ಮೈತ್ರಿ ಸರ್ಕಾರದ ಸಚಿವರುಗಳ ನಡುವೆ ಶುರುವಾಯ್ತು ಜಂಗಿ ಕುಸ್ತಿ

By Web DeskFirst Published Sep 25, 2018, 4:28 PM IST
Highlights

ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಇಬ್ಬರು ಸಚಿವರುಗಳು  ಜಂಗಿ ಕುಸ್ತಿಗೆ ಇಳಿದಿದ್ದಾರೆ.

ಚಾಮರಾಜನಗರ, [ಸೆ.24]: ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಮತ್ತೊಮ್ಮೆ ಸಾಬೀತಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಇಬ್ಬರು ಸಚಿವರುಗಳು ಜಂಗಿ ಕುಸ್ತಿಗೆ ಇಳಿದಿದ್ದಾರೆ.

ಇತ್ತೀಚೆಗಷ್ಟೇ ಸ್ವಚ್ಛತಾ ಕಾರ್ಯದಲ್ಲಿ ಕಾಂಗ್ರೆಸ್ ಗಿಡಗಳನ್ನು ಕಿತ್ತು ಹಾಕುತ್ತೇನೆ ಎಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ವಿರುದ್ಧ ಮೈತ್ರಿ ಸರ್ಕಾರದ ಮತ್ತೋರ್ವ ಸಚಿವ ಸಿ‌.ಪುಟ್ಟರಂಗಶೆಟ್ಟಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪುಟ್ಟರಂಗಶೆಟ್ಟಿ, ಒಂದು ತರ ಕನಸ್ಸು ಕಾಣ್ತಾ ಇದ್ದಾನೆ, ಈಗ ತಾನೇ ಕಣ್ಣು ಬಿಟ್ಟಿದ್ದೀನಿ ಅಂತ ಅವನಿಗೆ ಗೊತ್ತಿಲ್ಲ ಎಂದು ಏಕವಚನದಲ್ಲಿಯೇ ಮಹೇಶ್ ವಿರುದ್ಧ ಕಿಡಿಕಾರಿದರು.

 ಅಸಂಬದ್ಧ ಹೇಳಿಕೆಗಳನ್ನುಕೊಡಬಾರದು, ಈ ತರಾ ಮಾಡಿದ್ರೆ ಅವನೇ ಕಿತ್ತು ಹೋಗುತ್ತಾನೆ, ಇವನ್ಯಾವ ದೊಡ್ಡ ಲೀಡರ್? ಮನಸ್ಸು ಮಾಡಿದರೆ ನಾಳೆನೇ ಸಚಿವ ಸಂಪುಟದಿಂದ ಕಿತ್ತಾಕಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಪ್ಪಿ ತಪ್ಪಿ ಅವನ ಪುಣ್ಯಕ್ಕೆ ಸಚಿವ ಸ್ಥಾನ ಸಿಕ್ಕಿದೆ, ಕಾಂಗ್ರೆಸ್ ಹೆಮ್ಮರ ಅದನ್ನು ಕೀಳಲು ಯಾರಿಂದಲೂ ಸಾಧ್ಯವಿಲ್ಲ, ಒಂದು ಬೇರು ಕಿತ್ತರೆ ನೂರು ಬೇರು ಹುಟ್ಟಕೊಳ್ಳುತ್ತವೆ, ಈ ತರ ಹೇಳಿಕೆ ಕೊಟ್ಟರೆ  ಅವನಿಗೆ ಗತಿ ಕಾದಿದೆ ಎಂದು  ವಾಗ್ದಾಳಿ ನಡೆಸಿದರು.

click me!