Raichur Shock: ರೈತನಿಗೆ ಮದ್ಯ ಕುಡಿಸಿ ಮನಸೋ ಇಚ್ಛೆ ಹಲ್ಲೆ, ₹15000 ಲಂಚಕ್ಕೆ ಬೇಡಿಕೆ?: ಅರಣ್ಯ ಸಿಬ್ಬಂದಿ ವಿರುದ್ಧ ಗಂಭೀರ ಆರೋಪ!

Published : Oct 09, 2026, 11:02 AM IST
Forest department staff assault farmer

ಸಾರಾಂಶ

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ಜಮೀನಿನಲ್ಲಿ ಸಸಿ ನೆಡುವ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ತೀವ್ರ ಹಲ್ಲೆ ನಡೆಸಿದ್ದಾರೆ. ಬಲವಂತವಾಗಿ ಮದ್ಯ ಕುಡಿಸಿ, ಕಚೇರಿಗೆ ಕರೆದೊಯ್ದು ಥಳಿಸಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಗಂಭೀರ ಆರೋಪ ಕೇಳಿಬಂದಿದೆ.

ರಾಯಚೂರು(ಅ.9): ಜಮೀನಿನಲ್ಲಿ ಸಸಿ ನೆಡುವ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಮನಬಂದಂತೆ ಥಳಿಸಿದ ಗಂಭೀರ ಆರೋಪ ಕೇಳಿಬಂದಿದ್ದು, ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಯರದೊಡ್ಡಿ ಗ್ರಾಮದ ರೈತ ತೀವ್ರ ನೋವಿನಿಂದ ಆಸ್ಪತ್ರೆಯಲ್ಲಿ ನೋವಿನಿಂದ ನರಳಾಡುತ್ತಿದ್ದಾರೆ.

ಅರಣ್ಯ ಸಿಬ್ಬಂದಿಯೋ ರೌಡಿಗಳೋ?

ಯರದೊಡ್ಡಿ ಗ್ರಾಮದ ರೈತ ರಮೇಶ್, ಅರಣ್ಯ ಇಲಾಖೆ ಸಿಬ್ಬಂದಿಯಿಂದ ಹಲ್ಲೆಗೊಳಗಾದ ವ್ಯಕ್ತಿ.

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಸಿ ನೆಡಲು ಬಂದಿದ್ದ ಅರಣ್ಯ ಇಲಾಖೆ ಸಿಬ್ಬಂದಿ. ಈ ವೇಳೆ ರೈತ ರಮೇಶ್ ಹೊಲದಲ್ಲಿ ಸಸಿ ನೆಡುವ ವೇಳೆ ಆಕ್ಷೇಪಿಸಿದ್ದ ಹೊಲದಲ್ಲಿ ದಾಳಿಂಬೆ ಬೆಳೆದಿರುವ ರೈತ. ದಾಳಿಂಬೆ ಗಿಡದ ಬಳಿ ಸಸಿ ನೆಟ್ಟಿದ್ದ ರೈತ ಆಕ್ಷೇಪ ವ್ಯಕ್ತಪಡಿಸದ್ದರು. ನಮ್ಮ ಜಮೀನಿನ ಒಳಗೆ ಯಾಕೆ ಸಸಿ ನೆಟ್ಟಿದ್ದೀರಿ. ಜಮೀನಿನ ಆಚೆ ಸಸಿ ನೆಡಬಾರದೆ? ಎಂದು ಪ್ರಶ್ನಿಸಿದ್ದಾರೆ. ನಾಳೆ ಅರಣ್ಯ ಇಲಾಖೆ ಗಿಡಗಳನ್ನು ನೋಡಿ ಜಮೀನು ವಿವಾದವಾದೀತು ಎಂಬ ಆತಂಕದಲ್ಲಿ ರೈತ ಜಮೀನಿನ ಆಚೆ ಗಿಡ ನೆಡುವಂತೆ ಹೇಳಿದ್ದಾನೆ.

ಬಲವಂತವಾಗಿ ರೈತನಿಗೆ ಮದ್ಯ ಕುಡಿಸಿ ಹಲ್ಲೆ?

ಆಷ್ಟಕ್ಕೆ ಕೋಪಗೊಂಡ ಅರಣ್ಯ ಇಲಾಖೆ ಸಿಬ್ಬಂದಿ, ರೈತ ರಮೇಶ್‌ನನ್ನ ಅರಣ್ಯ ಇಲಾಖೆ ಸಿಬ್ಬಂದಿ ಬಲವಂತವಾಗಿ ಬೈಕ್‌ನಲ್ಲಿ ಕರೆದೊಯ್ದಿದ್ದಲ್ಲದೆ ಮಾರ್ಗ ಮಧ್ಯೆ ರೈತನಿಗೆ ಬಲವಂತವಾಗಿ ಮದ್ಯಪಾನ ಮಾಡಿಸಿ ಲಿಂಗಸೂಗೂರು ಅರಣ್ಯ ಇಲಾಖೆ ಕಚೇರಿಗೆ ಕರೆತಂದು ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.

ಅರಣ್ಯ ಇಲಾಖೆ ಕಚೇರಿಯಲ್ಲೂ ಮದ್ಯ ಕುಡಿಸಿ ಹಲ್ಲೆ!

ದಾರಿ ಮಧ್ಯೆ ಮದ್ಯ ಕುಡಿಸಿ ರೈತನ ಮೇಲೆ ಮಾಡಿದ್ದಲ್ಲದೆ ಅರಣ್ಯ ಇಲಾಖೆಗೆ ಕಚೇರಿಗೆ ಕರೆತಂದು ಅಲ್ಲಿಯೂ ರೈತನಿಗೆ ಮದ್ಯ ಕುಡಿಸಿ ಮನಸೋ ಇಚ್ಛೆ ಹಲ್ಲೆ ನಡೆಸಿ, ರೈತನ ಕುಟುಂಬಕ್ಕೆ ಕರೆ ಮಾಡಿ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಇದೊಂದು ಗಂಭೀರ ಆರೋಪವಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಅಕ್ಷರಶಃ ರೌಡಿಗಳಂತೆ ವರ್ತಿಸಿದ್ದಾರೆ. ಸದ್ಯ ಅರಣ್ಯ ಸಿಬ್ಬಂದಿಯಿಂದ ಹಲ್ಲೆಗೊಳಗಾಗಿರುವ ರೈತನ ಬೆನ್ನಮೇಲೆ ಬಾಸುಂಡೆ ಮೂಡಿದ್ದು, ತೀವ್ರ ನೋವಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರಿನ ಈ ರಸ್ತೆಯಲ್ಲಿ ಅಕ್ಟೋಬರ್ 10 ರಿಂದ 20 ದಿನ ಸಂಚಾರ ಬಂದ್! ಪೊಲೀಸರಿಂದ ಪರ್ಯಾಯ ಮಾರ್ಗಗಳ ಮಾಹಿತಿ ರಿಲೀಸ್
3 ವರ್ಷ Oracleನಲ್ಲಿ ಕೆಲಸ… ಬಳಿಕ Uber ಡ್ರೈವರ್! ಇಂದು ಸ್ವಂತ ಕಂಪನಿ, 5 ಪಟ್ಟು ಹೆಚ್ಚು ಆದಾಯ!