
ಹನೂರು(ಜು.04): ಅರಣ್ಯ ಅಧಿಕಾರಿಯಿಂದ ರೈತರ ಮೇಲೆ ಹಲ್ಲೆ ಆರೋಪ ಮಹದೇಶ್ವರ ಬೆಟ್ಟದಲ್ಲಿ ರೈತ ಸಂಘಟನೆಯಿಂದ ರಸ್ತೆತಡೆ ನಡೆಸಿ ವಲಯ ಅರಣ್ಯಾಧಿಕಾರಿ ಕಚೇರಿ ಮುಂಬಾಗ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಯಿತು.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟವನ್ಯ ಜೀವಿ ವಲಯದ ಪಾಲಾರ್ ಅರಣ್ಯಾಧಿಕಾರಿ ಅರುಣ್ ಕುಮಾರ್ ಜಾನುವಾರುಗಳನ್ನು ಮೇಯಿಸುತ್ತಿದ್ದ ರೈತರ ಮೇಲೆ ದೊಣ್ಣೆ ಹಾಗೂ ಮುಳ್ಳಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಮಹದೇಶ್ವರ ಬೆಟ್ಟವಲಯ ಅರಣ್ಯಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಮನೆಯಂಗಳಲ್ಲಿ ಒಂದೆರಡಲ್ಲ, 13 ಹೆಬ್ಬಾವಿನ ಮರಿ..!
ಮಹದೇಶ್ವರಬೆಟ್ಟಸಮೀಪದ ತೊಳಸಿಕೆರೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ರೈತರಾದ ಅಂಬರೀಶ್ ಮತ್ತು ಡಿ. ಮಾದೇವ ಇಬ್ಬರಿಗೆ ವಲಯ ಅರಣ್ಯಾಧಿಕಾರಿ ಅರುಣ್ ದೊಣ್ಣೆ ಹಾಗೂ ಮುಳ್ಳಿನಿಂದ ಹಲ್ಲೆ ನಡೆಸಿರುವ ಹಿನ್ನೆಲೆ ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನಕಾರರು ಒತ್ತಾಯಿಸಿದರು.
ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಒತ್ತಾಯ:
ಲಕ್ಷಾಂತರ ಭಕ್ತರು ಬಂದು ಹೋಗುವ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದಾರ್ಜೆಗೇರಿಸಿ ಕ್ರಮ ವಹಿಸಬೇಕು ಹಾಗೂ ಈ ಭಾಗದಲ್ಲಿರುವ ರೈತರಿಗೆ ಪ್ರಧಾನ್ ಮಂತ್ರಿ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರ ನೀಡುತ್ತಿರುವ 2 ಸಾವಿರ ಹಣ ರೈತರ ಖಾತೆಗೆ ಬಂದಿಲ್ಲ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಮೀನನ್ನು ಸರ್ವೇ ಮಾಡಿ ಪೋಡಿ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು.
ಮ.ಬೆಟ್ಟಪ್ರಾಧಿಕಾರಕ್ಕೆ ಮನವಿ:
ಮಲೆ ಮಹದೇಶ್ವರ ಬೆಟ್ಟಸುತ್ತಮುತ್ತಲಿನಲ್ಲಿ ಬರುವ ಕುಗ್ರಾಮಗಳನ್ನು ಪ್ರಾಧಿಕಾರದ ವತಿಯಿಂದ ಅಭಿವೃದ್ದಿಗೊಳಿಸಬೇಕು ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿಗೆ ಮನವಿ ಸಲ್ಲಿಸಿದರು. ಜೊತೆಗೆ ಗ್ರಾ.ಪಂ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಪಂಚಾಂಗ: ಇಂದಿನಿಂದ ಪರಶಿವ ಯೋಗ ನಿದ್ರೆಗೆ ಜಾರುತ್ತಾನೆ
ಈ ಸಂದರ್ಭದಲ್ಲಿ ರೈತ ಸಂಘದ ಗುಂಡ್ಲುಪೇಟೆ ಘಟಕ ಅಧ್ಯಕ್ಷ ಮಹದೇವಪ್ಪ , ಹನೂರು ಘಟಕದ ಅಧ್ಯಕ್ಷ ಕರಿಯಪ್ಪ, ಕಾರ್ಯದರ್ಶಿ ಶಾಂತಕುಮಾರ್, ರೈತ ಮುಖಂಡರಾದ ಸಂಪತ್, ಮಂಜುನಾಥ್ ಹಾಗೂ ಇನ್ನಿತರರು ಇದ್ದರು. ರಾಮಪುರ ಸಿಪಿಐ ಮನೋಜ ಕುಮಾರ್, ಮ.ಬೆಟ್ಟಸಿಪಿಐ ಮಹೇಶ್, ಸಿಬ್ಬಂದಿ ವರ್ಗದವರು ಸೂಕ್ತ ಬಂದೋಬಸ್‌್ತ ಕಲ್ಪಿಸಿದರು.
ಅರಣ್ಯ ಇಲಾಖೆ, ಸ್ಥಳೀಯರ ಮಧ್ಯೆ ಜಟಾಪಟಿ
ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರ ನಡುವೆ ಜಟಾಪಟಿ ನಡೆದು ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿರುವ ಘಟನೆ ಕುರಟ್ಟಿಹೊಸೂರು ಸಮೀಪದ ದಂಟಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಹನೂರು ತಾಲೂಕಿನ ದಂಟಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಜಮೀನು ಕಾವಲಿಗೆ ತೆರಳುತ್ತಿದ್ದ ಮುನಿರುದ್ರ ಎಂಬವರಿಗೆ ಫಾರೆಸ್ಟ್ ಗಾರ್ಡ್ ಮೋಹನ್ ಮತ್ತು ವಾಚರ್ ಲೋಕೇಶ್ ಎಂಬವರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಸದ್ಯ ಮುನಿರುದ್ರ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುನಿರುದ್ರ ತನ್ನ ನಾಯಿಯೊಂದಿಗೆ ಜಮೀನು ಕಾವಲಿಗೆ ತೆರಳುತ್ತಿದ್ದ ವೇಳೆ ಫಾರೆಸ್ಟ್ ಗಾರ್ಡ್ ಲೋಕೇಶ್ ಅಡ್ಡಹಾಕಿ ಬೇಟೆ ಮಾಡಲು ಹೋಗುತ್ತಿದ್ದಿಯಾ ಎಂದು ಪ್ರಶ್ನಿಸಿ ಕುತ್ತಿಗೆ ಭಾಗಕ್ಕೆ ಹೊಡೆದಿದ್ದಾರೆ ಎನ್ನಲಾಗಿದೆ.
ನವ ವಿವಾಹಿತ ವರ ಬಲಿ, ಮದುವೆಗೆ ಬಂದ 113 ಮಂದಿಗೆ ಕೊರೋನಾ!
ಏಟು ಬಿದ್ದ ಕೂಡಲೇ ಮುನಿರುದ್ರ ಮೂರ್ಛೆ ಹೋಗಿದ್ದಾನೆ. ಈ ವಿಚಾರ ತಿಳಿದ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಘೇರಾವ್ ಹಾಕಿದ್ದಾರೆ . ಈ ವಿಚಾರ ಸಿಸಿಎಫ್ ಗಮನಕ್ಕೆ ಬಂದು ಘಟನೆ ಕುರಿತು ಆರ್‌ಎಫ್‌ಒ ಬಳಿ ವರದಿ ಕೇಳಿದ್ದಾರೆ.
ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನಡುವೆ ತಿಕ್ಕಾಟ ತಾರಕಕ್ಕೇರುವ ಲಕ್ಷಣಗಳಿದ್ದು ನಿಜಕ್ಕೂ ಆತ ಬೇಟೆಗೆ ಹೋಗುತ್ತಿದ್ದನೇ ಇಲ್ಲವೇ ಸುಖಾಸುಮ್ಮನೆ ಫಾರೆಸ್ಟ್ ಗಾರ್ಡ್ ಹಲ್ಲೆ ಮಾಡಿದರೇ ಎಂಬುದನ್ನು ಅರಣ್ಯ ಇಲಾಖೆ ಮೇಲಕಾರಿಗಳು ಸ್ವಷ್ಟಪಡಿಸಬೇಕಿದೆ.