ರಾಸಲೀಲೆ ಸಿಡಿ ಪ್ರಕರಣ: ಇದು ತಿಪ್ಪೇಸಾರಿಸೋ ತನಿಖೆ, ಎಚ್‌ಡಿಕೆ

By Kannadaprabha NewsFirst Published Mar 12, 2021, 7:58 AM IST
Highlights

ಯಾರಾರ‍ಯರ ಸಿ.ಡಿ. ಇದೇಯೋ ನನಗೆ ಗೊತ್ತಿಲ್ಲ| ಆ ಆರು ಮಂದಿ ಸಚಿವರು ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ನೋಡಿ ಅಚ್ಚರಿಯಾಯಿತು| ತಮ್ಮನ್ನೇ ರಕ್ಷಣೆ ಮಾಡಿಕೊಳ್ಳಲಾರದ ಸಚಿವರು ರಾಜ್ಯದ ಜನರನ್ನು ಹೇಗೆ ರಕ್ಷಣೆ ಮಾಡ್ತಾರೆ: ಹೆಚ್‌.ಡಿ. ಕುಮಾರಸ್ವಾಮಿ| 

ಮೈಸೂರು/ಹಾಸನ(ಮಾ.12): ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿರುವ ಮಾಜಿ ಸಚಿವರೊಬ್ಬರ ಸಿ.ಡಿ.ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ಒಪ್ಪಿಸಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. 

ಇದು ತಿಪ್ಪೆ ಸಾರಿಸುವ ತನಿಖೆ. ಅವರ ರಕ್ಷಣೆಗಾಗಿ ಮಾಡಿಕೊಳ್ಳುತ್ತಿರುವ ಈ ತನಿಖೆಗಳ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ. ಮೈಸೂರು ಹಾಗೂ ಹಾಸನದಲ್ಲಿ ಗುರುವಾರ ಸಿ.ಡಿ. ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರ ಜತೆ ಮಾತನಾಡಿ, ಯಾರ ಮೇಲೆ ತನಿಖೆ ಮಾಡ್ತೀರಿ, ಇಂಥ ತನಿಖಾ ಸಂಸ್ಥೆಗಳಿಂದ ಸ್ವಾತಂತ್ರ್ಯಾ ನಂತರ ಯಾರಿಗೆ ಶಿಕ್ಷೆಯಾಗಿದೆ. ಹಾಗೇನಾದರೂ ಶಿಕ್ಷೆ ಆಗಿದ್ದರೆ ಅದು ಅಮಾಯಕರಿಗೆ ಅಷ್ಟೆ ಎಂದರು.

ಯಾರಾರ‍ಯರ ಸಿ.ಡಿ. ಇದೇಯೋ ನನಗೆ ಗೊತ್ತಿಲ್ಲ. ಆ ಆರು ಮಂದಿ ಸಚಿವರು ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ನೋಡಿ ಅಚ್ಚರಿಯಾಯಿತು. ಅವರು ತಮಗೆ ಸಂಬಂಧಿಸಿದ ಸಿ.ಡಿ. ವಿಚಾರ ಪ್ರಸಾರ ಮಾಡಬಾರದೆಂದು ರಕ್ಷಣೆ ಕೋರಿ ಕೋರ್ಟ್‌ಗೆ ಹೋಗಿದ್ದಾರೆ. ತಮ್ಮನ್ನೇ ರಕ್ಷಣೆ ಮಾಡಿಕೊಳ್ಳಲಾರದ ಸಚಿವರು ರಾಜ್ಯದ ಜನರನ್ನು ಹೇಗೆ ರಕ್ಷಣೆ ಮಾಡ್ತಾರೆ ಎಂದು ಪ್ರಶ್ನಿಸಿದರು.

ದೇವೇಗೌಡ ವಿರುದ್ಧ ನಿಂತ ರೇವಣ್ಣ, ಎಚ್‌ಡಿಕೆ : ಸಹೋದರರಿಂದ ಹೊಸ ತಂತ್ರಗಾರಿಕೆ

ಜಿಟಿಡಿ ಎಲ್ಲಿದ್ದಾರೆಂದೇ ಗೊತ್ತಿಲ್ಲ-ಎಚ್‌ಡಿಕೆ

ಶಾಸಕ ಜಿ.ಟಿ.ದೇವೇಗೌಡರು ಎಲ್ಲಿದ್ದಾರೆ ಅಂತ ನನಗೇ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಜಿ.ಟಿ.ದೇವೇಗೌಡರ ಮೇಲೆ ಮತ್ತೊಮ್ಮೆ ಕುಟುಕಿದ್ದಾರೆ. ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಅವರು ನಮ್ಮ ಪಕ್ಷದ ಚಿಹ್ನೆಯಿಂದ ಗೆದ್ದಿರಬಹುದು. ಅವರು ಗೆಲ್ಲಲು ನನ್ನ ಕಾಣಿಕೆಯೂ ಇರಬಹುದು. ಆದರೆ, ಅವರು ನಮ್ಮ ಸಭೆಗಳಿಗೆ ಬರುತ್ತಿಲ್ಲ. ನಮ್ಮ ಪಕ್ಷದ ಚಟುವಟಿಕೆಗಳಿಂದ ದೂರವೇ ಇದ್ದಾರೆ. ಅವರು ಯಾವ ಪಕ್ಷದಲ್ಲಿದ್ದಾರೆ ಎಂದು ಅವರೇ ಹೇಳಬೇಕಿದೆ. ಈಗ ಎಲ್ಲಿದ್ದಾರೆ? ಮುಂದೆ ಎಲ್ಲಿರ್ತಾರೆ ಅನ್ನೋದನ್ನು ಅವರೇ ಸ್ಪಷ್ಟಪಡಿಸಬೇಕು ಎಂದರು.

ಪಕ್ಷ ಬಿಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ-ಎಚ್‌ಡಿಕೆ

ಜೆಡಿಎಸ್‌ ಬಾಗಿಲು ತೆರೆದಿದೆ, ಹೋಗೋರು ಹೋಗಬಹುದು, ಬರೋರು ಬರಬಹುದು. ಪಕ್ಷ ಬಿಡುವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಗುರುವಾರ ಪಕ್ಷದ ಮುಖಂಡ ಮಧು ಬಂಗಾರಪ್ಪ ಅವರು ಕಾಂಗ್ರೆಸ್‌ ಸೇರ್ಪಡೆಯಾಗುತ್ತಿರುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಧು ಬಂಗಾರಪ್ಪ ಅವರು ಕಾಂಗ್ರೆಸ್‌ ಸೇರ್ಪಡೆಯಾಗುತ್ತಿರುವ ಹಳೇ ವಿಚಾರ. ಅಧಿಕಾರ ಉಂಡು ಬೆನ್ನಿಗೆ ಚೂರಿ ಹಾಕೋದು ಹೊಸದೇನಲ್ಲ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಯಾರನ್ನು ಬೆಳೆಸಿದ್ದರೋ ಅವರೇ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು ತಿಳಿಸಿದರು.
 

click me!