'ನನ್ನ ಟೀಕಿಸೋರಿಗೆ ಯೋಗ್ಯತೆ ಇದ್ಯಾ'..? ಸಿದ್ದುಗೆ ಎಚ್‌ಡಿಕೆ ಟಾಂಗ್..!

By Web Desk  |  First Published Sep 26, 2019, 11:43 AM IST

ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಎಚ್‌.ಡಿ. ಕುಮಾರಸ್ವಾಮಿ ಅವರು ಮಾತಿನ ತಿರುಗೇಟು ನೀಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು ನನ್ನನ್ನ ಟೀಕೆ ಮಾಡುವವರಿಗೆ ಯೋಗ್ಯತೆ ಇದೆಯಾ ಎಂದು ಪ್ರಶ್ನಿಸೋ ಮೂಲಕ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.


ಮಂಡ್ಯ(ಸೆ.26): ಕೆ. ಆರ್. ಪೇಟೆ ತಾಲೂಕಿನಲ್ಲಿ 22 ಸಾವಿರ ಕುಟುಂಬದ ಸಾಲಮನ್ನಾ ಮಾಡಿದ್ದೇನೆ. ನನ್ನನ್ನ ಟೀಕೆ ಮಾಡುವವರಿಗೆ ಯೋಗ್ಯತೆ ಇದೆಯಾ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಕೆ. ಆರ್. ಪೇಟೆಯ ಅಗ್ರಹಾರ ಬಾಚಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ನನ್ನನ್ನ ಟೀಕೆ ಮಾಡುವವರಿಗೆ ಯೋಗ್ಯತೆ ಇದೆಯಾ ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ. ಈ ತಾಲೂಕಿನಲ್ಲಿಯೇ ಸಹಕಾರಿ ಹಾಗೂ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಸಾಲಮನ್ನಾ ಮಾಡಿಸಿದ್ದೇನೆ. ಈ ಬಗ್ಗೆ ಒಂದು ಮಾಡಿಸುತ್ತೇನೆ. ಬುಕ್ ಮಾಡಿಸಿ ತಾಲೂಕಿನಲ್ಲೆಲ್ಲಾ ಹಂಚುತ್ತೇನೆ. ಪ್ರತಿ ಹಳ್ಳಿಗಳಿಗೆ ಕಳುಹಿಸುತ್ತೇನೆ ಎಂದಿದ್ದಾರೆ.

Tap to resize

Latest Videos

undefined

'ಜನ ತೀರ್ಮಾನಿಸ್ತಾರೆ ಬಿಡಿ':

ನನ್ನ 14 ತಿಂಗಳ ಅವಧಿಯಲ್ಲಿ  ನಾನು ಮಾಡಿರುವ ಕೆಲಸದ ಬಗ್ಗೆ ಪ್ರತೀ ಹಳ್ಳಿಯ ಜನರಿಗೆ ತಿಳಿಸುತ್ತೇನೆ. ಇದನ್ನು ಇತಿಹಾಸದಲ್ಲಿ ಯಾರೂ ಮಾಡಲಾಗಲ್ಲ. ಪಾಪ ಸಿದ್ದರಾಮಯ್ಯ ಮೊನ್ನೆ ಎಲ್ಲೋ ಮಾತನಾಡಿದ್ದಾರೆ. ವಿಶ್ವಾಸ ದ್ರೋಹ ಯಾರು ಮಾಡಿದ್ರು ಅನ್ನೋದನ್ನು ಜನ ತೀರ್ಮಾನ ಮಾಡ್ತಾರೆ ಬಿಡಿ ಎಂದಿದ್ದಾರೆ.

ಅವರು ಮಾಡಿರೊ ಸಾಲ ಮನ್ನಾ  ಚೆನ್ನಾಗಿತ್ತಂತೆ ನಾನು‌ ಸಾಲ ಮನ್ನಾ ಮಾಡಿರೋದು ಸರಿ ಇಲ್ಲ ಎಂದು ಹೇಳಿದ್ದಾರೆ. ಏನೋ ಪಾಪ ಸ್ವಾಭಿಮಾನ ಉಳಿಸಿಬಿಟ್ಟರಂತೆ. ಮಂಡ್ಯ ಜಿಲ್ಲೆಯ ಸ್ವಾಭಿಮಾನ ಉಳಿಸಿ ಈಗ ಕಬ್ಬು ಮಾರಿಸಿಬಿಟ್ರೆ ಗೊತ್ತಾಗುತ್ತೆ ಎಂದಿದ್ದಾರೆ.

ಕೆ.ಆರ್‌.ಪೇಟೆಯಿಂದ ಬಿಎಸ್‌ವೈ ಪುತ್ರ ಸ್ಪರ್ಧಿಸಲ್ಲ: ಡಿಸಿಎಂ ಅಶ್ವತ್ಥ್

ಸಂಸದೆ ಸುಮಲತಾರ ಬಗೆಗೂ ಮಾತನಾಡಿದ ಮಾಜಿ ಸಿಎಂ, ಕಬ್ಬಿಗೆ ಈಗಾಗಲೇ ಅವಧಿ ಮೀರಿ 14 ತಿಂಗಳು 15 ತಿಂಗಳುಗಳಾಗಿವೆ. ಆ ಬಗೆಗೆ ಯಾರಾದ್ರೂ ಚಿಂತನೆ ಮಾಡ್ತಾರಾ..? ನೋಡೋಣ.. ಚುನಾವಣೆ ಬಂದಾಗ ಎಲ್ಲ ಹೇಳೋಣ ಎಂದಿದ್ದಾರೆ. ಮಾಜಿ ಸಂಸದ ಶಿವರಾಮೇಗೌಡ ಬಗ್ಗೆ ಪ್ರತಿಕ್ರಿಯಿಸಿ ವರು ಪಕ್ಷದಲ್ಲೂ ಇರ್ತಾರೆ ಬಿಡಿ ಎಂದಿದ್ದಾರೆ.

FB ಲವರ್ ಜೊತೆ ಓಡಿ ಹೋದ ಮಗಳು, ಮೊಮ್ಮಗನ ಕೊಂದು, ವೃದ್ಧೆ ಆತ್ಮಹತ್ಯೆಗೆ ಯತ್ನ

click me!