ಕೊರೋನಾ ಕಾಟಕ್ಕೆ ಸುಸ್ತಾದ ಸಿದ್ದರಾಮಯ್ಯ: ಮಾಸ್ಕ್‌ ಮೊರೆ ಹೋದ ಸಿದ್ದು!

Suvarna News   | Asianet News
Published : Mar 20, 2020, 11:27 AM IST
ಕೊರೋನಾ ಕಾಟಕ್ಕೆ ಸುಸ್ತಾದ ಸಿದ್ದರಾಮಯ್ಯ: ಮಾಸ್ಕ್‌ ಮೊರೆ ಹೋದ ಸಿದ್ದು!

ಸಾರಾಂಶ

ವಿಧಾನಸೌಧಕ್ಕೆ ಮಾಸ್ಕ್‌ ಧರಿಸಿ ಬಂದ ಸಿದ್ದರಾಮಯ್ಯ| ಮೋದಿ ಭಾಷಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಹಣ ಬಿಡುಗಡೆ ಮಾಡಬೇಕಿತ್ತು| ನಮ್ಮ ಸರ್ಕಾರವೂ ಸಹ ಮನೆಯಿಂದ ಹೊರಗೆ ಬರಬೇಡಿ ಅಂತ ಹೇಳಿದೆ, ಅದನ್ನೇ ಮೋದಿ ಹೇಳಿದ್ದಾರೆ|

ಬೆಂಗಳೂರು(ಮಾ.20): ಕೊರೋನಾ ವೈರಸ್‌ ಎಲ್ಲರಿಗೂ ಕಾಟ ಕೊಡುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಇಂದು(ಶುಕ್ರವಾರ) ವಿಧಾನಸೌಧಕ್ಕೆ ಮಾಸ್ಕ್‌ ಹಾಕಿಕೊಂಡೇ ಬಂದಿದ್ದಾರೆ. 

ಅಮೆರಿಕದ ಸಮುದ್ರ ಮಧ್ಯೆ ಹಡಗಲ್ಲಿ 131 ಭಾರತೀಯರ ದಿಗ್ಬಂಧನ

ಇದೇ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ(ಗುರುವಾರ) ಮಾಡಿದ ಭಾಷಣ ಪರಿಹಾರ ಅಂತ ಅನಿಸಿಲ್ಲ. ರಾಜ್ಯಗಳಿಗೆ ಪರಿಹಾರ ಹಣ ನೀಡಬೇಕಿತ್ತು. ಆದರೆ ನೀಡಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ದೊಡ್ಡ ಮೊತ್ತದ ಹಣ ಪರಿಹಾರ ಕಾರ್ಯಕ್ರಮಕ್ಕೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಭಾಷಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಹಣ ಬಿಡುಗಡೆ ಬಗ್ಗೆ ಘೋಷಣೆ ಮಾಡಬೇಕಿತ್ತು. ತುರ್ತು ನಿಧಿ ಕೊಡಬೇಕಿತ್ತು. ಸುಮ್ಮನೆ ಭಾಷಣ ಮಾಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. 

ಭಾರತದಲ್ಲಿ ಕೊರೋನಾಗೆ 5ನೇ ಬಲಿ : ಜೈಪುರದಲ್ಲಿ ವ್ಯಕ್ತಿ ಸಾವು

ಜನತಾ ಕರ್ಪ್ಯೂ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಸರ್ಕಾರವೂ ಸಹ ಮನೆಯಿಂದ ಹೊರಗೆ ಬರಬೇಡಿ ಅಂತ ಹೇಳಿದೆ, ಅದನ್ನೇ ಮೋದಿ ಹೇಳಿದ್ದಾರೆ. ಬರೀ ಭಾಷಣದಿಂದ ಕೊರೋನಾ ಕಂಟ್ರೋಲ್ ಆಗುತ್ತಾ..? ತುರ್ತು ನಿಧಿ ಕೊಡಬೇಕು ಎಂದು ಹೇಳಿದ್ದಾರೆ. 
 

PREV
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!