Uttara Kannada: ತೆಲುಗು ಸಿನಿಮಾ ಶೂಟಿಂಗ್ ವೇಳೆ ಅವಘಡ; ಮುರಿದು ಬಿದ್ದ ಖರ್ವಾ-ಮೋಟೆ ತೂಗು ಸೇತುವೆ

Published : Oct 09, 2026, 09:49 AM IST
Collapsed Kharva-Mote suspension bridge

ಸಾರಾಂಶ

ಹೊನ್ನಾವರ ತಾಲೂಕಿನ ಮೋಟೆ ಬಳಿ ಯಾವುದೇ ಅನುಮತಿ ಇಲ್ಲದೆ ತೆಲುಗು ಸಿನಿಮಾ ಚಿತ್ರೀಕರಣ ನಡೆಸುವಾಗ ತೂಗುಸೇತುವೆ ತುಂಡಾಗಿ ಅಪಾಯವೊಂದು ತಪ್ಪಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳ ಪರಿಶೀಲನೆ ಬಳಿಕ ಚಿತ್ರತಂಡವು ಸೇತುವೆಯ ದುರಸ್ತಿ ವೆಚ್ಚವನ್ನು ಭರಿಸಲು ಒಪ್ಪಿದೆ.

ಕಾರವಾರ: ತೆಲುಗು ಸಿನಿಮಾ ಚಿತ್ರೀಕರಣದ ವೇಳೆ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ತುಂಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಖಾರ್ವ ನಾಥಗೇರಿ ಬಳಿಯ ಮೋಟೆ ಯಲ್ಲಿ ನಡೆದಿದೆ.

ಆಂಧ್ರದ ಆರ್.ಕೆ ದುಗ್ಗುಲ್ ಸ್ಟುಡಿಯೋಸ್ ತಂಡವು ತೆಲುಗು ಸಿನಿಮಾ ಚಿತ್ರೀಕರಣಕ್ಕಾಗಿ ಮೋಟೆ ತೂಗುಸೇತುವೆ ಮೇಲೆ ಭಾರೀ ಗಾತ್ರದ ಚಿತ್ರೀಕರಣದ ಪರಿಕರ ಹಾಗೂ ಟ್ರ್ಯಾಲಿಯನ್ನು ಯಾವುದೇ ಅನುಮತಿ ಇಲ್ಲದೇ ತೂಗು ಸೇತುವೆಯ ಮೇಲೆ ತಂದಿದ್ದಾರೆ. ಈ ವೇಳೆ ಸೇತುವೆಯ ಒಂದು ಭಾಗದ ಕಬ್ಬಿಣದ ಹಗ್ಗವು ತುಂಡಾಗಿ ಸೇತುವೆ ಪಕ್ಕದ ತೆಂಗಿನ ಮರದಕಡೆ ವಾಲಿದೆ, ಇದರಿಂದ ಸೇತುವೆ ತುಂಡಾಗಿ ನದಿಗೆ ಬೀಳುವುದು ತಪ್ಪಿದ್ದು, ದೊಡ್ಡ ಅವಘಡ ತಪ್ಪಿದೆ.

ಸೇತುವೆ ಮುಂಭಾಗದಲ್ಲಿ ಸೇತುವೆ ಶಿಥಿಲಾವಸ್ತೆಯಲ್ಲಿದ್ದು ಭಾರೀ ವಾಹನ, ವಸ್ತುಗಳನ್ನ ಕೊಂಡೊಯ್ಯದಂತೆ ನಾಮಫಲಕ ಅಳವಡಿಸಿದ್ದರೂ, ಯಾವುದೇ ಅನುಮತಿ ಸಹ ಪಡೆಯದೇ ಚಿತ್ರತಂಡ ಚಿತ್ರೀಕರಣ ಮಾಡಿದ್ದು ಇದರಿಂದಾಗಿ ಇದೀಗ ಖರ್ವಾ ಗ್ರಾಮದ ನಾಥಗೇರಿ -ಮೊಟೆ ಭಾಗದ ಸಂಪರ್ಕ ಕೊಂಡಿ ತಪ್ಪಿದಂತಾಗಿದೆ. ಪ್ರತಿ ಮಳೆಗಾಲದಲ್ಲಿ ಮುಖ್ಯ ಸಂಪರ್ಕ ಸೇತುವೆಯಾಗಿದ್ದ ಈ ಸೇತುವೆ ಚಿತ್ರೀಕರಣ ತಂಡದ ನಿರ್ಲಕ್ಷ ಕೆಲಸದಿಂದ ಊರಿನವರು ಸಂಪರ್ಕ ಕೊಂಡಿಯನ್ನ ಕಳೆದುಕೊಂಡಂತಾಗಿದೆ.

ಇನ್ನು ಸ್ಥಳಕ್ಕೆ ಗ್ರಾಮಪಂಚಾಯ್ತಿ ಪಿಡಿಓ ಗಿರೀಶ್ ನಾಯಕ ಹಾಗೂ ಇತರ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದು ಪ್ರೊಡ್ಯುಸರ್ ಗೌತಮ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದು, ಈ ವೇಳೆ ಸೇತುವೆಯ ವೆಚ್ಚ ಬರಿಸುವುದಾಗಿ ಚಿತ್ರತಂಡ ಮುಚ್ಚಳಿಕೆ ಬರೆದುಕೊಟ್ಟಿದೆ.

ಶ್ರೀಗಂಧ ಮರ ಕಡಿದ ನಾಲ್ವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗೋಳಿಕಟ್ಟೆ ಗ್ರಾಮದಲ್ಲಿ ಅನಧಿಕೃತವಾಗಿ ಶ್ರೀಗಂಧದ ಮರಗಳನ್ನು ಕಡಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದೆ.

ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಡಿದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿನಡಿಸಿದ ಅರಣ್ಯಾಧಿಕಾರಿಗಳ ತಂಡ ಸುಮಾರು 27 ಕೆ.ಜಿ ಶ್ರೀಗಂಧದ ಮರದ ತುಂಡನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣ ದಲ್ಲಿ ಆರೋಪಿಗಳಾದ ಸಂತೋಷ ಸಣ್ಣ ನಾಯ್ಕ (35), ನವೀನ ಚಂದ್ರಶೇಖರ ದೇವಡಿಗ (30), ಮಂಜುನಾಥ ಮಾದೇವ ಗೌಡ (39) ಹಾಗೂ ಜನಾರ್ಧನ ಗಣಪತಿ ಗೌಡ (29) ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ ಹಾಗೂ ಭಾರತೀಯ ಅರಣ್ಯ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

PREV
Read more Articles on
click me!

Recommended Stories

ಶಿವಮೊಗ್ಗದಲ್ಲಿ 12ನೇ ಶತಮಾನದ ಅಪ್ರಕಟಿತ ತುರುಗೋಳ್ ವೀರಗಲ್ಲು ಶಾಸನ ಪತ್ತೆ, ಸ್ತ್ರೀಯರ ಮಾನರಕ್ಷಣೆಗೆ ಹೋರಾಡಿ ವೀರಮರಣ!
ಗ್ರಾಮೀಣ ಮಕ್ಕಳಿಗೆ ಭರ್ಜರಿ ಸಿಹಿ ಸುದ್ದಿ: ಗ್ರಾಪಂ ಲೈಬ್ರರಿಗಳೇ ಇನ್ಮುಂದೆ 'ಆರ್ಟ್ ಗ್ಯಾಲರಿ' RDPR ಹೊಸ ಪ್ಲಾನ್ ಏನು?