ಕೊರೋನಾ ಹೆಸರಲ್ಲಿ ಸರ್ಕಾರದಿಂದಲೇ ಲೂಟಿ: ಕುಮಾರಸ್ವಾಮಿ

By Kannadaprabha NewsFirst Published Jun 19, 2021, 8:01 AM IST
Highlights

* ಸಿದ್ದರಾಮಯ್ಯ ಸತ್ಯ ಹರಿಶ್ಚಂದ್ರನಾ? 
* ಈ ರ್ದೌಭ್ಯಾಗದ ಸರ್ಕಾರ ಬರಬೇಕಾದರೆ ಸಿದ್ದರಾಮಯ್ಯ ಅವರ ಕಾಂಗ್ರೆಸ್‌ ಕಾರಣ 
* ಸಿಎಂ ಆಗಲು ಈಗಾಗಲೇ ಬಿಜೆಪಿಯಲ್ಲಿ ಕೆಲವರು ಸೂಟು ಹೊಲಿಸಿಕೊಂಡಿದ್ದಾರೆ 
 

ಮಾಲೂರು(ಜೂ.19): ಕೊರೋನಾದಿಂದ ರಾಜ್ಯದ ಜನತೆಯನ್ನು ಕಾಪಾಡಬೇಕಾದ ಸರ್ಕಾರವೇ ಕೊರೋನಾ ಹೆಸರಿನಲ್ಲಿ ಲೂಟಿಗೆ ಇಳಿದಿದ್ದು, ಜನತೆಯ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಈ ಕೊಡಲೇ ವಿಧಾನಸಭೆ ಕಲಾಪವನ್ನು ಕರೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಗ್ರಹಿಸಿದ್ದಾರೆ. 

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇದುವರೆಗೂ ನಾನು ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡಿರಲಿಲ್ಲ. ಕೇವಲ ಕೊರೋನಾ ನಿರ್ವಹಣೆ ವಿಷಯವಾಗಿ ಸಲಹೆ ನೀಡಿದ್ದೆ. ಆದರೆ ಅವರು ಕೊರೋನಾ ನಿರ್ವಹಿಸಿದ್ದ ರೀತಿ ಬಗ್ಗೆ ವಿಧಾನ ಸಭೆಯಲ್ಲಿ ಚರ್ಚೆ ಮಾಡಬೇಕಾಗಿದೆ. ಕೊರೋನಾದಿಂದ ರೈತರ ಹಾಗೂ ಬೆಳೆಗಳ ಸ್ಥಿತಿ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಬೇಕಾಗಿದೆ ಎಂದರು. ಜನರಿಗೆ ಕೊರೋನಾ ವೇಳೆಯಲ್ಲಿ ಸ್ಪಂದಿಸಬೇಕಾದ ಸಚಿವರು, ಜನಪ್ರತಿನಿಧಿಗಳು ಬದಲಾವಣೆಗಾಗಿ ದಂಗೆ ಎದ್ದಿರುವುದು ದುರಾದೃಷ್ಟಕರ. ಸರ್ಕಾರ ತನ್ನ ಅಸ್ಥಿರತೆ ತೋರಿಸುತ್ತ ಕುಳಿತುಕೊಂಡರೆ ಜನರ ಬದುಕು ಏನಾಗಬೇಕು. ಸಿಎಂ ಆಗಲು ಈಗಾಗಲೇ ಬಿಜೆಪಿಯಲ್ಲಿ ಕೆಲವರು ಸೂಟು ಹೊಲಿಸಿಕೊಂಡಿದ್ದಾರೆ. ಸೂಟು ಹೊಲಿಸಿಕೊಂಡವರಲ್ಲಿ ಕಾಂಗ್ರೆಸ್ಸಿಗರು ಇದ್ದು, ಹಗಲು ಕನಸು ಕಾಣುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಅವರು ನನ್ನ ಬಗ್ಗೆ ಅಥವಾ ನನ್ನ ಪಕ್ಷದ ಬಗ್ಗೆ ಮಾತನಾಡುವಾಗ ಎಚ್ಚರ ಇರಬೇಕು. 2008ರಲ್ಲಿ ನಡೆದ ಆಪರೇಷನ್‌ ಕಮಲದಲ್ಲಿ ಯಡಿಯೂರಪ್ಪ ಅವರಿಂದ ನಿಮಗೆ ಹಣ ಬರುತ್ತಿದ್ದ ಬಗ್ಗೆ ಇತ್ತೀಚೆಗೆ ನಿಮ್ಮಿಂದ ದೂರವಾಗಿರುವ ನಿಮ್ಮ ಆಪ್ತರೇ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಕೋವಿಡ್‌ ಬುಲೆಟಿನ್‌: ದೇಶದಲ್ಲೇ ಕರ್ನಾಟಕ ನಂ.1..!

ಸಿದ್ದರಾಮಯ್ಯ ಸತ್ಯ ಹರಿಶ್ಚಂದ್ರನಾ, ಬೆಂಗಳೂರಿನಲ್ಲಿ 450 ಎಕರೆ ರೀಡೋ ಮಾಡಿ, ಕೆಂಪಣ್ಣ ಆಯೋಗ ರಚಿಸಿ 500 ಕೋಟಿ ಲೂಟಿ ಮಾಡಿದ್ದ ಸಿದ್ದರಾಮಯ್ಯರಿಂದ ನಾನು ಕಲಿಯಬೇಕಾಗಿಲ್ಲ. ಇಂದಿನ ಈ ರ್ದೌಭ್ಯಾಗದ ಸರ್ಕಾರ ಬರಬೇಕಾದರೆ ಸಿದ್ದರಾಮಯ್ಯ ಅವರ ಕಾಂಗ್ರೆಸ್‌ ಪ್ರಮುಖ ಕಾರಣ ಎಂದ ದೂರಿದರು. 

ನಮ್ಮದು ರಾಕ್ಷಸಿ ಸರ್ಕಾರ ಎಂದು ಬಿಜೆಪಿಗೆ ಹೋಗಿದ್ದ ಒಬ್ಬ ಈಗ ಅದೇ ಸರ್ಕಾರ ನೀರಾವರಿ ಇಲಾಖೆಯ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾನೆ. ದೇವೇಗೌಡರು ನನ್ನ ಹೃದಯದಲ್ಲಿದ್ದಾರೆ ಎಂದ ಎಚ್‌.ವಿಶ್ವನಾಥ್‌ ಹೇಳಿದ್ದಾರೆ. ಯಾರ್ಯಾರು ಯಾವ ಟೈಂನಲ್ಲಿ ಅವರ ಹೃದಯದಲ್ಲಿ ಇಟ್ಟುಕೊಳ್ಳುತ್ತಾರೇ ಗೊತ್ತಿಲ್ಲ ಎಂದರು.
 

click me!