ಹಾಸನದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ : ಒಂಟಿ ಸಲಗ ಸೆರೆ

By Suvarna NewsFirst Published Jun 10, 2021, 4:19 PM IST
Highlights
  • ಆಲೂರು ,ಸಕಲೇಶಪುರ ಭಾಗದಲ್ಲಿ ಜನರ ಬಲಿ ಪಡೆದಿದ್ದ ಒಂಟಿ ಸಲಗ ಸೆರೆ
  •  ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಕಾಡಾನೆ  ಸೆರೆ 
  • ಡಿಸಿಎಫ್ ಬಸವರಾಜ್ ನೇತೃತ್ವದಲ್ಲಿ ಕಾರ್ಯಾಚರಣೆ 

ಹಾಸನ (ಜೂ.10):  ಆಲೂರು ,ಸಕಲೇಶಪುರ ಭಾಗದಲ್ಲಿ ಜನರ ಬಲಿ ಪಡೆದಿದ್ದ ಒಂಟಿ ಸಲಗ ಕೊನೆಗೂ ಸೆರೆಯಾಗಿದೆ. ಇಂದು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಕಾಡಾನೆ  ಸೆರೆ ಹಿಡಿಯಲಾಗಿದೆ. 

ಡಿಸಿಎಫ್ ಬಸವರಾಜ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸಾಕಾನೆ ಅಭಿಮನ್ಯು ನೇತೃತ್ವದ ಐದು ಸಾಕಾನೆಗಳ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಳೆಕೆರೆ ಬಳಿ ಸೆರೆ ಹಿಡಿಯಲಾಗಿದೆ.  

ಒಟ್ಟು ಎರಡು ಕಾಡಾನೆಗಳ ಸೆರೆಗೆ ಇಂದಿನಿಂದ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸೆರೆಯಾದ ಆನೆಯನ್ನ ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತದೆ. 

ಕಳೆದ ಐದು ತಿಂಗಳಲ್ಲಿ ಹಾಸನದಲ್ಲಿ ಐವರು ಕಾಡಾನೆ ದಾಳಿಗೆ ಬಲಿಯಾಗಿದ್ದು, ಜನರಿಗೆ ಕಾಟ ಕೊಡುತ್ತಿದ್ದ ಪುಂಡಾನೆ ಸೆರೆಗೆ ಜನರು ಒತ್ತಾಯಿಸಿದ್ದರು. ಜನರ ಒತ್ತಾಯದಿಂದ ಕೊರೋನ ಭೀತಿ ನಡುವೆಯೂ ಕಾರ್ಯಾಚರಣೆ ನಡೆಸಿ ಆನೆ ಸೆರೆ ಹಿಡಿಯಲಾಗಿದೆ. 

ಮೊದಲ ದಿನದ ಕಾರ್ಯಾಚರಣೆ ವೇಳೆಯೇ ಪುಂಡಾನೆ ಖೆಡ್ಡಾಕ್ಕೆ ಕೆಡವಲಾಗಿದೆ. 

click me!