ಧರ್ಮ ಸಮ್ಮೇಳನ ಕಲ್ಯಾಣ ನಾಡಿನ ಅಭಿವೃದ್ಧಿ ಬಯಸಲಿ: ಶೆಟ್ಟರ್

By Kannadaprabha News  |  First Published Oct 24, 2023, 6:20 AM IST

ರಂಭಾಪುರಿ ಜಗದ್ಗರುಗಳು ದಸಾರ ಧರ್ಮ ಸಮ್ಮೇಳನಕ್ಕೆ ಹಲವು ವರ್ಷಗಳ ಇತಿಹಾಸ ಇದೆ. ಧರ್ಮ ಪರಂಪರೆಯಲ್ಲಿ ದೊಡ್ಡ ಪರಂಪರೆಗೆ ನಾಂದಿ ಹಾಡಿ ದಸರಾ ಹಬ್ಬಕ್ಕೆ ಹೆಚ್ಚಿನ ಮಹತ್ವ ತಂದಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಪಂಚಪೀಠಗಳು ಜಾತಿ, ಮತ-ಪಂಥಗಳ ಹೇಳದೇ ಜನರನ್ನು ಒಗ್ಗಟ್ಟಾಗಿಸುವ ದೊಡ್ಡ ಸಂದೇಶ ಸಾರಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ ಎಂಬುದು ಜಾತಿ ನಾಶಕ್ಕೆ ಕಾರಣವಾಗಲಿದೆ ಎಂದು ತಿಳಿಸಿದ ಜಗದೀಶ ಶೆಟ್ಟರ್ 


ಲಿಂಗಸುಗೂರು(ಅ.24): ರಂಭಾಪುರಿ ಜಗದ್ಗುರಗಳು ಅದ್ಧೂರಿಯಾಗಿ ಹಮ್ಮಿಕೊಂಡಿರುವ ದಸರಾ ಧರ್ಮ ಸಮ್ಮೇಳನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಅವಲೋಕ ಪರಾಮರ್ಶೆ ನಡೆಸಬೇಕೆಂದು ಮಾಜಿ ಮುಖ್ಯಮಂತ್ರಿ ಹಿರಿಯ ಕಾಂಗ್ರೆಸ್ ನಾಯಕ ಜಗದೀಶ ಶೆಟ್ಟರ್ ಹೇಳಿದರು.

ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ರಂಭಾಪುರಿ ಜಗದ್ಗುರುಗಳ ಧರ್ಮ ಸಮ್ಮೇಳನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಂಭಾಪುರಿ ಜಗದ್ಗರುಗಳು ದಸಾರ ಧರ್ಮ ಸಮ್ಮೇಳನಕ್ಕೆ ಹಲವು ವರ್ಷಗಳ ಇತಿಹಾಸ ಇದೆ. ಧರ್ಮ ಪರಂಪರೆಯಲ್ಲಿ ದೊಡ್ಡ ಪರಂಪರೆಗೆ ನಾಂದಿ ಹಾಡಿ ದಸರಾ ಹಬ್ಬಕ್ಕೆ ಹೆಚ್ಚಿನ ಮಹತ್ವ ತಂದಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಪಂಚಪೀಠಗಳು ಜಾತಿ, ಮತ-ಪಂಥಗಳ ಹೇಳದೇ ಜನರನ್ನು ಒಗ್ಗಟ್ಟಾಗಿಸುವ ದೊಡ್ಡ ಸಂದೇಶ ಸಾರಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ ಎಂಬುದು ಜಾತಿ ನಾಶಕ್ಕೆ ಕಾರಣವಾಗಲಿದೆ ಎಂದು ತಿಳಿಸಿದರು.

Latest Videos

undefined

ಸಚಿವ ಸಂಪುಟ ಬದಲಾವಣೆ ಹೈಕಮಾಂಡ್ ನಿರ್ಧಾರ: ಸಚಿವ ಎಂ.ಬಿ.ಪಾಟೀಲ್

ಮಾನವ ಸಮಾಜದಲ್ಲಿರುವ ಸ್ವ ಪ್ರತಿಷ್ಠೆ, ಜಾತಿ ಸಂಘರ್ಷಗಳಿಗೆ ಕಡಿವಾಣ ಹಾಕಲು ಭಾರತ ಧರ್ಮ ಪರಂಪರೆ ಸೌಹಾರ್ಧತೆ ಕಾಪಾಡುತ್ತದೆ. ಬಸವಣ್ಣ, ರೇಣುಕರ ಸಂದೇಶಗಳ ಆಚರಣೆ ಮಾಡಿ ಶಾಂತಿ ನೆಲೆಸಲು ಕಾರಣವಾಗಬೇಕು. ಕಲ್ಯಾಣ ಕರ್ನಾಟಕದ ಭಾಗದಲ್ಲಿ ನಡೆಯುತ್ತಿರುವ ಧರ್ಮ ಸಮ್ಮೇಳನ ಕಲ್ಯಾಣ ಕರ್ನಾಟಕದ ಅಭಿವೃದ್ದಿ ಬಯಸಬೇಕು ಎಂದರು.

ಕಲ್ಯಾಣ ನಾಡಿನ ಅಭಿವೃದ್ಧಿ ಕುರಿತು ವಿಧಾಸಭೆಯಲ್ಲಿ ಅನೇಕ ಸಲ ಮಾತನಾಡಿರುವೆ. ಹಿಂದುಳಿದ ಭಾಗದ ಅಭಿವೃದ್ದಿಗೆ ನಂಜುಡಪ್ಪ ವರದಿಯಂತೆ ಸಾವಿರಾರು ಕೋಟಿ ಹಣ ಖರ್ಚು ಮಾಡಿದ್ದೇವೆ. ಇದರ ಪರಿಶೀಲನೆ ನಡೆಯಬೇಕು. ಸಾವಿರಾರು ಕೋಟಿ ಅನುದಾನ ನೀಡಿದರು ಕಲ್ಯಾಣ ಕರ್ನಾಟಕ ಹಿಂದುಳಿದಿದೆ. ಇದರ ಸಮಗ್ರ ಸಮೀಕ್ಷೆ ಆಗಬೇಕಿದೆ. ಅಂದಾಗ ಶಿಕ್ಷಣ, ಆರೋಗ್ಯ, ಸಾಮಾಜಿಕ ಸ್ಥಿತಿಗತಿಯ ಅವಲೋಕ ಮಾಡಿ ಡಾ.ನಂಜುಡಪ್ಪ ವರದಿ ಜಾರಿ ಅಧ್ಯಯನ ಅಗತ್ಯ. ಧರ್ಮ ಸಮ್ಮೇಳನದಲ್ಲಿ ಧರ್ಮದ ವೇದಿಕೆಗಳಲ್ಲಿ ಕಲ್ಯಾಣ ನಾಡಿನ ಅಭಿವೃದ್ದಿ ಚರ್ಚೆ ಆಗಲಿ. ಶೈಕ್ಷಣಿಕ, ಆರೋಗ್ಯ, ನೌಕರಿಗಳ ಅವಲೋಕ ಮಾಡಿ ಅವಕಾಶ ನೀಡಬೇಕಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ, ಮಮ್ಮಡಿ ಚಂದ್ರಶೇಖರ ಶ್ರೀ, ರೇಣುಕಾಚಾರ್ಯ, ಶರಣಬಸ ಗುಡಧಿನ್ನಿ, ವಾಮದೇವ ಮಹಂತ ಶ್ರೀ, ಮದ್ದಾನೆ ಹಿರೇಮಠ ಕರಿಬಸವ ಶಿವಾಚಾರ್ಯ, ಬೂದಿಬಸವ ಶ್ರೀ, ನವಲಕಲ್ ಸೋಮನಾಥ ಶ್ರೀ, ಕೊಡೇಕಲ್ ಶಿವಕುಮಾರ ಶ್ರೀ ಸೇರಿದಂತೆ ಇದ್ದರು.

click me!