ಬೆಂಗಳೂರಲ್ಲಿ ಭೀಕರ ಸರಣಿ ಅಪಘಾತ : ಕುಡಿದು ವಾಹನ ಚಲಾಯಿಸಿದ್ದೇ ಕಾರಣ

Suvarna News   | Asianet News
Published : Sep 18, 2020, 01:10 PM IST
ಬೆಂಗಳೂರಲ್ಲಿ ಭೀಕರ ಸರಣಿ ಅಪಘಾತ :  ಕುಡಿದು ವಾಹನ ಚಲಾಯಿಸಿದ್ದೇ ಕಾರಣ

ಸಾರಾಂಶ

ಕುಡಿದು ವಾಹನ  ಚಾಲನೆ ಮಾಡಿದ್ದರಿಂದ ಸಂಭವಿಸಿದ ಸರಣಿ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರನೋರ್ವ ಮೃತಪಟ್ಟ ಘಟನೆ  ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು (ಸೆ.18) : ಕುಡಿದು ಕಾರು ಚಾಲನೆ ಮಾಡಿದ್ದರಿಂದ ಆದ ಸರಣಿ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರನೋರ್ವ ಮೃತಪಟ್ಟ ಘಟನೆ ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ನಡೆದಿದೆ.

ಆರೋಪಿ ರೋಹಿತ್ ಕೇಡಿಯಾ ಎಂಬಾತ ಕುಡಿದು ಕಾರು ಚಲಾಯಿಸಿಕೊಂಡು ಬರುವಾಗ ಸರಣಿ ಅಪಘಾತವಾಗಿದೆ. ಈ ವೇಳೆ ರಿಚ್ಮಂಡ್ ವೃತ್ತದ ಬಳಿ ನಿಂತಿದ್ದ ದ್ವಿಚಕ್ರ ವಾಹನ ಸವಾರ ಕಿರಣ್ ಎಂಬಾತ ಸಾವಿಗೀಡಾಗಿದ್ದಾನೆ. 

ಇನ್ಶುರೆನ್ಸ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಿರಣ್ ಬೈಕಿಗೆ ಕಾರು ಗುದ್ದಿದ್ದು ಇದರಿಂದ ಸ್ಥಳದಲ್ಲಿಯೇ ಕಿರಣ್ ಸಾವಿಗೀಡಾಗಿದ್ದಾರೆ. 

ಮಗನ ಕೊಲೆಗೆ ಅಪ್ಪನೇ ಸುಪಾರಿ ಕೊಟ್ಟ : ಪುತ್ರ ದ್ವೇಷಕ್ಕೆ ಕಾರಣವೇ ಇದು! .

ಈ ಸಂಬಂಧ 304 ರ ಅಡಿಯಲ್ಲಿ ರೋಹಿತ್ ಕೇಡಿಯಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ವಿಲ್ಸನ್ ಗಾರ್ಡನ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 14 ದಿನಗಳ ಕಾಲ ರೋಹಿತ್‌ನನ್ನು ನ್ಯಾಯಾಂಗ ಬಂಧನ್ಕೆ ಒಪ್ಪಿಸಲಾಗಿದೆ. ವಾಹನ ಚಾಲನೆ ಮಾಡುವಾಗ ರೋಹಿತ್ ಡ್ರಗ್ಸ್ ಸೇವಿಸಿದ್ದನೇ ಎನ್ನುವ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

PREV
click me!

Recommended Stories

ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ
ಉಬರ್ ಆ್ಯಪ್‌ನಲ್ಲೂ ಬೆಂಗಳೂರು ಮೆಟ್ರೋ ಟಿಕೆಟ್ ಖರೀದಿ ಸೌಲಭ್ಯ, ಬುಕಿಂಗ್ ಮಾಡುವುದು ಹೇಗೆ?