ಪಟ್ಟಣದ 1 ಮತ್ತು 2ನೇ ವಾರ್ಡ್‌ಗೆ ಸಂಬಂಧಿಸಿದ ಮಹಿಳಾ ಶೌಚಾಲಯ ರೋಗ ಹರಡುವ ಕೇಂದ್ರಗಳಾಗಿ ಮನೆಯ ಅಂಗಳ ಹಾಗೂ ರಸ್ತೆಗೆ ಶೌಚ ಹರಿಯುತ್ತಿದ್ದರೂ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಮೌನವಹಿಸಿದ್ದಾರೆ ಎಂದು ಬನ್ನೆಪ್ಪ ಅಗ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಣಸಗಿ (ನ.17) : ಪಟ್ಟಣದ 1 ಮತ್ತು 2ನೇ ವಾರ್ಡ್‌ಗೆ ಸಂಬಂಧಿಸಿದ ಮಹಿಳಾ ಶೌಚಾಲಯ ರೋಗ ಹರಡುವ ಕೇಂದ್ರಗಳಾಗಿ ಮನೆಯ ಅಂಗಳ ಹಾಗೂ ರಸ್ತೆಗೆ ಶೌಚ ಹರಿಯುತ್ತಿದ್ದರೂ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಮೌನವಹಿಸಿದ್ದಾರೆ ಎಂದು ಬನ್ನೆಪ್ಪ ಅಗ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಹಿಳಾ ಶೌಚಾಲಯ ಹಲವು ವರ್ಷಗಳ ಹಿಂದೆ ಬಯಲು ಶೌಚವಾಗಿತ್ತು. ಅಂದಿನ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಶೌಚಾಲಯದ ಸುತ್ತಲು ಗೋಡೆಯನ್ನು ನಿರ್ಮಿಸಿ ಮಹಿಳೆಯರಿಗೆ ಶೌಚಕ್ಕೆ ಹೋಗುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದರೂ ಕ್ರಮೇಣವಾಗಿ ಶೌಚಾಲಯದ ಕೊಠಡಿಗಳನ್ನು ನಿರ್ಮಿಸಿ ದಲಿತರ ಕೆರಿಯಲ್ಲಿರುವ ಬಾವಿಗೆ ಪೈಪ್ ಲೈನ್ ಮೂಲಕ ನೀರಿನ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ, ಕಳೆದ ಕೆಲವು ವರ್ಷಗಳ ಹಿಂದೆ ಗ್ರಾಪಂ ಕಾರ್ಯಾಲಯ ಮೇಲ್ದರ್ಜೆಗೇರಿದ ಪಟ್ಟಣ ಪಂಚಾಯ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಇಲ್ಲಿಯವರೆಗೂ ಮಹಿಳೆಯರ ಶೌಚಾಲಯ ನಿರ್ವಹಣೆ ಕಾಣದಾಗಿದೆ. ಸೇಫ್ಟಿಕ್ ಟ್ಯಾಂಕ್ ಭರ್ತಿಯಾಗಿ ಕನಿಷ್ಟಸೌಲಭ್ಯ ಇಲ್ಲದೇ ನಿರ್ವಹಣೆ ಕಾಣದೆ ಸೊಳ್ಳೆ, ಹಂದಿಗಳ ವಾಸಿಸುವ ತಾಣವಾಗಿ ಜಾಲಿಗಿಡಗಳು ಬೆಳೆದು ಶೌಚ ರಸ್ತೆಗೆ ಹರಿಯುತ್ತಿದೆ. ಶೌಚಾಲಯದ ಕೊಠಡಿಗಳಿಗೆ ಬಾಗಿಲು ಇಲ್ಲದೇ ದುರ್ವಾಸನೆ ಹೊರಹೊಮ್ಮುತ್ತಿದ್ದು, ಇಲ್ಲಿ ವಾಸಿಸುವ ಜನರು ನರಕಯಾತನೆ ಅನುಭವಿಸುವಂತಾಗಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಬಯಲು ಶೌಚಕ್ಕೆ ಹೊರಟ ಹೆಣ್ಮಕ್ಕಳಿಗೆ ಕೋಲು ಹಿಡಿದ ಅಜ್ಜಿಯರ ಕಾವಲು!
ಪಟ್ಟಣ ಪಂಚಾಯ್ತಿಯಿಂದ ಕೋಟ್ಯಾಂತರ ಅನುದಾನ ಬಂದಿದೆ. ಆದರೆ, ಮಹಿಳೆಯರ ಶೌಚಾಲಯಕ್ಕೆ 7 ಲಕ್ಷ ರು.ಗಳು ಮೀಸಲಿಡಲಾಗಿತ್ತು. ಆದರೆ, ಮೀಸಲಿಟ್ಟದುಡ್ಡು ಯಾವ ಮಹಿಳಾ ಶೌಚಾಲಯಕ್ಕೆ ಬಳಸಲಾಗಿದೆ ಎಂದು ಪ್ರಜ್ಞಾವಂತರು ಪ್ರಶ್ನಿಸಿದ್ದಾರೆ.
ಹುಣಸಗಿ ಪಟ್ಟಣದ 1 ಮತ್ತು 2ನೇ ವಾರ್ಡ್‌ಗೆ ಸಂಬಂಧಿಸಿದ ಮಹಿಳಾ ಶೌಚಾಲಯದ ಸೇಫ್ಟಿಕ್ ಟ್ಯಾಂಕ್ ಭರ್ತಿಯಾಗಿರುವುದರಿಂದ ಸಮಸ್ಯೆ ಕಾರಣವಾಗಿದೆ. ಆದಷ್ಟುಬೇಗ ಕ್ರಮ ತೆಗೆದುಕೊಳ್ಳಲಾಗುವುದು.
- ಪ್ರಕಾಶ ಬಾಗಲಿ, ಪಟ್ಟಣ ಪಂಚಾಯ್ತಿ ಅಧಿಕಾರಿ, ಹುಣಸಗಿ.
ಮಹಿಳಾ ಶೌಚಾಲಯದ ದುಸ್ಥಿತಿಯಿಂದ ಇಲ್ಲಿರುವ ಜನರು ಸಾಕಷ್ಟುತೊಂದರೆ ಅನುಭವಿಸುತ್ತಿದ್ದಾರೆ. ಮಹಿಳೆಯರು ಶೌಚಕ್ಕೆ ಹೋಗಲು ಇದೊಂದೆ ಶೌಚಾಲಯ ಇರುವುದರಿಂದ ಸಮಸ್ಯೆ ಎದರಿಸುತ್ತಿದ್ದೇವೆ. ಆದಷ್ಟುಬೇಗ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು.
- ಲಕ್ಷ್ಮೀಬಾಯಿ ಕಟ್ಟಿಮನಿ, ಹುಣಸಗಿ.