Chikkamagaluru: ಬಾಳೆಹೊನ್ನೂರಿನ ಸೇತುವೆ ನಿರ್ಮಾಣಕ್ಕೆ ತಂದಿಟ್ಟ ವಸ್ತುಗಳೇ ವೇಸ್ಟ್: ಕಾರಣವೇನು?

By Govindaraj S  |  First Published Nov 26, 2023, 8:27 PM IST

ಅದು 125 ವರ್ಷದ ಹಳೆಯ ಸೇತುವೆ. ಬ್ರಿಟಿಷರು ಕಟ್ಟಿದ್ದು. ಆ ಸೇತುವೆ ಏನಾದ್ರು ಮುರಿದು ಬಿದ್ರೆ ಮೂರು ತಾಲೂಕಿನ ಜನ ಅತಂತ್ರರಾಗ್ತಾರೆ. 20-30 ಕಿ.ಮೀ. ದೂರಕ್ಕೆ 70-80 ಕಿ.ಮೀ. ಸುತ್ತಿಬಳಸಿ ಬರಬೇಕು. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ನ.26): ಅದು 125 ವರ್ಷದ ಹಳೆಯ ಸೇತುವೆ. ಬ್ರಿಟಿಷರು ಕಟ್ಟಿದ್ದು. ಆ ಸೇತುವೆ ಏನಾದ್ರು ಮುರಿದು ಬಿದ್ರೆ ಮೂರು ತಾಲೂಕಿನ ಜನ ಅತಂತ್ರರಾಗ್ತಾರೆ. 20-30 ಕಿ.ಮೀ. ದೂರಕ್ಕೆ 70-80 ಕಿ.ಮೀ. ಸುತ್ತಿಬಳಸಿ ಬರಬೇಕು. ಅಷ್ಟೆ ಅಲ್ಲ, ಶೃಂಗೇರಿ ಶಾರದಾಂಬೆ, ಹೊರನಾಡು ಅನ್ನಪೂಣೇಶ್ವರಿ ದೇಗುಲ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ರಸ್ತೆಯೇ ಇಲ್ಲ. ಇದ್ರು ಪರದಾಡ್ಕೊಂಡೆ ಹೋಗಬೇಕು. ಆ ಸೇತುವೆ ಬಿರುಕು ಬಿಟ್ಟಿದೆ. ಅಧಿಕಾರಿಗಳು ನೋ ಪ್ರಾಬ್ಲಂ ಅಂತೇಳಿದ್ದಾರೆ. ಆದ್ರು, ಸ್ಥಳಿಯರು-ಪ್ರವಾಸಿಗರ ಆತಂಕ ಮಾತ್ರ ದೂರಾಗಿಲ್ಲ. ಆದ್ರೆ, ಭವಿಷ್ಯದ ಹಿತದೃಷ್ಠಿಯಿಂದ ಹೊಸ ಸೇತುವೆಗೆ ಕೈ ಹಾಕಿದ ಸರ್ಕಾರ ಮಾಡಿದ್ದೇನು ಗೊತ್ತಾ.

Tap to resize

Latest Videos

undefined

ಸೇತುವೆ ನಿರ್ಮಾಣಕ್ಕೆ ತಂದಿಟ್ಟ ವಸ್ತುಗಳೇ ವೇಸ್ಟ್: 1889ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಭದ್ರಾ ನದಿಗೆ ಅಡ್ಡವಾಗಿ  ಬ್ರಿಟಿಷರು ಸೇತುವೆ ಕಟ್ಟಿದ್ದು. ಸುಣ್ಣದಕಲ್ಲು ಹಾಗೂ ಬೆಲ್ಲದ ಪಾನಕದಿಂದ ನಿರ್ಮಿಸಿರೋದು. ಸುಮಾರು 125 ವರ್ಷಗಳ ಹಿಂದಿನದ್ದು. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಜೀವಾಳವೇ ಈ ಸೇತುವೆ. ಈ ಸೇತುವೆ ದಾಟಿಯೇ ಬಾಳೆಹೊನ್ನೂರು, ಎನ್.ಆರ್.ಪುರ, ಶೃಂಗೇರಿ, ಕೊಪ್ಪ ಸೇರಿದಂತೆ ನೂರಾರು ಹಳ್ಳಿಗಳಿಗೆ ಮಾರ್ಗ. ಆದ್ರೆ, ಈ ಸೇತುವೆ ಶಿಥಿಲಾವಸ್ಥೆ ತಲುಪಿದ್ದು ಸೇತುವೆ ಮೇಲೆ ನೀರು ನಿಲ್ಲುತ್ತೆ. ಕೆಳಭಾಗದಲ್ಲಿ ನೀರು ಲೀಕ್ ಆಗುತ್ತೆ. 

ಅಖಾಡದಲ್ಲಿ ಚಿರತೆಯಂತೆ ಓಡ್ತಿದ್ದ ರಾಸು ಅನಾರೋಗ್ಯದಿಂದ ಸಾವು: ಎತ್ತನ್ನ ನೋಡಲು ಆಗಮಿಸಿದ ನಾನಾ ಜಿಲ್ಲೆಯ ಜನ!

ಸೇತುವೆಯ ಪಿಲ್ಲರ್ಗಳ ಬಳಿ ಮರಗಿಡ ಬೆಳೆದು ಸೇತುವೆ ಆಯಸ್ಸು ಕಡಿಮೆ ಅನ್ನೋದು ಸಾಬೀತಾಗ್ತಿದೆ. ಆದ್ರೆ, ಸೇತುವೆ ಪರಿಶೀಲಿನೆ ನಡೆಸಿದ ಅಧಿಕಾರಿಗಳು ಸೇತುವೆ ಗಟ್ಟಿಮುಟ್ಟಾಗಿದೆ. ನೋ ಪ್ರಾಬ್ಲಂ. ಓಡಾಡಬಹುದು ಎಂದು ವರದಿ ನೀಡಿದ್ದಾರೆ. ಆದರೂ, ಸ್ಥಳಿಯರ ಆತಂಕ ದೂರಾಗಿರಲಿಲ್ಲ.  ಸರ್ಕಾರ ಮುಂಜಾಗೃತ ಕ್ರಮವಾಗಿ ಹೊಸ ಸೇತುವೆಗೆ 2017ರಲ್ಲೇ ಶಂಕುಸ್ಥಾಪನೆ ಮಾಡಿ ಕೊಟ್ಯಾಂತರ ರೂಪಾಯಿ ಹಣ ಸುರಿದಿದ್ದಾರೆ. ಆದರೆ, ಅರ್ಧ ಕೆಲಸವೂ ಆಗಿಲ್ಲ. ಸೇತುವೆ ನಿರ್ಮಾಣಕ್ಕೆ ತಂದಿಟ್ಟ ವಸ್ತುಗಳೇ ವೇಸ್ಟ್ ಆಗಿವೆ. ಆದರೂ, ಸರ್ಕಾರ ಸೇತುವೆ ಕೆಲಸ ಮುಗಿಸೋದಕ್ಕೆ ಮುಂದಾಗಿಲ್ಲ. ಹಾಗಾಗಿ, ಸ್ಥಳಿಯರು ಸರ್ಕಾರ ವಿರುದ್ಧ ಅಸಮಾಧಾನ ಹೊರಹಾಕಿ ಕೂಡಲೇ ಸೇತುವೆ ಕೆಲಸ ಮುಗಿಸುವಂತೆ ಆಗ್ರಹಿಸಿದ್ದಾರೆ. 

ಸ್ಥಳಿಯರು ಸರ್ಕಾರದ ವಿರುದ್ಧ ಅಸಮಾಧಾನ: ಹಳೇ ಸೇತುವೆಗೆ ಭವಿಷ್ಯವಿಲ್ಲ. ಯಾವಾಗ ಏನಾಗುತ್ತೋ ಎಂದು ಸ್ಥಳಿಯರು ಸರ್ಕಾರಕ್ಕೆ ದುಂಬಾಲು ಬಿದ್ದು ಹೊಸ ಸೇತುವೆಗೆ ನಿರ್ಮಾಣಕ್ಕೆ ಆಗ್ರಹಿಸಿದ್ದರು. ಅದರಂತೆ 18 ಕೋಟಿ ವೆಚ್ಚದಲ್ಲಿ ಹೊಸ ಸೇತುವೆಗೆ 2017ರಲ್ಲಿ ಸಿಎಂ ಸಿದ್ದರಾಮಯ್ಯ ಗುದ್ದಿಲಿಪೂಜೆ ನೆರವರಿಸಿದ್ರು. ಒಂದಷ್ಟು ಹಣವೂ ಬಿಡುಗಡೆಯಾಗಿತ್ತು. ಕೆಲಸವೂ ಆರಂಭವಾಗಿತ್ತು. ಭದ್ರಾ ನದಿ ಮಧ್ಯೆ ಪಿಲ್ಲರ್ ಹಾಗೂ ಬೀಮ್ ಮಟ್ಟಕ್ಕೆ ಏರಿಸಿ ಕೆಲಸ ನಿಲ್ಲಿಸಿದ್ರು. ಶಾಸಕ ರಾಜೇಗೌಡ ಕಂಟ್ರಾಕ್ಟರ್ಗೆ ಕ್ಲಾಸ್ ತೆಗೆದುಕೊಂಡ ಮೇಲೆ ಮತ್ತಷ್ಟು ಕೆಲಸ ಮಾಡಿ ಬೀಮ್ ಮಟ್ಟಕ್ಕೆ ಏರಿಸಿದ್ರು. 

ಇದೀಗ ಮತ್ತೆ ಕೆಲಸ ನಿಲ್ಲಿಸಿದ್ದಾರೆ. ಸರ್ಕಾರ ಸೂಕ್ತವಾಗಿ ಹಣ ಬಿಡುಗಡೆ ಮಾಡಿಲ್ಲ. ಕಂಟ್ರಾಕ್ಟರ್ ಹಣವಿಲ್ಲದೆ ಕೆಲಸ ನಿಲ್ಲಿಸಿದ್ದಾರೆ ಎಂದು ಸ್ಥಳಿಯರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿ ಕೂಡಲೇ ಹಣ ಬಿಡುಗಡೆಗೆ ಆಗ್ರಹಿಸಿದ್ದಾರೆ. ಸೇತುವೆ ಮೇಲೆ ಭಾರೀ ವಾಹನಗಳಿಗೆ ಬ್ರೇಕ್ ಹಾಕಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ. ಅಧಿಕಾರಿಗಳು ಹಳೇ ಸೇತುವೆ ಗಟ್ಟಿ ಇದೆ ಅಂತಾರೆ. ಆದ್ರೆ, 125 ವರ್ಷಗಳ ಹಿಂದೆ ಸುಣ್ಣದಕಲ್ಲು-ಬೆಲ್ಲದ ಪಾಕದಿಂದ ಮಾಡಿದ ಸೇತುವೆಗೆ ಒಂದು ವೇಳೆ ಸಮಸ್ಯೆಯಾದ್ರೆ ಶೃಂಗೇರಿ, ಬಾಳೆಹೊನ್ನೂರು ರಂಭಾಪುರಿ ಪೀಠ, ಹೊರನಾಡು, ಕಳಸ, ಎನ್.ಆರ್.ಪುರ ಭಾಗದ ಅತಂತ್ರಕ್ಕೀಡಾಗ್ತಾರೆ ಅನ್ನೋ ಆತಂಕ ಸ್ಥಳಿಯರದ್ದು.

ಚಾರ್ಮಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಕ್ಕೆ 8 ಜನರ ಮೇಲೆ ಕೇಸ್!

ಒಟ್ಟಾರೆ, ಭದ್ರಾ ನದಿಗೆ 125 ವರ್ಷಗಳ ಹಿಂದೆ ಬ್ರಿಟಿಷರು ಕಟ್ಟಿದ್ದ ಸೇತುವೆಯೇ ಇಂದಿನ ಮಲೆನಾಡಿಗರ ಜೀವನಾಡಿಯಾಗಿದೆ. ಸದ್ಯಕ್ಕೆ ಅಧಿಕಾರಿಗಳೇನೋ ನೋ ಪ್ರಾಬ್ಲಂ ಅಂತಿದ್ದಾರೆ. ಆದ್ರೆ, ಮಳೆಗಾಲದಲ್ಲಿ ಭದ್ರೆಯ ಒಡೆಲು ಭಯಂಕರ ಎಂಬ ಮಾತಿದೆ ಸ್ವಲ್ಪ ಹೆಚ್ಚುಕಮ್ಮಿಯಾದರೂ ಮಲೆನಾಡಿಗರ ಭವಿಷ್ಯ ತೂಗುಯ್ಯಾಲೆಯಾಗೋದು ಗ್ಯಾರಂಟಿ. ಹಾಗಾಗಿ, ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ ಅರ್ಧಕ್ಕೆ ನಿಂತಿರೋ ಹೊಸ ಸೇತುವೆ ಕಾಮಗಾರಿಗೆ ಕಾರಣವೇನೆಂದು ತಿಳಿದು, ಹಣದ ಸಮಸ್ಯೆಯಾಗಿದ್ರೆ ಕೂಡಲೇ ಹಣ ನೀಡಿ ಸೇತುವೆ ಕೆಲಸ ಮುಗಿಸಿದರೆ ಮಲೆನಾಡಿನ ಸಾವಿರಾರು ಜನ ನಿಟ್ಟುಸಿರು ಬಿಡೋದು ಗ್ಯಾರಂಟಿ.

click me!