ಹುಬ್ಬಳ್ಳಿ -ಧಾರವಾಡ ಹೈಟೆಕ್‌ ಸಿಟಿ ಮಾಡಲು ಜೆಡಿಎಸ್‌ಗೆ ಮತ ನೀಡಿ: ಎಚ್‌ಡಿಕೆ

By Kannadaprabha NewsFirst Published Aug 25, 2021, 9:51 AM IST
Highlights

*  ಹುಬ್ಬಳ್ಳಿ- ಧಾರವಾಡ ಎರಡನೆಯ ದೊಡ್ಡ ನಗರ
*  ಜೆಡಿಎಸ್‌ಗೆ ಇರುವ ಬದ್ಧತೆ ಬೇರೆ ಪಕ್ಷಗಳಿಗಿಲ್ಲ
*  ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ತಂದರೆ 5 ಪಂಚರತ್ನ ಕಾರ್ಯಕ್ರಮ ಜಾರಿ 

ಹುಬ್ಬಳ್ಳಿ(ಆ.25): ಹುಬ್ಬಳ್ಳಿ -ಧಾರವಾಡವನ್ನು ಹೈಟೆಕ್‌ ಸಿಟಿಯನ್ನಾಗಿ ಮಾಡಲು ಜೆಡಿಎಸ್‌ಗೆ ಮತ ಚಲಾಯಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ. 

ಇಲ್ಲಿನ ಕುಂದಗೋಳ ಕ್ರಾಸನಲ್ಲಿನ ವೈಷ್ಣವಿ ಗ್ರೀನ್‌ ಹೋಟೆಲ್‌ನಲ್ಲಿ ಸೋಮವಾರ ನಡೆದ ಮಹಾನಗರ ಜಿಲ್ಲಾ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಇಷ್ಟು ದಿನ ಮಹಾನಗರ ಪಾಲಿಕೆಯಲ್ಲಿ ಆಡಳಿತ ನಡೆಸಿದ ಪಕ್ಷಗಳು ಯಾವೊಂದು ಅಭಿವೃದ್ಧಿಯನ್ನು ಮಾಡಿಲ್ಲ. ಹುಬ್ಬಳ್ಳಿ- ಧಾರವಾಡ ಎರಡನೆಯ ದೊಡ್ಡ ನಗರ. ಇದರ ಸಮಗ್ರ ಅಭಿವೃದ್ಧಿಯಾಗಬೇಕಿದೆ. ಆ ನಿಟ್ಟಿನಲ್ಲಿ ಜೆಡಿಎಸ್‌ಗೆ ಇರುವ ಬದ್ಧತೆ ಬೇರೆ ಪಕ್ಷಗಳಿಗಿಲ್ಲ. ಆದ ಕಾರಣ ಮಹಾನಗರವನ್ನು ಹೈಟೆಕ್‌ ಸಿಟಿಯನ್ನಾಗಿ ಮಾಡಲು ಜೆಡಿಎಸ್‌ಗೆ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ಮುಂದಿನ ಚುನಾವಣೆಗೆ ಜೆಡಿಎಸ್‌ ಮಿಷನ್‌-123: ಎಚ್‌ ಡಿ ಕುಮಾರಸ್ವಾಮಿ

ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರ ಕೊಟ್ಟು ನೋಡಿದ್ದೀರಿ. ಒಂದು ಬಾರಿ 5 ವರ್ಷ ಬಹುಮತದ ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ತಂದರೆ 5 ಪಂಚರತ್ನ ಕಾರ್ಯಕ್ರಮಗಳನ್ನು ರೈತರಿಗೆ, ಯುವಕರಿಗೆ, ಬಡವರಿಗೆ ಜಾರಿಗೆ ತಂದೆ ತೀರುತ್ತೇನೆ ಎಂದರು.

ಈ ಸಂದರ್ಭದಲ್ಲಿ ನವಲಗುಂದ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ, ವಿಪ ಸದಸ್ಯ ಎಸ್‌.ಎಲ್‌. ಭೋಜೆಗೌಡ, ರಾಜ್ಯ ಜೆಡಿಎಸ್‌ ಯುವ ಕಾರ್ಯಾಧ್ಯಕ್ಷ ಶರಣಗೌಡ ಕಂದಕೂರ, ಜಿಲ್ಲಾಧ್ಯಕ್ಷ ಬಿ.ಬಿ. ಗಂಗಾಧರಮಠ, ಹು-ಧಾ ಮಹಾನಗರ ಅಧ್ಯಕ್ಷ ಗುರುರಾಜ ಹುಣಸಿಮರದ, ಜಿಲ್ಲಾ ಕಾರ್ಯಾಧ್ಯಕ್ಷ ಫಹೀಮ ಕಾಂಟ್ರ್ಯಾಕ್ಟರ್‌, ಜಿಲ್ಲಾ ಅಲ್ಪಸಂಖ್ಯಾತ ಅಧ್ಯಕ್ಷ ಹಜರತಲಿ ಜೋಡಮನಿ, ಕಾರ್ಯಾಧ್ಯಕ್ಷ ಗಜಾನನ ಅಣ್ವೇಕರ, ಸಾಧೀಕ ಹಕೀಂ, ಹುಬ್ಬಳ್ಳಿ ಅಧ್ಯಕ್ಷ ಶಿವಣ್ಣ ಹುಬ್ಬಳ್ಳಿ, ಕುಂದಗೋಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಹಾಬಳೇಶ ಕುಂದಗೋಳ, ಮುಖಂಡರುಗಳಾದ ನಿಯಾಜ ಶೇಖ ಹಾನಗಲ್ಲ, ಡಾ. ಅಬ್ದುಲ್‌ ಕರೀಂ, ವಿನಾಯಕ ಗಾಡಿವಡ್ಡರ, ಹಜರೇಸಾಬ ಚಾಹುಸ, ಇಮ್ತಿಯಾಜ ತಡಕೋಡ, ರವಿ ಯಶಮಳ ಇತರರು ಇದ್ದರು.
 

click me!