ಚಿಕ್ಕಮಗಳೂರು (ಆ.25): ಹಿಂದೂ ಧರ್ಮವನ್ನು ಮನುಧರ್ಮ ಎಂದಿದ್ದ ಕೊಳ್ಳೆಗಾಲ ಶಾಸಕ ಎನ್.ಮಹೇಶ್ ಅವರನ್ನು ಮಂತ್ರಿ ಮಾಡುವುದಕ್ಕೆ ನಮ್ಮ ವಿರೋಧ ಇದೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಮಹೇಶ್ ಈಗ ಬಿಜೆಪಿಗೆ ಬಂದಿದ್ದಾರೆ. ಅವರು ಇನ್ನೂ 20 ವರ್ಷ ಪಕ್ಷದಲ್ಲಿ ದುಡಿಯಬೇಕು. ಪಕ್ಷಕ್ಕೆ ಬಂದ ತಕ್ಷಣ ಮಂತ್ರಿ ಮಾಡಲು ಸಂಘ ಪರಿವಾರ ಒಪ್ಪುವುದಿಲ್ಲ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ನಿಯತ್ತು ಮರೆತಿದ್ದಕ್ಕೆ ಉಚ್ಛಾಟನೆ : ಬಿಜೆಪಿ ಸೇರಿದ N ಮಹೇಶ್ ವಿರುದ್ಧ ಗಂಭೀರ ಅರೋಪ
ಎನ್.ಮಹೇಶ್ ಅವರನ್ನು ಕಾಂಗ್ರೆಸ್-ಜೆಡಿಎಸ್ ಬಿಟ್ಟಿದೆ, ಬಿಎಸ್‌ಪಿ ಉಚ್ಛಾಟನೆ ಮಾಡಿದೆ. ಅವರು ಈ ಹಿಂದೆ ಹಿಂದೂ ಧರ್ಮದ ಬಗ್ಗೆ ಹೀನಾಯವಾಗಿ ಬೈದಿದ್ದರು.
ಜಾತಿ-ಧರ್ಮ ಎತ್ತಿಕಟ್ಟಿದ್ದರು. ಜನಾಂಗ-ಜನಾಂಗ ಒಡೆದು ಶಾಸಕರಾಗಿದ್ದಾರೆ. ನಮ್ಮಲ್ಲಿ ಹಿಂದೂ ಧರ್ಮ, ವೈದಿಕ ಧರ್ಮವನ್ನು ಬೈದವರನ್ನು ಮಂತ್ರಿ ಮಾಡುತ್ತಾರೆ ಎಂದು ಅನಿಸುವುದಿಲ್ಲ. ಪಕ್ಷಕ್ಕಾಗಿ ದುಡಿದವರು ಮೂವರು ಇದ್ದೇವೆ, ಯಾರನ್ನಾದ್ರು ಮಾಡುತ್ತಾರೆ ಎಂದರು.