ಕೊರೋನಾ ಮಹಾಮಾರಿಗೆ ಮತ್ತೋರ್ವ ಜನಪ್ರತಿನಿಧಿ ಬಲಿ

Kannadaprabha News   | Asianet News
Published : Sep 18, 2020, 01:34 PM ISTUpdated : Sep 18, 2020, 01:49 PM IST
ಕೊರೋನಾ ಮಹಾಮಾರಿಗೆ ಮತ್ತೋರ್ವ ಜನಪ್ರತಿನಿಧಿ ಬಲಿ

ಸಾರಾಂಶ

ಕೊರೋನಾ ಮಹಾಮಾರಿ ಎಲ್ಲೆಡೆ ತನ್ನ ಅಟ್ಟಹಾಸ ಮೆರೆಯುತ್ತಿದ್ದು ಇದೀಗ ಮತ್ತೋರ್ವ ಮುಖಂಡರನ್ನು ಬಲಿ ಪಡೆದಿದೆ. 

ಬೆಂಗಳೂರು (ಸೆ.18): ಎಲ್ಲೆಡೆ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ ಮಹಾಮಾರಿಗೆ ಮತ್ತೋರ್ವ ಮುಖಂಡ ಬಲಿಯಾಗಿದ್ದಾರೆ. 

ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಎಂಬ ನಾಗರಾಜು ಕೊರೋನಾದಿಂದ ಮೃತಪಟ್ಟಿದ್ದಾರೆ. 

ಬಿಬಿಎಂಪಿ ವಿರೋಧ  ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದ ಎಂ  ನಾಗರಾಜು ಎರಡು ಬಾರಿ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದರು. 

ಕೊರೋನಾ ಸೋಂಕು, ಸಾವು: ಸೆಪ್ಟೆಂಬ​ರ್‌ನ ಮೊದಲ 15 ದಿನ​ದಲ್ಲಿ ಭಾರತ ನಂ.1 ..

ಕಳೆದ ಮೂರು ದಿನಗಳ ಹಿಂದಷ್ಟೇ ಅಚರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಇದರಿಂದ ಅವರನ್ನು ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಚಿಕಿತ್ಸೆ ಫಲಿಸದೇ ತೀವ್ರ ಉಸಿರಾಟದ ಸಮಸ್ಯೆಯಿಂದ ನಾಗರಾಜು ಮೃತಪಟ್ಟಿದ್ದಾರೆ. 

ಹೃದಯ ಸಂಬಂಧಿ ಸಮಸ್ಯೆಯಿಂದಲೂ ಬಳಲುತ್ತಿದ್ದ ನಾಗರಾಜು ಅವರಿಗೆ ಇದೇ ವೇಳೆ ಹೃದಯಾಘಾತವೂ ಆಗಿದ್ದು, ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಆನೇಕಲ್‌ನಲ್ಲಿ ನಾಗರಾಜು ಅವರ ಅಂತ್ಯಕ್ರಿಯೆ ನಡೆಯಲಿದೆ.

ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ನಾಗರಾಜು  ಎರಡು ಬಾರಿ ಕಾಂಗ್ರೆಸ್ ಟಿಕೆಟ್ ಪಡೆದು ಆಯ್ಕೆಯಾಗಿದ್ದರು. 

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು