* ಸ್ವತಃ ನಾನು ಕೂಡಾ ಯತ್ನಾಳ್‌ಗೆ ಹೇಳಿದ್ದೇನೆ: ಈಶ್ವರಪ್ಪ
* ಪಕ್ಷ ತಗೆದುಕೊಂಡ ತೀರ್ಮಾನಕ್ಕೆ ಬದ್ಧನಾಗಿರಬೇಕು ಅಂತ ಯತ್ನಾಳ್‌ಗೆ ಹೇಳ್ತೇನೆ
* ಇದು ಪ್ರಚೋದನೆಯೂ ಅಲ್ಲ, ಯತ್ನಾಳ್ ಬಗ್ಗೆ ಹೈಕಮಾಂಡ್ ವೀಕ್ನೆಸ್ಸೂ ಅಲ್ಲ
ಬಾಗಲಕೋಟೆ(ಆ.01): ಬಿಜೆಪಿ ಶಾಸಕ ಒಬ್ಬ ಹಿಂದುತ್ವವಾದಿ, ಅಂತಹ ವ್ಯಕ್ತಿಯನ್ನ ಒಂದೇ ಬಾರಿ ಕಳೆದುಕೊಳ್ಳಬಾರು ಎನ್ನುವ ಉದ್ದೇಶವಿದೆ. ಯತ್ನಾಳ್ ಹಿಂದುತ್ವವಾದಿಯಾಗಿರೋಗೋಸ್ಕರ ಹೈಕಮಾಂಡ್ ಚಿಂತನೆ ಮಾಡತ್ತಿದೆ. ಯತ್ನಾಳ್ ಹೇಳಿಕೆಗೆ ಸಾಕಷ್ಟು ಬಾರಿ ನಿಮ್ಮ ಹೇಳಿಕೆ ಒಳ್ಳೆಯದಲ್ಲ ಅಂತ ಹೈಕಮಾಂಡ್ ಹೇಳಿದೆ. ಇದು ಪ್ರಚೋದನೆಯೂ ಅಲ್ಲ, ಯತ್ನಾಳ್ ಬಗ್ಗೆ ಹೈಕಮಾಂಡ್ ವೀಕ್ನೆಸ್ಸೂ ಅಲ್ಲ ಅಂತ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಬಿಜೆಪಿ ಪಕ್ಷದಲ್ಲಿ ಯತ್ನಾಳ್ ಬಾಯಿಗೆ ಕಡಿವಾಣ ಹಾಕ್ತಿಲ್ಲ ಎನ್ನುವ ವಿಚಾರದ ಬಗ್ಗೆ ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಈಶ್ವರಪ್ಪ, ಸ್ವತಃ ನಾನು ಕೂಡಾ ಯತ್ನಾಳ್ ಅವರಿಗೆ ಹೇಳಿದ್ದೇನೆ. ಇವತ್ತು ನಾನು ವಿಜಯಪುರಕ್ಕೆ ಹೋಗುತ್ತಿದ್ದೇನೆ. ಇವತ್ತು ಕೂಡಾ ನಾನು ಹೇಳುತ್ತೇನೆ. ಪಕ್ಷ ತಗೆದುಕೊಂಡ ತೀರ್ಮಾನಕ್ಕೆ ಬದ್ಧನಾಗಿರಬೇಕು ಅಂತ ಹೇಳ್ತೇನೆ ಎಂದು ತಿಳಿಸಿದ್ದಾರೆ.
ಯಡಿಯೂರಪ್ಪನವರು ಹೇಳಿದ್ದೇ ಎಲ್ಲವೂ ಆಗೋದಿಲ್ಲ: ಯತ್ನಾಳ್
ರಾಜ್ಯದಲ್ಲಿ ಮೂರು ದಿನ ರಾಷ್ಟ್ರೀಯ ನಾಯಕರು ವಾಸ್ತವ್ಯ ಹೂಡಿದ್ದರು. ಅವರ ಜೊತೆ ಮಾತುಕತೆಗೆ ಅವಕಾಶವಿತ್ತು. ಅವರು ಯಾಕೆ ಅವರ ಅಸಮಾಧಾನ ಹೇಳಿಕೊಳ್ಳಲಿಲ್ಲ ಅಂತ ನನಗೆ ಗೊತ್ತಾಗುತ್ತಿಲ್ಲ. ತಮ್ಮ ಭಾವನೆಗಳನ್ನ ಮಾಧ್ಯಮಗಳ ಮುಂದೆ ಹೇಳ್ತಾ ಹೋದ್ರೆ ಪಕ್ಷಕ್ಕೆ ಒಳ್ಳೆಯದು ಆಗಲ್ಲ ಅಂತ ಯತ್ನಳ್‌ಗೆ ಈಶ್ವರಪ್ಪ ಕಿವಿಮಾತು ಹೇಳಿದ್ದಾರೆ.