ಲಿಂಗಾಯತ ಪ್ರತ್ಯೇಕ ಧರ್ಮ: ಸಿದ್ದರಾಮಯ್ಯ ಪಶ್ಚಾತ್ತಾಪದ ಮಾತು..!

By Web DeskFirst Published Dec 8, 2018, 7:27 PM IST
Highlights

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನನ್ನದೇನೂ ತಪ್ಪಿಲ್ಲ ಎಂದು ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ.

ಚಾಮರಾಜನಗರ, [ಡಿ,08]: ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಭಾರಿ ಜೋರಾಗಿತ್ತು. ಹಲವು ಮಠಾಧೀಶರು, ಲಿಂಗಾಯತ ಸಚಿವರು ಮಾತಿಗೆ ಕಟ್ಟುಬಿದ್ದು, ಪ್ರತ್ಯೇಕ ಧರ್ಮಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಕೂಡ ಮಾಡಿದ್ದರು.

ಆದ್ರೆ ಇದೀಗ ಸಿದ್ದರಾಮಯ್ಯ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನನ್ನದೇನೂ ತಪ್ಪಿಲ್ಲ ಎಂದು ಪಶ್ಚಾತ್ತಾಪದ ಮಾತಾಡಿದ್ದಾರೆ.

ಚಾಮರಾಜನಗರದಲ್ಲಿ ಇಂದು [ಶನಿವಾರ] ನಳಂದಾ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತಾಡಿದ ಸಿದ್ದರಾಮಯ್ಯ, ನಾನೇನು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮುಂದಾಗಲಿಲ್ಲ.

ಲಿಂಗಾಯತರೇ ಬಂದು ಪ್ರತ್ಯೇಕ ಧರ್ಮ ಮಾಡಿ ಎಂದು ಗಂಟು ಬಿದ್ದರು. ಆದ್ರೆ ತಪ್ಪೇ ಮಾಡದ ನನ್ನ ಬಗ್ಗೆ ಅಪಪ್ರಚಾರ ಮಾಡಲಾಯಿತು.ಹೀಗಾಗಿ ನಾನು ಇನ್ಮಂದೆ ಧರ್ಮದ ವಿಚಾರದಲ್ಲಿ ಹುಷಾರಾಗಿರ್ತಿನಿ ಎಂದರು.

ಇನ್ನೂ, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟವೇ ಪರೋಕ್ಷವಾಗಿ ಅಧಿಕಾರಕ್ಕೆ ಬರಲೂ ಸಾಧ್ಯವಾಗಲಿಲ್ಲ ಎಂದು ಒಪ್ಪಿಕೊಂಡಿದ್ದ ಡಿಕೆಶಿ ಗದಗನಲ್ಲಿ ಕ್ಷಮೆಯಾಚಿಸಿದ್ದರು.

ಈ ಕುರಿತು ಇಂದು [ಶನಿವಾರ] ನವದೆಹಲಿಯಲ್ಲಿ ಮಾತಾಡಿದ ಮಾತೆ ಮಹಾದೇವಿ,  ಡಿಕೆಶಿ ವಿರುದ್ಧ ಕಿಡಿಕಾರಿದ್ದು, ಡಿಕೆ ಶಿವಕುಮಾರ್​ ನಮ್ಮ ಸಮುದಾಯದ ಪ್ರತಿನಿಧಿಯಲ್ಲ.

ರಾಜಕೀಯ ಒಳಸುಳಿಗಳಿಂದ ಅವರು ಈ ರೀತಿ ಮಾತಾಡಿದ್ದಾರೆ ಹೊರತು, ಇದು ಸತ್ಯ ಸಂಗತಿ ಅಲ್ಲ ಎಂದು ತಿರುಗೇಟು ನೀಡಿದರು.

click me!