ರಾಜಕೀಯ ಲಾಭಕ್ಕೆ ನೆರೆ ಸಂತ್ರಸ್ತರ ಬಳಕೆ: ಲಕ್ಷ್ಮಣ ಸವದಿ

Published : Dec 10, 2022, 09:00 PM IST
ರಾಜಕೀಯ ಲಾಭಕ್ಕೆ ನೆರೆ ಸಂತ್ರಸ್ತರ ಬಳಕೆ: ಲಕ್ಷ್ಮಣ ಸವದಿ

ಸಾರಾಂಶ

ಕೃಷ್ಣಾ ನದಿ ತೀರದ 22 ಹಳ್ಳಿಗಳ ಪೈಕಿ ಈಗಾಗಲೇ 6 ಗ್ರಾಮಗಳ ಜನತೆಗೆ ರೆಡ್ಡೇರಹಟ್ಟಿ ಮತ್ತು ಜಿರೋ ಪಾಯಿಂಟ್‌ದಲ್ಲಿ ಪುನರ್ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ: ಲಕ್ಷ್ಮಣ ಸವದಿ

ಅಥಣಿ(ಡಿ.10):  ಕೃಷ್ಣಾ ನದಿ ತೀರದ 22 ಹಳ್ಳಿಗಳ ಪೈಕಿ ಈಗಾಗಲೇ 6 ಗ್ರಾಮಗಳ ಜನತೆಗೆ ರೆಡ್ಡೇರಹಟ್ಟಿ ಮತ್ತು ಜಿರೋ ಪಾಯಿಂಟ್‌ದಲ್ಲಿ ಪುನರ್ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮೂಲಭೂತ ಸೌಕರ್ಯಗಳ ನಂತರ ಎಲ್ಲ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುವುದು ಎಂದು ಮಾಜಿ ಡಿಸಿಎಂ ಹಾಗೂ ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

ಅವರು ತಾಲೂಕಿನ ನದಿ ಇಂಗಳಗಾಮ ಗ್ರಾಮದಲ್ಲಿ 496 ಲಕ್ಷ ರೂ ವೆಚ್ಚದ ನದಿ ಇಂಗಳಗಾವ ಮತ್ತು ತೀರ್ಥ ಗ್ರಾಮಗಳ ಸಂಪರ್ಕ ರಸ್ತೆ ಕಾಮಗಾರಿ ಮತ್ತು ತಡೆಗೋಡೆ ನಿರ್ಮಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಪ್ರವಾಹ ಬಂದ ಸಂದರ್ಭದಲ್ಲಿ ನದಿ ಇಂಗಳಗಾವ ಮತ್ತು ತೀರ್ಥ ಗ್ರಾಮಗಳ ಸಂಪರ್ಕ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿರುವುದರಿಂದ ರಸ್ತೆಯ ಎತ್ತರವನ್ನು ಹೆಚ್ಚಿಸಿ, ರಸ್ತೆ ಎರಡು ಬದಿ ರೈತರ ಜಮೀನುಗಳಲ್ಲಿ ಮಣ್ಣು ಕುಸಿತವಾಗದಂತೆ ತಡೆಗೋಡೆಗಳನ್ನು ನಿರ್ಮಿಸಲು ನೀರಾವರಿ ನಿಗಮದಿಂದ 496 ಲಕ್ಷ ರೂ ಗಳ ಅನುದಾನಕ್ಕೆ ಮಂಜುರಾತಿ ಪಡೆದುಕೊಳ್ಳಲಾಗಿದೆ ಎಂದು ಹೇಳಿದರು.

ಅಥಣಿ: ಕಬ್ಬು ಕಟಾವು ಕುಟುಂಬದ ಮಕ್ಕಳ ಕಹಿ ಬದುಕು..!

ನರೆ ಸಂತ್ರಸ್ತರಿಗೆ ನೀಡಬೇಕಾದ ಹಕ್ಕು ಪತ್ರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಕೃಷ್ಣಾ ನದಿ ತೀರದ ಅನೇಕ ಗ್ರಾಮಗಳ ಪೈಕಿ ಈಗಾಗಲೇ ಅವರಕೋಡ, ನಾಗನೂರ ಪಿಕೆ, ದೊಡ್ಡವಾಡ ಗ್ರಾಮಗಳ ಸಂತ್ರಸ್ತರಿಗೆ ರೆಡ್ಡಿರಹಟ್ಟಿ ಗ್ರಾಮದಲ್ಲಿ ಆರ್‍ ಸಿ ಸೆಂರ್ಟ ಗುರುತಿಸಲಾಗಿದೆ. ಅದೇ ರೀತಿ ಜನವಾದ, ಮಹೇಶವಾಡಗಿ ಮತ್ತು ನಂದೇಶ್ವರ ಗ್ರಾಮಗಳ ಸಂತ್ರಸ್ತರಿಗೆ ಜಿರೋ ಪಾಯಿಂಚ್‌ ದಲ್ಲಿ ಆರ್‍ ಸಿ ಸೆಂರ್ಟ ಗುರುತಿಸಲಾಗಿದೆ. ಈ ಆರ್‌ಸಿ ಸೆಂರ್ಟ ಗಳಲ್ಲಿ ಇನ್ನೂ ಕೆಲವು ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಅವುಗಳನ್ನು ಒದಗಿಸಿದ ನಂತರ ನೆರೆ ಸಂತ್ರಸ್ತರಿಗೆ ಹಕ್ಕು ಪತ್ರಗಳನ್ನು ನೀಡಲಾಗುವುದು. ಈಗ ಹಕ್ಕು ಪತ್ರಗಳನ್ನು ನೀಡುವಂತೆ ಹೋರಾಟ ನಡೆಸುತ್ತಿರುವವರ ಹಿಂದೆ ರಾಜಕೀಯ ಕುಮಕ್ಕು ಇದೆ. ಚುನಾವಣೆಗಳು ಬಂದಾಗ ರಾಜಕೀಯ ಲಾಭ ಪಡೆಯಲು ಕೆಲವರು ಇಂತಹ ಪ್ರಯತ್ನಗಳನ್ನು ಮಾಡುತ್ತಾರೆ. ನಮ್ಮೂರಿನ ಜನತೆಯ ಮೇಲೆ ನಮಗೆ ಭರವಸೆ ಇದೆ. ನೆರೆ ಸಂತ್ರಸ್ತರ ಬೇಕು ಬೇಡಿಕೆಗಳ ಬಗ್ಗೆ ನಮಗೆಲ್ಲ ಅರಿವಿದೆ. ಸರ್ಕಾರದಿಂದ ಇನ್ನಷ್ಟು ಅನುದಾನ ತರುವ ಮೂಲಕ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸ್ವಲ್ಪ ವಿಳಂಬವಾಗಿದೆ, ಶೀಘ್ರದಲ್ಲಿಯೇ ಶುದ್ಧ ಕುಡಿಯುವ ನೀರು, ವಿದ್ಯುತ್‌ ಸಂಪರ್ಕ ವ್ಯವಸ್ಥೆ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಮನೆಗಳನ್ನು ನಿರ್ಮಿಸಿಕೊಳ್ಳಲು ಹಕ್ಕು ಪತ್ರಗಳನ್ನು ವಿತರಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಗ್ರಾಮದ ಹಿರಿಯರಾದ ಗುರುಬಸು ತೇವರಮನಿ, ಕುಮಾರ ಮಠಪತಿ, ಅಣ್ಣಪ್ಪ ಮದಬಾವಿ, ಮಲ್ಲಪ್ಪ ಟಕ್ಕಣ್ಣವರ, ಮಹೇಶ ಮಟಗಾರ, ಮಹಾಂತೇಶ ಘುಳಪ್ಪನವರ, ಹಿಪ್ಪರಗಿ ಆಣೆಕಟ್ಟು ಯೋಜನೆಯ ನೀರಾವರಿ ಇಲಾಖೆಯ ಅಧಿಕಾರಿಗಳಾದ ಶಾಂತೇಶ ಭಾಗಿ, ಪ್ರವೀಣ… ಹುಣಸಿಕಟ್ಟಿ, ವಿನಯ ಕೋಳಿ, ನಾನೂ ಪವಾರ, ಗುತ್ತಿಗೆದಾರ ಎಸ್‌ ಬಿ ಹಮಿನಿ, ವೀರೇಶ ಮಟಗಾರ, ಶಿವಾನಂದ ವಾಲಿ, ಯಲ್ಲಪ್ಪ ಡಪಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
 

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC