ತುಮಕೂರು: ರೈಲ್ವೆ ಹಳಿ ಮೇಲೆ ಅರಣ್ಯ ಇಲಾಖೆ ಮಹಿಳಾ ಸಿಬ್ಬಂದಿ ಶವ ಪತ್ತೆ, ಚಿನ್ನಾಭರಣಕ್ಕಾಗಿ ನಡೀತಾ ಕೊಲೆ?

By Girish Goudar  |  First Published Feb 1, 2024, 9:31 PM IST

ಅನ್ನಪೂರ್ಣ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಯಾರೋ ರೈಲಿನಿಂದ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅನ್ನಪೂರ್ಣ ಒಡವೆ ದೋಚಿ ಬಳಿಕ ರೈಲಿನಿಂದ ತಳ್ಳಿ ಕೊಲೆ ಮಾಡಿದ್ದಾರೆ. ಅನ್ನಪೂರ್ಣಳ ಮಾಂಗಲ್ಯ ಸರ, ಕಿವಿ ಓಲೆ, ಕೈಬಳೆ ಕಳ್ಳತನ ಮಾಡಲಾಗಿದೆ. ಹೀಗಾಗಿ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ಮೃತರ ಸಂಬಂಧಿಕರು. 


ತುಮಕೂರು(ಫೆ.01): ರೈಲಿನಿಂದ ಬಿದ್ದು ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತುಮಕೂರು ಸಮೀಪದ ಹಿರೇಹಳ್ಳಿ ಬಳಿ ಇಂದು(ಗುರುವಾರ) ನಡೆದಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ ಅನ್ನಪೂರ್ಣ(50) ಮೃತ ದುರ್ದೈವಿ. ಹಿರೇಹಳ್ಳಿ ಬಳಿ ರೈಲ್ವೇ ಹಳಿಯ ಮೇಲೆ ಅನ್ನಪೂರ್ಣ ಮೃತದೇಹ ಪತ್ತೆಯಾಗಿದೆ. 

ಬೆಂಗಳೂರಿನ ಮಲ್ಲೇಶ್ವರಂ ಅರಣ್ಯಭವನದಲ್ಲಿ ಸ್ಟೆನೋಗ್ರಾಫರ್‌ ಆಗಿದ್ದ ಅನ್ನಪೂರ್ಣ, ಮಲ್ಲೇಶ್ವರಂನಲ್ಲಿಯೇ ವಾಸವಾಗಿದ್ದರು. ಪರೀಕ್ಷಾ ಕೊಠಡಿ ಮೇಲ್ವಿಚಾರಕಿ ಕಾರ್ಯನಿರ್ವಹಣೆ ನಿಮಿತ್ತ ಶಿವಮೊಗ್ಗ ತೆರಳಿದ್ದ ಅನ್ನಪೂರ್ಣ, ಕಳೆದ ಮಂಗಳವಾರ ರಾತ್ರಿ ಕೆಲಸ ಮುಗಿಸಿ ವಾಪಸ್ ರೈಲಿನಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ಸಹೋದರ ಬ್ರಹ್ಮಾನಂದ್ ಜೊತೆಗೆ ಅನ್ನಪೂರ್ಣ ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟಿದ್ದರು. ಆದ್ರೆ ರಿಸರ್ವೇಷನ್ ಬೋಗಿಯಲ್ಲಿ ಬ್ರಹ್ಮಾನಂದ್ ಪ್ರಯಾಣಿಸುತ್ತಿದ್ರೆ, ಅನ್ನಪೂರ್ಣ ಮಹಿಳೆಯರ ಜನರಲ್ ಬೋಗಿಯನ್ನ ಹತ್ತಿದ್ದರು. ಬುಧವಾರ ಬೆಳಗ್ಗೆ ತುಮಕೂರಿನ ಹಿರೇಹಳ್ಳಿ ಬಳಿಯ ರೈಲ್ವೇ ಹಳಿಯಲ್ಲಿ ಅನ್ನಪೂರ್ಣ ಶವ ಪತ್ತೆಯಾಗಿದ್ದು, 20 ಕಿಲೋ ಮೀಟರ್ ದೂರದಲ್ಲಿ ಅನ್ನಪೂರ್ಣ ಅವರ ಬ್ಯಾಗ್ ಪತ್ತೆಯಾಗಿದೆ. 

Tap to resize

Latest Videos

undefined

ಗೃಹ ಸಚಿವರ ತವರಲ್ಲಿ 1ನೇ ತರಗತಿ ಬಾಲಕಿ ಎಳೆದೊಯ್ದು ಅತ್ಯಾಚಾರವೆಸಗಿದ ಕಾಮುಕ

ಇನ್ನು ಅನ್ನಪೂರ್ಣ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಯಾರೋ ರೈಲಿನಿಂದ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅನ್ನಪೂರ್ಣ ಒಡವೆ ದೋಚಿ ಬಳಿಕ ರೈಲಿನಿಂದ ತಳ್ಳಿ ಕೊಲೆ ಮಾಡಿದ್ದಾರೆ. ಅನ್ನಪೂರ್ಣಳ ಮಾಂಗಲ್ಯ ಸರ, ಕಿವಿ ಓಲೆ, ಕೈಬಳೆ ಕಳ್ಳತನ ಮಾಡಲಾಗಿದೆ. ಹೀಗಾಗಿ ಸೂಕ್ತ ತನಿಖೆ ನಡೆಸಬೇಕು ಎಂದು ಮೃತರ ಸಂಬಂಧಿಕರು ಒತ್ತಾಯಿಸಿದ್ದಾರೆ.

click me!