ಮತ್ತೆ ಸಂಸದನಾದರೆ ಶಿವಮೊಗ್ಗ- ಭದ್ರಾವತಿಗೆ ಮೆಟ್ರೋ ವ್ಯವಸ್ಥೆ: ರಾಘವೇಂದ್ರ ಭರವಸೆ

By Kannadaprabha News  |  First Published Oct 24, 2023, 1:00 AM IST

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಮರು ಆಯ್ಕೆಯಾದಲ್ಲಿ ಶಿವಮೊಗ್ಗ- ಭದ್ರಾವತಿ ಅವಳಿ ನಗರಗಳಿಗೆ ಮೆಟ್ರೋ ವ್ಯವಸ್ಥೆ ಒದಗಿಸುವುದಾಗಿ ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು. 


ಭದ್ರಾವತಿ (ಅ.24): ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಮರು ಆಯ್ಕೆಯಾದಲ್ಲಿ ಶಿವಮೊಗ್ಗ- ಭದ್ರಾವತಿ ಅವಳಿ ನಗರಗಳಿಗೆ ಮೆಟ್ರೋ ವ್ಯವಸ್ಥೆ ಒದಗಿಸುವುದಾಗಿ ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು. ನಗರಸಭೆ ವತಿಯಿಂದ  ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದಿನ ಎಲ್ಲ ಚುನಾವಣೆಗಳಲ್ಲೂ ನನ್ನ ಗೆಲುವಿಗೆ ಭದ್ರಾವತಿ ಕ್ಷೇತ್ರದ ಜನರ ಕೊಡುಗೆ ಸಹ ಇದೆ. ತಾಯಿ ಶ್ರೀ ಚಾಮುಂಡೇಶ್ವರಿ ಆರ್ಶೀವಾದದಿಂದ ಈ ಬಾರಿಯೂ ಆಯ್ಕೆಯಾಗುವ ವಿಶ್ವಾಸವಿದೆ ಎಂದರು.

ಶಿವಮೊಗ್ಗ, ಭದ್ರಾವತಿ ಅವಳಿ ನಗರಗಳಲ್ಲಿ ಮೈಸೂರು ದಸರಾ ಮಾದರಿಯಲ್ಲಿಯೇ ನಾಡಹಬ್ಬ ದಸರಾ ಆಚರಣೆ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ.ದ್ದು, ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಪಕ್ಷಾತೀತ, ಜಾತ್ಯತೀತವಾಗಿ ಕಾರ್ಯನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು. ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. 

Tap to resize

Latest Videos

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಖಚಿತ: ರಕ್ಷಾ ರಾಮಯ್ಯ

ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪಕುಮಾರ್, ಪೌರಾಯುಕ್ತ ಎಚ್.ಎಂ. ಮನುಕುಮಾರ್, ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಚನ್ನಪ್ಪ ಹಾಗೂ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರಾದ ಬಸವರಾಜ್, ಜಾರ್ಜ್, ಆರ್. ಮೋಹನ್ ಕುಮಾರ್, ಬಷೀರ್ ಅಹಮದ್, ಅನುಸುಧಾ ಮೋಹನ್ ಪಳನಿ, ಲತಾ ಚಂದ್ರಶೇಖರ್, ಪ್ರೇಮ ಬದರಿನಾರಾಯಣ, ಶಶಿಕಲಾ ನಾರಾಯಣಪ್ಪ, ಗೀತಾ ರಾಜ್‌ಕುಮಾರ್, ಅನುಪಮ ಚನ್ನೇಶ್, ಕಾಂತರಾಜ್, ಕೋಟೇಶ್ವರ ರಾವ್, ಉದಯ್‌ಕುಮಾರ್, ಮಾಜಿ ಸದಸ್ಯ ಬದರಿ ನಾರಾಯಣ ಇನ್ನಿತರರು ಉಪಸ್ಥಿತರಿದ್ದರು. ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. 

ಆಧ್ಯಾತ್ಮಿಕ, ಧಾರ್ಮಿಕ ಶಕ್ತಿಯಿಂದ ಭಾರತಕ್ಕೆ ಬಲ: ಆಧ್ಯಾತ್ಮಿಕ ಹಾಗೂ ಧಾರ್ಮಿಕ ಶಕ್ತಿಗಳಿಂದಾಗಿ ಭಾರತಕ್ಕೆ ದೊಡ್ಡ ಬಲವಿದೆ. ಭಾರತಕ್ಕೆ ಸಾವಿಲ್ಲ ಎಂದು ಸ್ವಾಮಿ ವಿವೇಕಾನಂದರು ಅಮೇರಿಕದ ಚಿಕಾಗೊ ನಗರದಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ಹೇಳಿದ್ದರು. ಅದು ಈಗ ನಿಜವಾಗಿದೆ ಎಂದು ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಹಿರೇಕಲ್ಮಠದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ದೇಶದಲ್ಲಿ ಮನುಕುಲದ ಒಳಿತಿಗಾಗಿ ಆರಾಧನೆ, ಹೋಮ, ಹವನ, ಪೂಜಾ ಕೈಂಕರ್ಯಗಳು ನಿರಂತರ ನಡೆಯುತ್ತಿರುವ ಪ್ರಯುಕ್ತ ದೇಶ ಸದೃಢವಾಗಿ ಬೆಳೆಯುತ್ತಿದೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಡ ಹೆಣ್ಣು ಮಗುವಿಗೆ ರೂಪಿಸಿದ್ದ ಭಾಗ್ಯಲಕ್ಷ್ಮಿ ಯೋಜನೆಗೆ ಮುಂದಿನ ಜನವರಿ ತಿಂಗಳ 24ಕ್ಕೆ 18 ವರ್ಷ ತುಂಬುತ್ತದೆ. 18ವರ್ಷ ತುಂಬಿದ ಪ್ರತಿ ಬಡ ಯುವತಿಗೆ 1.5 ಲಕ್ಷ ರು. ದೊರೆಯುತ್ತದೆ. ಇದರಿಂದ ರಾಜ್ಯದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಸಹಾಯಕವಾಗುತ್ತದೆ. ಇಂತಹ ಯೋಜನೆ ನನ್ನ ತಂದೆ ರೂಪಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಶೀಘ್ರದಲ್ಲಿ ತಿರುಪತಿ, ಹೈದ್ರಾಬಾದ್ ಸೇರಿ ಇತರ ದೊಡ್ಡ ನಗರಗಳಿಗೆ ವಿಮಾನ ಸಂಚಾರ ಆರಂಭವಾಗುತ್ತದೆ. 

ಮಾಧ್ಯಮಗಳ ಮುಂದೆ ಶಾಸಕರ ಹೇಳಿಕೆ ಬಗ್ಗೆ ಡಿಕೆಶಿ ಕೇಳಿ: ಸಚಿವ ಚಲುವರಾಯಸ್ವಾಮಿ

ಯುವಕರು ಖುಷಿಯಾಗಿರಲೆಂದು ಶಿವಮೊಗ್ಗದಿಂದ ಗೋವಾಕ್ಕೂ ವಿಮಾನ ಸಂಚಾರ ಆರಂಭಿಸಲಾಗುತ್ತಿದೆ ಎಂದು ಹೇಳಿದಾಗ ಜನರು ನಗೆಗಡಲಲ್ಲಿ ತೇಲಿದರು. ರಾಣೇಬೆನ್ನೂರು ಮಾಜಿ ಶಾಸಕ ಅರುಣ್‍ಕುಮಾರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ತಾಂಡವವಾಡುತ್ತದೆ ಎನ್ನುವ ಅಂಶ ತಿಳಿದಿದ್ದರೂ ಮತದಾರರು ಕಾಂಗ್ರೆಸ್‍ಗೆ ಬಹುಮತ ನೀಡಿದ್ದಾರೆ. ಇದು ದುರಾದೃಷ್ಟಕರ. ಬಿಎಸ್‍ವೈ ಸ್ಥಾನವನ್ನು ರಾಘವೇಂದ್ರ ತುಂಬಲಿ ಎಂದು ಹೇಳಿದರು.

click me!