* ಕೊರೋನಾ ನಿಯಂತ್ರಿಸುವಲ್ಲಿ ಸರ್ಕಾರಗಳು ವಿಫಲ
* ಸರ್ಕಾರಗಳಿಂದ ದುರಾಡಳಿತ: ಬಸವರಾಜ ರಾಯರಡ್ಡಿ ಆರೋಪ
* ಸಚಿವ ಬಿ.ಸಿ. ಪಾಟೀಲ್ ನಮ್ಮ ತಾಲೂಕಿನ ಆಸ್ಪತ್ರೆಗೆ ಭೇಟಿ ನೀಡಿರುವುದು ಸಂತಸ
ಯಲಬುರ್ಗಾ(ಮೇ.10): ದೇಶಾದ್ಯಂತ ಕೋರೋನಾ ಮಹಾಮಾರಿಗೆ ಹೆಚ್ಚು ಜನ ಬಲಿಯಾಗುತ್ತಿದ್ದಾರೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣವಾಗಿದೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಆರೋಪಿಸಿದ್ದಾರೆ.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದಿಂದ ಇಲ್ಲಿ ವರೆಗೊ ಕೋವಿಡ್‌ಗೆ ಅಗತ್ಯ ಲಸಿಕೆ ಕೊಡಿಸುವಲ್ಲಿ ಈ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಹೀಗಾಗಿ, ಜನ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿಗೆ ದುರಾಡಳಿತವೇ ಕಾರಣವಾಗಿದೆ ಎಂದರು.
undefined
ಕೇಂದ್ರ-ರಾಜ್ಯ ಸರ್ಕಾರಗಳು ಜನರ ಹಿತ ಮತ್ತು ಆರೋಗ್ಯ ಕಾಪಾಡಬೇಕಾದವರು ಕೇವಲ ತಮ್ಮ ಸ್ವಾರ್ಥ ಲಾಭಕ್ಕಾಗಿ ವಾಮಮಾರ್ಗದಿಂದ ಅಧಿಕಾರ ನಡೆಸುತ್ತಿದ್ದಾರೆ. ಸಿಎಂ ಯಡಿಯೂರಪ್ಪ ತಮ್ಮ ಸಚಿವ ಸಂಪುಟದಲ್ಲಿರುವ ಡಾ. ಸುಧಾಕರ, ಆರ್. ಅಶೋಕ, ಉಮೇಶ ಕತ್ತಿ ಸೇರಿದಂತೆ ಅನುಭವ ಇಲ್ಲದ ಆರೇಳು ಸಚಿವರನ್ನು ಕಿತ್ತುಹಾಕಿ ಅನುಭವ ಇರುವವರನ್ನು ಮಂತ್ರಿಯನ್ನಾಗಿ ಮಾಡಿದರೆ ಜನರಿಗೆ ಜನಪರ ಆಡಳಿತ ನೀಡಬಹುದು. ಈ ಕಾರ್ಯವನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಹೇಳಿದರು.
ಎಸ್‌ಪಿ, ಜಿಲ್ಲಾಧಿಕಾರಿ ದಾಳಿ: ಗಂಗವಾತಿಯಲ್ಲಿ ರೆಮ್‌ಡಿಸಿವಿರ್ ಅಕ್ರಮ ದಾಸ್ತಾನು ಪತ್ತೆ
ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲರು ನಮ್ಮ ತಾಲೂಕಿನ ಆಸ್ಪತ್ರೆಗೆ ಭೇಟಿ ನೀಡಿರುವುದು ಸಂತಸವಾಗಿದೆ. ಇದರಂತೆ ಪ್ರತಿ ತಿಂಗಳಿಗೊಮ್ಮೆ ಭೇಟಿ ನೀಡಿದರೆ ಅಧಿಕಾರಿಗಳು ಎಚ್ಚೆತ್ತುಗೊಂಡು ತಾಲೂಕಿನ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ನನ್ನ ಅಧಿಕಾರಾವಧಿಯಲ್ಲಿ ಯಲಬುರ್ಗಾಕ್ಕೆ 100 ಹಾಸಿಗೆ ಆಸ್ಪತ್ರೆ ನಿರ್ಮಿಸುವಾಗ ಬಿಜೆಪಿಯವರು ವಿರೋಧಿಸಿದರು. ಆದರೂ ನಾನು ಜನರ ಒಳಿತಿಗಾಗಿ ತಾಲೂಕಿನ ವಿವಿಧೆಡೆ 30 ಹಾಸಿಗೆ ಆಸ್ಪತ್ರೆ ಸೇರಿದಂತೆ ಅತೀ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಿದ್ದೇನೆ, ವಿನಹ ಸ್ವಾರ್ಥ ರಾಜಕಾರಣಕ್ಕಲ್ಲ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಂ. ಶಿರೂರ, ಜಿಪಂ ಮಾಜಿ ಸದಸ್ಯ ಅಶೋಕ ತೋಟದ, ಎಪಿಎಂಸಿ ಅಧ್ಯಕ್ಷ ವೀರಣ್ಣ ಹಳ್ಳಿಕೇರಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ಮರಕಟ್, ಯುವ ಮುಖಂಡರಾದ ರೇವಣೆಪ್ಪ ಸಂಗಟಿ, ಬಸವರಾಜ ಪೂಜಾರ, ಶರಣಪ್ಪ ಗಾಂಜಿ, ಮಾನಪ್ಪ ಪೂಜಾರ, ಬಸವರಾಜ ಕುಡಗುಂಟಿ ಮತ್ತಿತರರು ಇದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona