ಟಿಕೆಟ್ ಗೋಲ್ ಮಾಲ್ ಮಾಡಿ ಆನ್ ಲೈನ್ ಟಿಕೆಟ್ ಫೋರ್ಜರಿ ಮಾಡಿ ಸರ್ಕಾರಕ್ಕೆ ಮೋಸ ಮಾಡಿದ್ದಾನೆ. ಸದ್ಯಕ್ಕೆ 9000 ಹಣವನ್ನ ಸರ್ಕಾರಕ್ಕೆ ಮೋಸ ಮಾಡಿರುವುದು ಸಾಬೀತು ಆಗಿದೆ. ಇಲಾಖೆಗೆ ಲಕ್ಷಗಟ್ಟಲೇ ಹಣ ಯುವತಿ ಖಾತೆಗೆ ಜಮಾವಾಗಿರೋ ಅನುಮಾನ ವ್ಯಕ್ತವಾಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು(ಆ.27): ಚಾರಣಕ್ಕೆ ತೆರಳುವ ಪ್ರವಾಸಿಗರಿಗೆ ನಕಲಿ ಟಿಕೆಟ್ ಕೊಟ್ಟು, ಸರ್ಕಾರಕ್ಕೆ ಸೇರಬೇಕಾದ ಹಣವನ್ನು ಗರ್ಲ್ ಫ್ರೆಂಡ್ ಫೋನ್ ಪೇಗೆ ಹಾಕಿಸಿ ಸಿಕ್ಕಿಬಿದ್ದ ಅಧಿಕಾರಿಯನ್ನು ಅರಣ್ಯ ಇಲಾಖೆ ಅಮಾನತುಗೊಳಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ದುಡ್ಡು ಮಾಡೋಕೆ ನಕಲಿ ಬಿಲ್ ಸೃಷ್ಟಿಸಿ, ಪ್ರವಾಸಿಗರಿಗೆ ನಕಲಿ ಟಿಕೆಟ್ ಮೂಲಕ ಎಂಟ್ರಿ ಕೊಡುತ್ತಿದ್ದ ಕಳಸದ ಡಿಆರ್‌ಒಫ್‌ಒ ಚಂದನ್ ಗೌಡ ಅಮಾನತ್ತುಗೊಂಡಿರುವ ಅರಣ್ಯ ಅಧಿಕಾರಿ.
ಸರ್ಕಾರಕ್ಕೆ ಮೋಸ :
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣವನ್ನು ಮಳೆಗಾಲದಲ್ಲಿ ಕಣ್ಣುತುಂಬಿಕೊಳ್ಳುವ ನಿಟ್ಟಿನಲ್ಲಿ ವೀಕೆಂಡ್ ನಲ್ಲಿ ಸಾಲು ಸಾಲು ಪ್ರವಾಸಿಗರು ಭೇಟಿ ನೀಡುತ್ತಾರೆ. ಅದರಲ್ಲೂ ಮೂಡಿಗೆರೆ ಕೆಲ ಪ್ರವಾಸಿತಾಣಗಳಿಗೆ ಚಾರಣ ಹೋಗುವರ ಸಂಖ್ಯೆಯೇ ಜಾಸ್ತಿ. ಮೂಡಿಗೆರೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ರಾಣಿಝರಿ ಜಲಪಾತ, ದಕ್ಷಿಣ ಕನ್ನಡ ತಾಲೂಕಿನ ಬಂಡಾಜೆ ಫಾಲ್ಸ್ ಗಳಿಗೆ ತೆರಳುವ ಪ್ರವಾಸಿಗರು ಟಿಕೆಟ್ ಪಡೆದು ಚಾರಣಕ್ಕೆ ಹೋಗುವ ನಿಯಮವನ್ನು ಅರಣ್ಯ ಇಲಾಖೆ ಮಾಡಿದೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಅಧಿಕಾರಿಯೊಬ್ಬ ನಕಲಿ ಟಿಕೆಟ್ ಸೃಷ್ಠಿ ಮಾಡಿ ಸರ್ಕಾರಕ್ಕೆ ಮೋಸ ಮಾಡಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಟಿಕೆಟ್ ಗೋಲ್ ಮಾಲ್ ಮಾಡಿ ಆನ್ ಲೈನ್ ಟಿಕೆಟ್ ಫೋರ್ಜರಿ ಮಾಡಿ ಸರ್ಕಾರಕ್ಕೆ ಮೋಸ ಮಾಡಿದ್ದಾನೆ. ಸದ್ಯಕ್ಕೆ 9000 ಹಣವನ್ನ ಸರ್ಕಾರಕ್ಕೆ ಮೋಸ ಮಾಡಿರುವುದು ಸಾಬೀತು ಆಗಿದೆ. ಇಲಾಖೆಗೆ ಲಕ್ಷಗಟ್ಟಲೇ ಹಣ ಯುವತಿ ಖಾತೆಗೆ ಜಮಾವಾಗಿರೋ ಅನುಮಾನ ವ್ಯಕ್ತವಾಗಿದೆ.
ಜೀವನದಲ್ಲಿ ನೆಮ್ಮದಿಯಾಗಿರಲು ಸರಳವಾಗಿ ಬದುಕಬೇಕು: ಸಿ.ಟಿ.ರವಿ
ಬಂಡಾಜೆ ಫಾಲ್ಸ್ ಬಳಿ 200ಕ್ಕೂ ಅಧಿಕ ಜನರಿಗೆ ಟಿಕೆಟ್ ಇಲ್ಲದೆ ಪಾಲ್ಸ್ ಗೆ ಅವಕಾಶ ಮಾಡಿಕೊಟ್ಟ ಆರೋಪ ಅರಣ್ಯ ಇಲಾಖೆಯ ಡಿ ಆರ್ ಎಫ್ ಓ ಚಂದನ್ ಗೌಡ ಮೇಲೆ ಕೇಳಿ ಬಂದಿದೆ. ಮದ್ಯ ಚೆಕ್ ಮಾಡಲು ಹೋಗಿದ್ದ ಪೊಲೀಸರಿಗೆ ಸೀಜ್ ಆಗಿದ್ದ ಪ್ರವಾಸಿಗರಿಂದ ಪ್ರಕರಣ ಬೆಳಕಿಗೆ ಬಂದಿದೆ. ಜೂನ್ ತಿಂಗಳ ಆನ್ ಲೈನ್ ಟಿಕೆಟ್ ಬುಕ್ಕಿಂಗ್, ಪ್ರವಾಸಿಗರ ನೋಂದಣಿ ಪುಸ್ತಕಕ್ಕೂ ಸಂಬಂಧವೇ ಇಲ್ಲ ಎಂಬುದು ತನಿಖೆ ಇಂದ ಗೊತ್ತಾಗಿದೆ ನಕಲಿ ಆನ್ ಲೈನ್ ಟಿಕೆಟ್ ಮುದ್ರಿಸಿ ಸರ್ಕಾರಕ್ಕೆ ಮೋಸ ಮಾಡಿರೋ ಬಗ್ಗೆ ಇಲಾಖೆಗೆ ಅನುಮಾನ ಕೂಡ ಇದ್ದು ಸದ್ಯ ಕಳಸ ಡಿ.ಆರ್.ಎಫ್.ಓ. ಚಂದನ್ ಗೌಡ ನನ್ನು ಅಮಾನತು ಗೊಳಿಸಲಾಗಿದೆ ಕೊಪ್ಪ ಡಿ.ಎಫ್.ಓ. ಉಪೇಂದ್ರ ಪ್ರತಾಪ್ ಸಿಂಗ್ ಅಮಾನತು ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರಿಂದ ಗೂಸಾ ತಿಂದಿದ್ದ ಚಂದನ್ :
ಬಲ್ಲರಾಯನದುರ್ಗ ಚಾರಣಕ್ಕೆ ಹೋಗುವ ಪ್ರವಾಸಿಗರಿಗೆ ನಕಲಿ ಟಿಕೆಟ್ ನೀಡಿ ಆ ಹಣವನ್ನು ತನ್ನ ಪ್ರೇಯಸಿಯ ಅಕೌಂಟ್ ಗೆ ಹಾಕಿಸಿಕೊಳ್ಳುತ್ತಿದ್ದ ಡಿ ಆರ್ ಎಫ್ ಓ ಅಧಿಕಾರಿ ಚಂದನ್ ಅಕ್ರಮ ಹೊರಬರುತ್ತಿದ್ದಂತೆಯೇ ಅಮಾನತು ಮಾಡಿ ಆದೇಶಿಸಲಾಗಿದೆ. ಆದರೆ ಚಂದನ್ ಪುರಾಣ ಹೊಸತೇನಲ್ಲ ಈ ಹಿಂದೆಯೂ ಬೇರೊಬ್ಬರ ಪತ್ನಿಯನ್ನು ತನ್ನ ಕ್ವಾರ್ಟರ್ಸ್ ಗೆ ಕರೆದುಕೊಂಡು ಬಂದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಸಾರ್ವಜನಿಕರಿಂದ ಗೂಸಾ ತಿಂದಿದ್ದ ಘಟನೆ ನಡೆದಿತ್ತು.