ಮಂಗಳೂರು: ಕಟೀಲು ಮೇಳ ಸಂಚಾಲಕರಿಗೆ ಡಿಸಿ ಪತ್ರ

By Kannadaprabha NewsFirst Published Nov 28, 2019, 1:09 PM IST
Highlights

ಕಟೀಲು ಶ್ರೀದುರ್ಗಾಪರಮೇಶ್ವರಿ ಮೇಳಗಳ ನಿರ್ವಹಣೆಯ ಕುರಿತು ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶದ ಪ್ರತಿ ಜಿಲ್ಲಾಧಿಕಾರಿ ಸಿಂಧು ರೂಪೇಶ್‌ ಅವರ ಕೈಸೇರಿದೆ. ‘ನನಗೆ ಆದೇಶದ ಪ್ರತಿ ಸಿಕ್ಕಿದೆ, ಅದರಂತೆ ಕೆಲವೊಂದು ಅಂಶಗಳನ್ನು ಹೈಕೋರ್ಟ್‌ ಸೂಚಿಸಿದೆ. ಅವುಗಳನ್ನು ಪಾಲಿಸುವಂತೆ ಯಕ್ಷಗಾನದ ಸಂಘಟಕರಿಗೆ ಪತ್ರ ಬರೆಯಲಾಗುವುದು’ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು(ನ.28): ಕಟೀಲು ಶ್ರೀದುರ್ಗಾಪರಮೇಶ್ವರಿ ಮೇಳಗಳ ನಿರ್ವಹಣೆಯ ಕುರಿತು ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶದ ಪ್ರತಿ ಜಿಲ್ಲಾಧಿಕಾರಿ ಸಿಂಧು ರೂಪೇಶ್‌ ಅವರ ಕೈಸೇರಿದೆ.

‘ನನಗೆ ಆದೇಶದ ಪ್ರತಿ ಸಿಕ್ಕಿದೆ, ಅದರಂತೆ ಕೆಲವೊಂದು ಅಂಶಗಳನ್ನು ಹೈಕೋರ್ಟ್‌ ಸೂಚಿಸಿದೆ. ಅವುಗಳನ್ನು ಪಾಲಿಸುವಂತೆ ಯಕ್ಷಗಾನದ ಸಂಘಟಕರಿಗೆ ಪತ್ರ ಬರೆಯಲಾಗುವುದು’ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಪಟ್ಲ ಸತೀಶ್‌ ವಜಾಕ್ಕೆ ಕಾರಣ ಕೊಟ್ಟ ಕಟೀಲು ಮೇಳ ಸಂಚಾಲಕ, ಹೇಳಿದ್ದೇನು..?

ಕಟೀಲು ಆರೂ ಮೇಳಗಳ ದೈನಂದಿನ ಖರ್ಚುಗಳನ್ನು ಕುರಿತ ಲೆಕ್ಕಪತ್ರಗಳನ್ನು 15 ದಿನಗಳಿಗೊಮ್ಮೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಒಪ್ಪಿಸಬೇಕು, ಪ್ರತಿ ಯಕ್ಷಗಾನ ಪ್ರದರ್ಶನಕ್ಕೆ ಸಂಗ್ರಹಿಸಿದ ಮೊತ್ತಕ್ಕೆ ರಶೀದಿ ನೀಡುವುದು ಹಾಗೂ ಅದನ್ನು ಜಿಲ್ಲಾಧಿಕಾರಿಗೆ ಅದನ್ನು ನೀಡಬೇಕು, ಮೇಳದ ಕಲಾವಿದರಿಗೆ ನೀಡುವ ಸಂಭಾವನೆಯ ರಶೀದಿಯನ್ನೂ ನೀಡಬೇಕು ಎಂಬಿತ್ಯಾದಿ ಷರತ್ತುಗಳಿದ್ದ ಮಧ್ಯಂತರ ಆದೇಶವನ್ನು ನ.21ರಂದು ಹೈಕೋರ್ಟ್‌ ಮಧ್ಯಂತರ ಆದೇಶದಲ್ಲಿ ನೀಡಿತ್ತು.

ಡಿ.9ರಂದು ಮುಂದಿನ ವಿಚಾರಣೆ ಕೈಗೆತ್ತಿಕೊಳ್ಳಲಿದ್ದು ಅದುವರೆಗೆ ಹಾಲಿ ವ್ಯವಸ್ಥೆ ಮುಂದುವರಿಯಲಿದೆ.

ಸೈನೈಡ್‌ ಮೋಹನ್‌ಗೆ 18ನೇ ಕೊಲೆ ಪ್ರಕರಣದಲ್ಲಿ ಮರಣ ದಂಡನೆ ತೀರ್ಪು..!

click me!