'ಉಪಚುನಾವಣೆ ಬಳಿಕ ಮಧ್ಯಂತರ ಚುನಾವಣೆ ಬರಲ್ಲ, ಸರ್ಕಾರ ಬದಲಾಗುತ್ತೆ'

Published : Nov 28, 2019, 01:21 PM IST
'ಉಪಚುನಾವಣೆ ಬಳಿಕ ಮಧ್ಯಂತರ ಚುನಾವಣೆ ಬರಲ್ಲ, ಸರ್ಕಾರ ಬದಲಾಗುತ್ತೆ'

ಸಾರಾಂಶ

ಬಿಜೆಪಿ ಅಭ್ಯರ್ಥಿ ಗೆದ್ದಾಗಿದೆ. ಎಷ್ಟು ಅಂತರದಲ್ಲಿ ಗೆಲ್ಲುತ್ತಾರೆಂಬುದನ್ನು ನೋಡಬೇಕಿದೆ ಎಂದು ಗುಪ್ತಚರ ಮಾಹಿತಿ ಆಧರಿಸಿಯೇ ಹೇಳುತ್ತಿದ್ದೆನೆಂದು ಯಡಿಯೂರಪ್ಪ ಹೇಳಿದ್ದಾರೆ| ಗುಪ್ತಚರ ಇಲಾಖೆ ಸಿಎಂ ಅವರನ್ನು ಖುಷಿ ಪಡಿಸಲು ಹಾಗೇ ಹೇಳಿರಬೇಕು| ಇಲ್ಲವೇ ತಪ್ಪು ಮಾಹಿತಿ ಕೊಟ್ಟಿರಬೇಕು ಎಂದ ಎಚ್ ಕೆ ಪಾಟೀಲ|

ಹಾವೇರಿ(ನ.28): ಉಪಚುನಾವಣೆ ಬಳಿಕ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಲ್ಲ, ಆದರೆ ಖಂಡಿತವಾಗಿಯೂ ಸರ್ಕಾರ ಬದಲಾಗುತ್ತೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಅವರು ಹೇಳಿದ್ದಾರೆ. 

ಗುರುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಗೆದ್ದಾಗಿದೆ. ಎಷ್ಟು ಅಂತರದಲ್ಲಿ ಗೆಲ್ಲುತ್ತಾರೆಂಬುದನ್ನು ನೋಡಬೇಕಿದೆ ಎಂದು ಗುಪ್ತಚರ ಮಾಹಿತಿ ಆಧರಿಸಿಯೇ ಹೇಳುತ್ತಿದ್ದೆನೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ಆದರೆ ಗುಪ್ತಚರ ಇಲಾಖೆ ಸಿಎಂ ಅವರನ್ನು ಖುಷಿ ಪಡಿಸಲು ಹಾಗೇ ಹೇಳಿರಬೇಕು, ಇಲ್ಲವೇ ತಪ್ಪು ಮಾಹಿತಿ ಕೊಟ್ಟಿರಬೇಕು ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಿರೇಕೆರೂರು ಕ್ಷೇತ್ರದಲ್ಲಿ ಬನ್ನಿಕೋಡ ಅವರ ಪ್ರಾಮಾಣಿಕತೆ, ಸೇವೆ, ನಿಷ್ಠೆ, ರೈತ ಹೋರಾಟ, ತ್ಯಾಗ, ಗೌರವದಿಂದ ಅನುಕಂಪದ ಅಲೆ ಸೃಷ್ಟಿಯಾಗಿದೆ. ಹೀಗಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಉತ್ತಮ ಜನಸ್ಪಂದನೆ ಸಿಗುತ್ತಿದೆ. ಬನ್ನಿಕೋಡ ಅವರೇ ಗೆಲ್ಲಲಿದ್ದಾರೆ ಎಂದು ಹೇಳಿದ್ದಾರೆ.

ಅನರ್ಹ ಶಾಸಕ ಬಿ.ಸಿ. ಪಾಟೀಲ್ ಪಕ್ಷಾಂತರ ಮಾಡುವ ಮೊದಲು ತೋರಿದ ವರ್ತನೆ ನಡೆನುಡಿ, ಜನರಿಗೆ ಸ್ಪಂದಿಸದೇ ಇರುವುದು ಅವರ ಮೇಲೆ ಆಕ್ರೋಶದ ಅಲೆ ಎದ್ದಿದೆ. ಹೀಗಾಗಿ ಆಕ್ರೋಷಗೊಂಡ ಮತದಾರರು ಬಿ ಸಿ ಪಾಟೀಲ್ ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!