ವಿದ್ಯಾರ್ಥಿನಿಗೆ ಅಸಭ್ಯ ರೀತಿಯಲ್ಲಿ ಟಾರ್ಚರ್ : ಪ್ರಾಧ್ಯಾಪಕನ ವಿರುದ್ಧ ಕೇಸ್

Kannadaprabha News   | Asianet News
Published : Mar 11, 2021, 03:54 PM IST
ವಿದ್ಯಾರ್ಥಿನಿಗೆ ಅಸಭ್ಯ ರೀತಿಯಲ್ಲಿ ಟಾರ್ಚರ್ : ಪ್ರಾಧ್ಯಾಪಕನ ವಿರುದ್ಧ ಕೇಸ್

ಸಾರಾಂಶ

ವಿದ್ಯಾರ್ಥಿನಿಯೋರ್ವಳಿಗೆ ಕಿರುಕುಳ ನೀಡುತ್ತಿದ್ದ ಪ್ರಾಧ್ಯಾಪಕನ ವಿರುದ್ಧ ಪ್ರಕರಣ ದಾಖಲಾಗಿದೆ. ಆಕೆಯ ಫೊಟೊಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವಿಚಿತ್ರವಾದ ಟಾರ್ಚ್‌ರ್ ನೀಡುತ್ತಿದ್ದನೆನ್ನಲಾಗಿದೆ. 

ಮಂಗಳೂರು (ಮಾ.11):  ಪಿಎಚ್‌ಡಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿವಿ ಪ್ರಾಧ್ಯಾಪಕನ ವಿರುದ್ಧ ಇಲ್ಲಿನ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ವಿದ್ಯಾರ್ಥಿನಿಯೊಬ್ಬರು 2019ರಿಂದ ಪಾಂಡೇಶ್ವರ ಶ್ರೀನಿವಾಸ ವಿವಿಯಲ್ಲಿ ಪ್ರಾಧ್ಯಾಪಕಿ ಡಾ.ಶೈಲಶ್ರೀ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ. 2018ರಲ್ಲಿ ಪರಿಚಯವಾದ ಡಾ.ಕೋಂಡೂರು ತನ್ನನ್ನು ಸಹ ಮಾರ್ಗದರ್ಶಕನನ್ನಾಗಿ ನೇಮಿಸುವಂತೆ ಒತ್ತಾಯಿಸಿದ್ದ. ಅದಕ್ಕೆ ಒಪ್ಪಿ ವಿವಿಗೆ ಅನುಮತಿಗೆ ಕಳುಹಿಸಿದಾಗ ಆತನಿಗೆ ಅರ್ಹತೆ ಇಲ್ಲ ಎನ್ನುವ ಕಾರಣಕ್ಕೆ ಕೋರಿಕೆಯನ್ನು ನಿರಾಕರಿಸಿತ್ತು. 

ಮಾಡೆಲಿಂಗ್‌ಗೆ ಬೆಂಗಳೂರು ಹೊರಟಿದ್ದ ವಿದ್ಯಾರ್ಥಿನಿ ನಿಗೂಢ ಸಾವು : ಮೂವರು ಅರೆಸ್ಟ್ ..

ಬಳಿಕ ವಿದ್ಯಾರ್ಥಿನಿಗೆ ಹಾಗೂ ಮನೆಯವರಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ವಿದ್ಯಾರ್ಥಿನಿಗೆ ತಿಳಿಯದಂತೆ ಆಕೆಯ ಭಾವಚಿತ್ರವನ್ನು ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾನೆ ಎಂದು ಆರೋಪಿಸಿ ವಿದ್ಯಾರ್ಥಿನಿಯ ಮನೆಯವರು ಸೈಬರ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ಮುಂದುವರಿದಿದೆ.

PREV
click me!

Recommended Stories

ವಿಮಾನದಲ್ಲೇ CPR ನೀಡಿ ಅಮೆರಿಕ ಯುವತಿಯ ಪ್ರಾಣ ಉಳಿಸಿದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್
ಆಳಂದ ಮತಚೋರಿ ಆರೋಪ ರಾಜಕೀಯ ಪ್ರೇರಿತ: ಎಸ್‌ಐಟಿ ಕ್ರಮದ ವಿರುದ್ಧ ಸುಭಾಷ್ ಗುತ್ತೇದಾರ್ ಕಿಡಿ