬರಬೇಕು. ಸಿಎಂ ಒಂದು ಮೀಟಿಂಗ್ ಬಿಟ್ಟು ಬೇರೆನೂ ಮಾಡಿಲ್ಲ. ಕಂದಾಯ, ಕೃಷಿ ಸಚಿವರೇ ಇಲ್ಲ. ಸಂಬಂಧಪಟ್ಟ ಸಚಿವರೇ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಒಬ್ಬರೇ ಸರ್ಕಾರ ನಡೆಸೋ ಇರಾದೆ ಇದ್ಯಾ:

ಎಂ ಸಭೆಗೆ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ ಎಂ. ಬಿ. ಪಾಟೀಲ್ ಒಬ್ಬರೇ ಸರ್ಕಾರ ನಡೆಸಬೇಕು ಅನ್ನೊ ಇರಾದೆ ಇದೆಯಾ ಎಂದು ಬಿಎಸ್‌ವೈ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಖಾಯಂ ಆಗಿ ಬಿಎಸ್‌ವೈ ಮಾತ್ರ ಇರಲಿ. ವಿರೋಧ ಪಕ್ಷದಲ್ಲಿದ್ದಾಗ ಅವರು ತೋರಿಸುತ್ತಿದ್ದ ಅರ್ಜೆನ್ಸಿಯನ್ನು ಈಗ ತೋರಿಸಲಿ ಎಂದಿದ್ದಾರೆ.

ಕೇಂದ್ರ ಸರ್ಕಾರದಿಂದ ಬಾಕಿ ಹಣ ಕೊಡಿಸಲಿ:

ಕೇಂದ್ರ ಸರ್ಕಾರದ NDRF ಬಾಕಿ ಹಣವನ್ನ ನೀಡಲು ತಾರತಮ್ಯ ಇತ್ತು. ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆಯಲ್ಲಾ.. ಬಾಕಿ ಬರಬೇಕಾದ ಹಣವನ್ನು ಕೊಡಿಸಲಿ. ನೆರೆ ಹಾಗೂ ಬರ ಪೀಡಿತರ ರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಧಾವಿಸಬೇಕು ಎಂದಿದ್ದಾರೆ.

ಒಕ್ಕಲಿಗ ಅಧಿಕಾರಿಗಳನ್ನು ಟಾರ್ಗೆಟ್ ಮಾಡಲಾಗ್ತಿದೆ ಅನ್ನೋ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಸಿಎಂ ಬಿಎಸ್‌ವೈಗೆ ಹೊಸ ಸರ್ಕಾರ ಬಂದಿದೆ. ಯಡಿಯೂರಪ್ಪ ಅವರಿಗೆ ಹೊಸ ಹುರುಪು ಇದೆ. ಸಂಪೂರ್ಣ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇದು ಶೋಭೆ ತರುವುದಂತಲ್ಲ. ರಾಜಕಾರಣದಲ್ಲಿ ಜಾತಿ ಮುಖ್ಯವಲ್ಲ ಎಂದಿದ್ಧಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!